Saturday, December 29, 2012

ಪ್ರೀತಿಯ ಹಾಡು,


ಭಾವನೆಗಳ ತೇರಲ್ಲಿ.. ಪ್ರೀತಿಯ ಹಾಡು,
ಪ್ರೀತಿಗೆ ಪ್ರೀತಿನೇ ಸರಿಸಾಟಿ ನೋಡು.

ಇಳೆಗಾಗಿ ತಾನುರಿದು ಆ ಮುಗಿಲಲ್ಲಿ,
ಉಷೆಯಾಗಿ ಮಿನುಗುತಿದೆ ಪ್ರೀತಿಯ ಹಾಡು.
ರವಿಕಿರಣಕೆ ಕಾಯುವ ನೈದಿಲೆಯಲ್ಲಿ,
ಘಮ್ಮೆಂದಿದೆ ಹೂವಿನ ಪ್ರೀತಿಯ ಹಾಡು.

ನಸುನಾಚಿ ನಿಂತಾಗ ಕೆನ್ನೆಕೆಂಪಲ್ಲಿ,
ಮೂಡಿತ್ತು ನಲ್ಲೆಯ ಪ್ರೀತಿಯ ಹಾಡು
ಅವನೊಲವಿನ ಸತಿಗಾಗಿ ರಸಿಕತೆಯಲ್ಲಿ,
ಹೊಮ್ಮಿತು ನಲ್ಲನ ಪ್ರೀತಿಯ ಹಾಡು.

ಮಗುವನ್ನ ಮಲಗಿಸೋ ಲಾಲಿಹಾಡಲ್ಲಿ,
ನಲಿದಿತ್ತು ಅಮ್ಮನ ಪ್ರೀತಿಯ ಹಾಡು.
ಮುಗ್ಧತೆಯ ಸಿರಿಯಾಗಿ ತಾಯ ಮಡಿಲಲ್ಲಿ,
ನಗುಚೆಲ್ಲಿ ಹೊರಬಂತು, ಕಂದನ ಪ್ರೀತಿಯ ಹಾಡು.

18 comments:

  1. ಪದುಮಶಾಲಿ ಜೋಕಾಲಿ! ಜೋ ಲಾಲಿ!

    ReplyDelete
  2. ಹೌದು .. ಪ್ರೀತಿಗೆ ಎಲ್ಲೆ ಎಲ್ಲಿದೆ...? ಎಲ್ಲೆಲ್ಲೂ ಪ್ರೀತಿ ...ಎಲ್ಲದರಲ್ಲೂ ಪ್ರೀತಿ ..

    ReplyDelete
  3. Bellala Gopinath RaoApril 12, 2013 at 12:01 AM

    ರಾಘೂ
    ವಾಹ್ ಎಲ್ಲೆಲ್ಲೂ ಪ್ರೀತಿಯ ಘಮಲು
    ಈ ಕವನದಲ್ಲೂ

    ReplyDelete
  4. ಚೆನ್ನಾಗಿದೆ.

    ReplyDelete
  5. ಒಳ್ಳೆಯ ಪ್ರಯತ್ನ ರಾಘಣ್ಣ ! ಪ್ರೀತಿಯ ಹಾಡು ಮನ ಮುಟ್ಟುತ್ತದೆ. ಹೀಗೆ ಬರೆಯುತ್ತಿರಿ ,,, ಶುಭವಾಗಲಿ ನಿಮಗೆ.

    ReplyDelete
  6. ಪ್ರೀತಿಯನ್ನು ಬಹು ನಾಜೂಕಾಗಿ ನಿಮ್ಮ ಪದ್ಯದಲ್ಲಿ ಹಿಡಿದಿಟ್ಟಿದ್ದೀರಿ.... ಇನ್ನಷ್ಟು ಬರಹಗಳು ಬರಲಿ

    ReplyDelete
  7. Hu.. olavina sathi :)

    ReplyDelete
  8. Prashanth P KhatavakarApril 12, 2013 at 12:05 AM

    ತಾಯಿ ಮಗು ಪ್ರೀತಿಯ ಪದಗಳು ಚೆಂದ ಇದೆ .. :)

    ReplyDelete
  9. ತುಂಬಾ ಚೆನ್ನಾಗಿದೆ, ರಾಘವೇಂದ್ರರೆ. ಮೊದಲ ಸಾಲಲ್ಲೇ ಹೃದಯ ಗೆಲ್ಲುತ್ತೀರಿ.

    ReplyDelete
  10. ಸುಂದರ ಪ್ರಸ್ತುತಿ................

    ReplyDelete
  11. ಸು೦ದರ ಪ್ರಸ್ತುತಿ ..ಚ೦ದದ ಸಾಲುಗಳು ..ಇಷ್ಟವಾದವು

    ReplyDelete
  12. ಬಹಳ ಚೆನ್ನಾಗಿದೆ ವಾತ್ಸಲ್ಯ ಹರಿಸಿದ ನಿಮ್ಮ ಕವನ.........

    ReplyDelete
  13. good poem once again

    ReplyDelete
  14. ಮುಗ್ಧವಾದ ಕವಿತೆ, ಪ್ರೀತಿಯ ವಿವಿಧ ಆಯಾಮಗಳನ್ನು ರುಜುವಾತು ಮಾಡುವ ಪ್ರಯತ್ನ ಮಾಡಿದೆ. ಕವಿಮನದ ಕಲ್ಪನೆಗಳಿಗೆ ರೆಕ್ಕೆ ನೀಡಿ ತೇಲಿಸಿದ್ದೀರಿ. ಪ್ರೀತಿಯ ಇನ್ನಷ್ಟು ಮುಖಗಳಿಗೆ ಬಣ್ಣ ಹಚ್ಚಬಹುದಿತ್ತೇ? ಎನಿಸಿತು. ಚೆಂದದ ಕವಿತೆ.

    ReplyDelete
  15. ಧನ್ಯವಾದಗಳು... Prashanth P Khatavakar, Rajendra B.Shetty, Chinmay Mathapati, Ramachandra Shetty

    ReplyDelete
  16. ಖಂಡಿತಾ..... ಇನ್ನಷ್ಟೂ ಬರಹಗಳನ್ನು ಬರೆಯಲು ಪ್ರಯತ್ನಿಸುತ್ತಿರುತ್ತೇನೆ. ನಿಮ್ಮ ಸಹಕಾರ ಹೀಗೆ ಇರಲಿ... ಧನ್ಯವಾದಗಳು Pravara Kottur

    ReplyDelete
  17. ಪ್ರೀತಿಯ ಭಾವನೆಗಳು.... ಸುಂದರ ಕಲ್ಪನೆ. ಮನಸಿಗೆ ಹಿತ ನೀಡುವ ಪ್ರೀತಿ... ನೋವು ನೀಡುತ್ತದೆ ಎಂದು ಹೇಳೋದು ನಿಜ. ನನಗೂ ಈ ಪ್ರೀತಿಯ ಇನ್ನಷ್ಟು ಮುಖಗಳಿಗೆ ಬಣ್ಣ ಹಚ್ಚಬೇಕೆನಿಸಿದ್ದು ನಿಜ. ನಿಮ್ಮ ಅಭಿಪ್ರಾಯಕ್ಕೆ ತುಂಬು ಧನ್ಯವಾದಗಳು ಮಿತ್ರ... Prasad V Murthy

    ReplyDelete