Sunday, September 25, 2011

ಪ್ರೀತಿಯ ಡ್ಯಾಡಿ..

Align Center
ಯಾವ ಜನ್ಮದ ಪುಣ್ಯವೋ ಏನೋ
ನೀವಾಗಿದ್ದಿರಿ ನನ್ನ ಪ್ರೀತಿಯ ಡ್ಯಾಡಿ..

ನನ್ನ ಬದುಕಿನುದ್ದಕ್ಕೂ ಪೂಜಿಸುವ
ತಾಯಿಯ ನಂತರದ ದೇವರು ನೀವು
ದಿನವೂ ರಾಜಕುಮಾರನ ಕಥೆಯ ಹೇಳಿ
ಕನಸಿನ ಲೋಕಕ್ಕೆ ಕರೆದೊಯ್ಯುವಿರಿ ನೀವು
ಬಾರದು ನಿದಿರೆ, ನಿಮ್ಮ ಮಡಿಲಲ್ಲಿ ಮಲಗದೇ
ಇಡೀ ಜಗವೇ ಬೆರಗಾಗುವಂತಹ
ತಂದೆ-ಮಗಳ ಅಪರೂಪ ಜೋಡಿ ನಾನು-ನೀವು

ಅಮ್ಮ ಗುಮ್ಮನ ಹಾಗೆ ಹೆದರಿಸುವಾಗ,
ಅಮ್ಮನಿಗೆ ಗೊತ್ತಾಗದ ಹಾಗೆ ಹೊರಗಡೆ
ಕರೆದೊಯ್ದು, ಕೇಳಿದೆಲ್ಲವನ್ನು ಕೊಡಿಸಿ,
ಚಂದಿರನ ಬೆಳಕಿನಲಿ ಊಟ ಮಾಡಿಸುತ
ಆಡಿಸುತ್ತಿದ್ದ ಕೂಸುಮರಿಯಾಟ...
ಆಟವಾಡುವ ಖುಷಿ ಖುಷಿಯಲ್ಲೂ
ನೀವು ನನಗೆ ಹೇಳಿ ಕೊಡುತ್ತಿದ್ದಿರಿ, ನಾ
ಮರೆಯಲಾರದ ಬದುಕು, ಶಿಸ್ತು,ನೀತಿ ಪಾಠ..

ನನ್ನ ಪುಟ್ಟ ಮಗಳ ತುಂಟಾಟ ಕಂಡಾಗ
ಆಗಿನ ನನ್ನ ತುಂಟಾಟವನು ನೋಡಿ,
ನೀವು ಪಡುತ್ತಿದ್ದ ಸಂಭ್ರಮವ ನೆನೆದಾಗ
ನಾನೋಡಿ ಬಂದು ನಿಮ್ಮ ಬೆಚ್ಚನೆದೆಯಲ್ಲಿ
ಮುಖವಿಟ್ಟು ನಿಮ್ಮನ್ನು ಬಿಗಿದಪ್ಪುವಾಸೆ ...
Really I miss you ... Daddy...!!!

9 comments:

  1. ತಂದೆ - ಮಗಳ ಪ್ರೀತಿಯ ಹೂರಣ

    ReplyDelete
  2. ಡ್ಯಾಡಿ.. my lovely ಡ್ಯಾಡಿ..
    lovely

    ReplyDelete
  3. Nimma ee kavanada salugalu tumba chennagide. aadre nange ee tara nanna tande preethi sigalilla. Nim Kavana Odhi nanagu inta tande irabaradagitta anta anisutte..

    ReplyDelete
  4. raghu sir,
    i really missed my daddy
    every time i remembering my appa.

    I MISS U LOT APPA............! I LOVE U APPA...........!

    ReplyDelete
  5. once again thank raghu sir really i happy to say this after read this i miss my pappa i love you daddy ... we miss you all...

    Raghu sir its really Superb thank you sir

    ReplyDelete
  6. We want you create at least once in a week please do it sir.........its our request...

    ReplyDelete
  7. ಚೆನ್ನಾಗಿದೆ ಕವಿತೆ ,ಮೊದಲ ಒಂದೇ ಒಂದು ಪದ "ಡ್ಯಾಡಿ" ಕವನದ ತೂಕವನ್ನೇ ಕಡಿಮೆ ಮಾಡಿತು ,ಕನ್ನಡದ ಪದ ಉಪಯೋಗಿಸಿದರೆ ಚೆನ್ನಾಗಿತ್ತು

    ReplyDelete
  8. Thank U.... ನಂದಿ ಜೆ.ಹೂವಿನಹೊಳೆ, meena, MOHAMMED RAFIULLA and ನ್ನೋಡಿಗುತ್ತು ಪ್ರಮೋದ್ ಶೆಟ್ಟಿ

    ReplyDelete
  9. ಒಬ್ಬ ಮಗಳ ಮನದಲ್ಲಿ ತನ್ನ ಡ್ಯಾಡಿಯ ಮೇಲಿರುವ ಪ್ರೀತಿ ಮತ್ತು ಭಯ ಮಿಶ್ರಿತ ಆತ್ಮೀಯತೆಯನ್ನು ಸೊಗಸಾಗಿ ತೆರೆದಿಟ್ಟಿದೆ ಕವಿತೆ.. ತನ್ನಪ್ಪನ ಮೇಲೆ ಆಕೆಗಿರುವ ಪ್ರೀತಿಯ ನವಿರಾದ ಭಾವಗಳನ್ನು ತುಂಬಾ ಅಚ್ಚುಕಟ್ಟಾಗಿ ಒಂದು ಚೌಕಟ್ಟು ನೀಡಿ ಸುಂದರ ಕವಿತೆಯಾಗಿಸಿದ್ದೀರಿ.. ತನ್ನ ಮಗುವಿನೊಂದಿಗೆ ತಾನೂ ಮಗುವಾಗಿ ತನ್ನಪ್ಪನೇ ಬಂದು ನನ್ನನ್ನು ಅಂಬೆಗಾಲಿನ ಮೇಲೆ ನಡೆಸಬೇಕೆಂಬ ಆಕೆಯ ಕಲ್ಪನೆಗಳಲ್ಲಿ ನವ್ಯತೆ ಮತ್ತು ಕಲ್ಪನೆ ಮನಸ್ಸನ್ನು ಗೆಲ್ಲುತ್ತದೆ.. "ಅಪ್ಪ-ಮಗಳ" ಸುಂದರ ಸಂಭಂದವನ್ನು ಹೂರಣವಾಗಿ ನಮಗೆಲ್ಲ ಉಣಬಡಿಸಿದ್ದೀರಿ, ತುಂಬಾ ರಸವತ್ತಾಗಿ ಬಂದಿದೆ..:))) ತುಂಬಾ ಹಿಡಿಸಿತು ಕವಿತೆ ರಾಘವೇಂದ್ರರೆ..:)))

    ಒಂದು ಸಲಹೆ, ಆಂಗ್ಲ ಪದಗಳು ಕವಿತೆಯ ತೂಕವನ್ನು ಕಡಿಮೆ ಮಾಡುತ್ತವೆ, ಅದಕ್ಕೆ ಸಮಾನಂತರವಾದ ಕನ್ನಡ ಪದಗಳನ್ನು ಬಳಸಿ.. ಅರ್ಥಪೂರ್ಣವಾದ ಕವಿತೆ ಇನ್ನಷ್ಟು ಕಳೆಗಟ್ಟುತ್ತದೆ..

    ReplyDelete