ಆಗೊಮ್ಮೆ ಈಗೊಮ್ಮೆ
ನಕ್ಕು, ನಂಗೆ ಹುಚ್ಚು ಹಿಡಿಸಬೇಡ.
ಮತ್ತದೇ ನಸುಕೋಪದಿಂದ
ನನ್ನ ಹೀಗೆ ನೀ ಕಾಡಿಸಬೇಡ..
ನಾ ನಿನ್ನ ಗೆಜ್ಜೆದನಿಯಲ್ಲೇ..
ನನ್ನ ಹೃದಯದ ಮಿಡಿತ ಕಂಡೆ.
ನಿನ್ನ ಒನಪು-ವ್ಯಯ್ಯಾರಕ್ಕೆ
ನನಗರಿಯದೇ ಮೋಹಗೊಂಡೆ.
ಈ ಮನ ಸದಾ ಗುನುಗುತಿದೆ
ಎಂತದೋ ಒಲವಿನ ಹಾಡು.
ತಾಳಲಾರೆ ನಾ.. ನಿನ್ನ
ಮೋಹಕೆ ಸೋತಮೇಲೂ,
ರಸಿಕನಾದರು ಸುಮ್ಮನಿರುವ ಪಾಡು.
ನಿನ್ನೊಲುಮೆಯ ತುಂಟನ
ಪ್ರೇಮಾಲಿಂಗನ ಬೇಡವೇನು?
ಹೇಳು ನಿನ್ನ ಹವಳದ
ತುಟಿ ಕಚ್ಚಿ ಮುದ್ದಿಸಿಬಿಡಲೇನು?
ನಿನ್ನೆಲ್ಲಾ..ಬಯಕೆಗಳ
ಒಂದೊಂದರಂತೆ ತೀರಿಸುವಾಸೆ,
ಆದರೆ ನೀ ಹೀಗೆ....
ಆಗೊಮ್ಮೆ ಈಗೊಮ್ಮೆ ಕಾಡಿಸದಿರು
ಒಲವೇ.. ಒಮ್ಮೆ ಕೇಳು ನನ್ನಾಸೆ..!!
ಬೆಂಗಳೂರಿನಲ್ಲಿ ನಿನ್ನೆ ಸುರಿದ ಚಿಟಪಟ ಮಳೆಗೆ ಬರೆದ ಕವಿತೆ...
ReplyDeleteಅಂತೂ ಉರಿಗಾಡಿನಲ್ಲಿ ಮಳೆ ಬಂದು ತಂಪಾಗಿ ಒಂದು ಕವಿತೆ ಹುಟ್ಟಿತು. ಇನ್ನಷ್ಟು ಮಳೆ ಬೀಳಲಿ. ನಿಮ್ಮ ಕವಿತೆಗೆ ವಸ್ತುವಾಗಲಿ
ReplyDeleteಬಿಸಿಲಿಗೆ ಬಳಲಿ ಬೆಂಡಾಗಿದ್ದ ಮನ ದಿನವೂ ಮಳೆಯ ನಿರೀಕ್ಷೆಯಲ್ಲಿದ್ದಂತೂ ನಿಜ. ಮಳೆ ಬಂದಾಗಿನ ಕ್ಷಣಗಳ ಮಧುರತೆಯನ್ನು ಕವಿತೆಯಲ್ಲಿ ಸೆರೆಹಿಡಿದಿಟ್ಟಿದ್ದೆ. ಕವಿತೆ ಮೆಚ್ಚಿದ ನಿಮಗೆ ಧನ್ಯವಾದಗಳು Seema Burde ರವರೇ..
ReplyDeleteನಿಜ ಪುಷ್ಣಣ್ಣ. ಇನ್ನಷ್ಟೂ ಮಳೆ ಬರಲಿ.... ಎಲ್ಲರ ಮನಸು ಸದಾ ತಂಪಾಗಿರಲಿ. ಮನದೊಳಗೆ ಹೊಸ ಹೊಸ ಆಸೆ ಚಿಗುರಲಿ. ಸದಾ ನಗುನಗುತಿರಲಿ.. ಎಂಬುದೇ ನನ್ನ ಆಶಯ... ಧನ್ಯವಾದಗಳು Pushparaj Chauta
ReplyDeleteಕವಿತೆ ಇಷ್ಟಪಟ್ಟ ಎಲ್ಲರಿಗೂ ಧನ್ಯವಾದಗಳು..
ReplyDelete