ಓ ಮಲ್ಲಿಗೆ, ನೀ ಮೆಲ್ಲಗೆ
ಬಾಡುತಿರುವೆ ಯಾಕೆ..?
ನಿನ್ನ ಮುಡಿಯಲು ನನ್ನ
ರಾಣಿಯಿಲ್ಲವೆಂದು ಕೊರಗುವೆಯೇಕೆ..?
ಚಿಂತೆ ಮಾಡದಿರು ಮಲ್ಲಿಗೆ,
ನನ್ನವಳು ಬರುವಳು ತಪ್ಪದೆ
ಮುಂದಿನ ಹುಣ್ಣಿಮೆಯೊಳಗೆ..!!
ಓ ತಿಂಗಳೇ, ಬೆಳದಿಂಗಳೇ,
ನೀ ಮೋಡದ ಮರೆಯದೆಯೇಕೆ..?
ನನ್ನ ಹೃದಯದ ಪಟ್ಟದ ರಾಣಿ,
ಇರುವಳು ತವರೂರಿನಲಿ,
ಅವಳಿಗೆ ಪದೆಪದೆ ನನ್ನದೇ ಕನವರಿಕೆ.
ಮಲಗಿಸು ಅವಳನ್ನು ಹೇ ಚಂದ್ರಮ,
ನನ್ನ ಕನಸುಗಳೇಲ್ಲವನೂ ಹೊತ್ತು
ಹೊದಿಸಿ, ನೀನಾಗು ಬೆಳದಿಂಗಳ ಹೊದಿಕೆ.
ಯಾಕಾದರೂ ಬಂದಿತೋ,
ಈ ಆಷಾಡ ಮಾಸ.
ನನ್ನವಳು ಇರದ ಮನೆ,
ಈಗ ಅದಾಗಿದೆ ಕಾಲಕಸ.
ಮನ್ಮಥನ ಶಾಪವೋ ಏನೋ,
ತಾಳಲಾರೆ ನಾ ಈ ವಿರಹ.
ಕಾಯಿಸದಿರು ನಲ್ಲೆ ಇನ್ನು,
ಬೇಗ ಬಂದುಬಿಡು ಸನಿಹ.
nice boss
ReplyDeleteThank U .. Kumar..
ReplyDeleteತುಂಬಾ ಚೆಂದದ ಕವಿತೆ
ReplyDeleteNijakkoo chennagide., Chandiranige heltiralla .. adu kooda tumba lovley agide...
ReplyDeleteThank U.. Pramod and Padma Priya
ReplyDeletevery nice .......o malli ge nanage istavaayithu..
ReplyDeletevery nice l like it
ReplyDeleteಆ ಹುಣ್ಣಿಮೆ ಬೇಗ ಬರಲಿ... ಚೆನ್ನಾಗಿದೆ ಗೆಳೆಯಾ
ReplyDeleteಒಂದು ತಿಂಗಳು ಸಹಿಸಲಾಗದೆ ....ಇಷ್ಟೊಂದು ಪ್ರೀತಿಸಲ್ಪಡುವ ಅವಳಂತೂ ಪುಣ್ಯವಂತೆ
ReplyDeleteಓಹೋ ನಿಮಗೆ ಒಂದು ತಿಂಗಳು ಸಹಿಸಲಾಗದೆ ..!
ReplyDelete.ಇಷ್ಟೊಂದು ಪ್ರೀತಿಸಲ್ಪಡುವ ಅವಳಂತೂ ಪುಣ್ಯವಂತೆ......ಕವಿತೆ ತುಂಬಾ ಚೆಂದವುಂಟು ರಾಘಣ್ಣ
nice kavana geleya.... kp it up....
ReplyDeleteಮಲ್ಲಿಗೆಯ ಪರಿಮಳ ಹೆಚ್ಚೆಚ್ಚು ಪಸರಿಸಲಿ ನಿಲುಮೆಯಲ್ಲಿ:)
ReplyDeleteನನ್ನ ಕನಸುಗಳೇಲ್ಲವನೂ ಹೊತ್ತು
ಹೊದಿಸಿ, ನೀನಾಗು ಬೆಳದಿಂಗಳ ಹೊದಿಕೆ.
ಸುಂದರ ಸಾಲುಗಳು :)
ತುಂಬಾ ಸುಂದರವಾಗಿದೆ.. :) :)
ReplyDeleteನಿಮ್ಮ ಮನದ ಭೇಗುದಿ ಚನ್ನಾಗಿ ವ್ಯಕ್ತವಾಗಿದೆ. ಮತ್ತಷ್ಟು ಗಂಭೀರವಾಗಿ ಬರೆಯುವುದಕ್ಕೆ ಪ್ರಯತ್ನಿಸಿ. ಶುಭವಾಗಲಿ.
