ಯಾಕೆ.. ನನ್ನ ಚಿನ್ನು ಮರಿ...
ತುಂಬಾ ಮುನಿಸಿಕೊಂಡಿದ್ದಿಯಾ..?
ಮುನಿಸಿಕೊಂಡರೆ ನೀನು, ಕಾಣೋದು
ಥೇಟು ನಿನ್ನ ಅಮ್ಮನ ಹಾಗೇ.
ಅವಳು ಕೂಡ ಹೀಗೆ ಒಮ್ಮೆ
ಹೊಸ ಸೀರೆ ತಂದಿಲ್ಲವೆಂದು, ನಿನ್ನಂತೆ
ಮೂರು ದಿನ ಮುನಿಸಿಕೊಂಡಿದ್ದಳು.
ಹೊಸದಾಗಿ ಮದುವೆಯಾದಾಗ ನಿನ್ನ
ಅಮ್ಮನನ್ನು ಕೂಡ ನಿನ್ನಂತೆ ಎತ್ತಿಕೊಳ್ಳುತ್ತಿದ್ದೆ,
ಆದರೆ ಈಗ ಅದಾಗುವುದಿಲ್ಲ ಬಿಡು, ಕಾರಣ
ಈಗ ಅವಳಾಗಿದ್ದಾಳೆ ಭಟ್ಟರ ಬೇಕರಿ ಬನ್ನು,
ಅವಳ ತೂಕ ಸೀದಾ ಒಂದು ಟನ್ನು.
ನಿನಗೆ ಏನು ಬೇಕು ಹೇಳು ಕೂಸೇ,
ತಪ್ಪದೆ ಕೊಡಿಸುವೆನು ನಿನಗೆ.. !!
ಐಸ್ ಕ್ರೀಮೋ, ಚಾಕಲೆಟೋ.,
ನನ್ನ ಮುದ್ದು ಬಂಗಾರು ಅಲ್ವಾ..
ಹಠ ಮಾಡದಿರು ಚಿನ್ನಾ .. ಬಂದುಬಿಡು
ಬೇಗ... ಎತ್ತಿಕೊಳ್ಳುವೆ ನಿನ್ನಾ..
ತುಂಬಾ ಮುನಿಸಿಕೊಂಡಿದ್ದಿಯಾ..?
ಮುನಿಸಿಕೊಂಡರೆ ನೀನು, ಕಾಣೋದು
ಥೇಟು ನಿನ್ನ ಅಮ್ಮನ ಹಾಗೇ.
ಅವಳು ಕೂಡ ಹೀಗೆ ಒಮ್ಮೆ
ಹೊಸ ಸೀರೆ ತಂದಿಲ್ಲವೆಂದು, ನಿನ್ನಂತೆ
ಮೂರು ದಿನ ಮುನಿಸಿಕೊಂಡಿದ್ದಳು.
ಹೊಸದಾಗಿ ಮದುವೆಯಾದಾಗ ನಿನ್ನ
ಅಮ್ಮನನ್ನು ಕೂಡ ನಿನ್ನಂತೆ ಎತ್ತಿಕೊಳ್ಳುತ್ತಿದ್ದೆ,
ಆದರೆ ಈಗ ಅದಾಗುವುದಿಲ್ಲ ಬಿಡು, ಕಾರಣ
ಈಗ ಅವಳಾಗಿದ್ದಾಳೆ ಭಟ್ಟರ ಬೇಕರಿ ಬನ್ನು,
ಅವಳ ತೂಕ ಸೀದಾ ಒಂದು ಟನ್ನು.
ನಿನಗೆ ಏನು ಬೇಕು ಹೇಳು ಕೂಸೇ,
ತಪ್ಪದೆ ಕೊಡಿಸುವೆನು ನಿನಗೆ.. !!
ಐಸ್ ಕ್ರೀಮೋ, ಚಾಕಲೆಟೋ.,
ನನ್ನ ಮುದ್ದು ಬಂಗಾರು ಅಲ್ವಾ..
ಹಠ ಮಾಡದಿರು ಚಿನ್ನಾ .. ಬಂದುಬಿಡು
ಬೇಗ... ಎತ್ತಿಕೊಳ್ಳುವೆ ನಿನ್ನಾ..
NICE
ReplyDeleteಚಂದದ ಕವಿತೆ... ಮೊದಲು ಕವಿತೆ ಪ್ರಕಟಿಸಿ ನಂತರ ನಿಮ್ಮ ಬ್ಲಾಗ್ ಲಿಂಕ್ ಕೊಡಿ. ಆಗ ನಿಮ್ಮ ಕವಿತೆಯನ್ನು ಓದುವವರ ಸಂಖ್ಯೆ ಹೆಚ್ಚಾಗುತ್ತದೆ. ವಂದನೆಗಳು...
ReplyDeleteಬೇಗ ಎತ್ತಿಕೊಳ್ಳಿ, ಇಲ್ಲವಾದರೆ ಒಂದು ಟನ್ನಿನ ಬನ್ನು ಎತ್ತಲಾದೀತೇ?
ReplyDeleteನನ್ನ ಮುದ್ದು ಬಂಗಾರು ಅಲ್ವ ನೀವು?
ನಿಮ್ಮ ಕವಿತೆ ಪೂರ್ತಿ ಗೋಡೆಯ ಮೇಲೆ ಹಾಕಿ,
ಮೋಹನ್ ಅಣ್ಣ ಹೇಳ್ದಂಗೆ ಆಮೇಲೆ ಕೊಂಡಿ ಕೊಡಿ..
ಕವಿತೆ ಓದಿ ಎತ್ತಿಕೊಳ್ಳುವವರು ಹೆಚ್ಚಾಗುತ್ತಾರೆ...!
Tnx. Manju. and Mohan Kollegala..
ReplyDeletenanna...Joku....nanage.. helta idira.. thanku .. pushparaj
ReplyDelete