Thursday, May 19, 2011

ಮರೆಯಲಾರೆನು


ಮರೆಯಲಾರೆನು ಚೆಲುವೆ,
ನಿನ್ನ ನಾ ಮರೆಯಲಾರೆನು...

ನಿನ್ನ ಬೊಗಸೆ ಕಂಗಳ ತುಂಬಾ
ಕಂಡು ಹೊನಲು ಬೆಳಕಿನ ಪ್ರೀತಿ
ಮನಸ ತೆಲಿಸಿತ್ತು ನಿನ್ನ ಪ್ರೀತಿಯ ಅಮಲು
ಹಗಲು-ರಾತ್ರಿಯೆನ್ನದೆ ಜಗವನ್ನೇ
ಮರೆತು ನಿನ್ನ ದನಿಯನ್ನೇ ಕೇಳುವಾಗ
ಮನಸೇ ಬರಲಿಲ್ಲ ಮಾತು ಮುಗಿಸಲು.

ನನಗೂ ಗೊತ್ತು ಬಿಡು ಒಲವೇ,
ಮನೆಯವರ ಒತ್ತಾಯಕ್ಕೆ ನೀನಾಗುತ್ತಿರುವುದು
ನಿನಗೆ ಇಷ್ಟವಿರದ ಮದುವೆ ..
ಅದು ಹೇಗೆ ಸಮಾಧಾನ ಮಾಡಲಿ
ಗೆಳತಿ ನಿನಗೆ ನಾನು. ..
ನನ್ನದೂ ಕೂಡ ನೊಂದ ಮನವೇ..!!!

ನಿನ್ನ ಪ್ರೀತಿಯ ಅಮೃತ ಸಾಗರದಲ್ಲಿ
ನಾ ಪಯಣಿಸಲು ಜೊತೆಯಾಗಿ
ಬದುಕೋಕೆ ದೇವರೇ ಬಿಡಲಿಲ್ಲ
ಯಾವ ಜನುಮದ ಪಾಪವೋ
ಏನೋ ನಾ ಕಾಣೆ, ಏನು ಮಾಡಲಿ
ಪ್ರೀತಿ ಪಯಣದ ಅದೃಷ್ಟ ನಮಗಿಲ್ಲ...

5 comments:

  1. ಆಲ್ ದಿ ಬೆಸ್ಟ್ sir

    ReplyDelete
  2. Nimma eee Mareyalarenu nijakku tumba chennagide. A kshanagala bhavaneganu tumba chennagi, simple agi barediddira...

    ReplyDelete
  3. ಮರೆಯಲಾಗದ ಪ್ರೀತಿ ಚೆನ್ನಾಗಿದೆ ,ಈ ಪ್ರೀತಿಯೇ ಹೀಗೆ ಸಿಕ್ಕರೆ ಸ್ವರ್ಗ ,ಸಿಗದಿದ್ದರೆ ನರಕ

    ReplyDelete
  4. Thank U..
    Nandi, Padma and ಪ್ರಮೋದ್ ಶೆಟ್ಟಿ

    ReplyDelete
  5. Avalu Bardagidda maleyali male surisi Anthrajalavagilisi Horate Bittalu..Avala Mareyalarenu...

    ReplyDelete