ReplyDeleteವಸಂತದಾಗಮನದ ಹೊಸ್ತಿಲಲ್ಲಿ ನಿಮ್ಮೀ ಮನದ ಬೇಗುದಿ ಕಳೆದು ಹಸಿರು ಚಿಗುರಲಿ ಬದುಕಲಿ. ಚೆನ್ನಾಗಿದೆ ಭಾವಸ್ಪುರಣ ರಾಘವೇಂದ್ರ.
ReplyDeleteಖಂಡಿತಾ.. ಪ್ರಯತ್ನಿಸುತ್ತೇನೆ.. ಪ್ರಯತ್ನಿಸುತ್ತಲೇ ಇರುತ್ತೇನೆ... ಧನ್ಯವಾದಗಳು ಮಿತ್ರ ಸತೀಶ್ ಡಿ.ಆರ್.ರಾಮನಗರ.
ReplyDeleteಧನ್ಯವಾದಗಳು ಮಿತ್ರ.. Vasantha B Eshwaragere... ಮತ್ತು ಕನ್ನಡ ಬಳಸಿದ್ದಕ್ಕೂ ಮತ್ತೊಂದು ಧನ್ಯವಾದಗಳು... ಕನ್ನಡ ಬಳಸಿ.. ಕನ್ನಡ ಉಳಿಸಿ.
ReplyDeleteಪುಣ್ಯವಂತೆ ಇರಬಹುದೇನೋ... ಧನ್ಯವಾದಗಳು... Pramod Shetty
ReplyDeleteಹುಣ್ಣಿಮೆಗಿಂತ ಮುಂಚೆ .. ನನ್ನವಳು ಸಿಗಲಿ.. ಧನ್ಯವಾದಗಳು ಗೆಳೆಯ Hussain Muhammed...
ReplyDeleteತುಂಬಾ ಚೆನ್ನಾಗಿದೆ.. ಕೆಲವು ಪದಗಳಲ್ಲಿ ಬದಲಾವಣೆ ಮಾಡಿ ಇದನ್ನು ಸುಂದರ ಹಾಡಾಗಿ ಮಾಡಬಹುದು.. ಸ್ವಲ್ಪ ಪ್ರಯತ್ನ ಮಾಡಿ.. ನಿಮಗೆ ಶುಭವಾಗಲಿ.. :)
ReplyDeleteಅನುರಾಗದ ಭಾವ., ನಿಮ್ಮ ಸಾಲುಗಳಲ್ಲಿ ಅಕ್ಷರಗಳಾಗಿ ಅನುವಾದವಾಗಿದೆ.. ತುಂಬಾ ಹಿಡಿಸಿತು., ಹೀಗೇ ಬರೆಯುತ್ತಿರಿ.., ಶುಭವಾಗಲಿ..
ReplyDeleteಏನೀ ವಿರಹ ವೇದನೆ,
ReplyDeleteಬರೀ ನೋವ ಯಾತನೆ.
ಚೆನ್ನಾಗಿದೆ. ಪುಣ್ಯಾ ಮಾಡಿದ್ದಾಳೆ ನಿಮ್ಮಾಕೆ.
ನಿಮ್ಮ ಹಾರೈಕೆಗೆ ಧನ್ಯವಾದಗಳು.. ಗೆಳೆಯ Pramod Pammi
ReplyDeleteಧನ್ಯವಾದಗಳು Prashanth P Khatavakar.. ಈಗಾಗಲೇ... ನಾನೇ ಸ್ವತಃ ಸಂಗೀತ ಕಾಂಪೋಸ್ ಮಾಡಿ, ಹಾಡಲು ಕೂಡ ಪ್ರಯತ್ನ ಮಾಡಿದ್ದೇನೆ. ಸಧ್ಯದಲ್ಲೆ ಅವುಗಳನ್ನು ಎಂ.ಪಿ3 ಆಡಿಯೋ ಫೈಲ್ ಗಳನ್ನು ಅಪ್ ಲೋಡ್ ಮಾಡುತ್ತೇನೆ. ಧನ್ಯವಾದಗಳು ಮತ್ತೊಮ್ಮೆ...
ReplyDeleteಕವಿತೆ ಮೆಚ್ಚಿದ ತಮಗೆ ಧನ್ಯವಾದಗಳು Manju HP
ReplyDeleteಧನ್ಯವಾದಗಳು ಪುಷ್ಪಣ್ಣ.. Pushparaj Chauta
ReplyDeleteಮೊದಲೆರಡು ಸಾಲುಗಳೇ ಪದಪುಂಜಗಳ ಸಂಜಸವಾಗಿದೆ :)
ReplyDelete