ಏನು ಹೇಳಲಿ.. ಗೆಳತಿ
ಹೇಗೆ ಬಣ್ಣಿಸಲಿ ನನ್ನೊಡತಿ..
ಹಸಿ ಹೆರಳನು ಆರಿಸುತ ನಿಂತೆ
ನೀ ಎಳೆ ಬಿಸಿಲಲಿ..
ಅಲಂಕಾರ ಪ್ರಿಯೆ ನೀನು,
ಕನ್ನಡಿ ಮುಂದೆ ನಿಲ್ಲಲು ಒಳಗೆ ಬಂದೆ.
ನಿನ್ನೊಲುಮೆಯ ತುಂಟ ನಾನು,
ನಿನ್ನ ಅಲಂಕಾರ ನೋಡಲು ಹಿಂದೆಯೇ ಬಂದೆ.
ನೀನಾಗಿದ್ದೆ ಬಾದಾಮಿ ಬಣ್ಣದ,
ನೀಲಿ ಅಂಚಿನ ಸೀರೆಯ ನೀರೆ.
ಅದ ಕಂಡೆ ಇರಬೇಕು .. ಮನದಲಿ
ಹರಿದಿದೆ ಪ್ರೀತಿ ಭಾವದ ರಸಧಾರೆ.
ನಿನ್ನ ಗುಲಾಬಿಯಂತ ತುಟಿಗಳನು
ಇನ್ನೂ ಕೆಂಪಾಗಿಸಿದೆ ಲಿಪ್ ಸ್ಟಿಕ್ ಹಚ್ಚಿ.
ನನ್ನ ಮನ ನಲಿದಿತ್ತು.. ಖುಷಿ ಹೆಚ್ಚಿ.
ಮ್ಯಾಚಿಂಗ್ ನೆಪದಲ್ಲಿ ಉಗುರುಗಳಿಗೂ
ನೀಲಿ ಬಣ್ಣದ ನೈಲ್ ಪಾಲಿಶ್ ತೀಡಿ.
ಸೂಜಿಗಲ್ಲಿನಂತೆ ಸೆಳೆದಿದೆ ನನ್ನನು ನಿನ್ನ
ಕಣ್ಣಂಚಲಿ ತೀಡಿದ ಕಾಡಿಗೆಯ ಮೋಡಿ.
ದೇವರು ಹೆಣ್ಣಿಗೆಂದೆ ಸೌಂದರ್ಯ ಕೊಟ್ಟ.
ಗಂಡಿಗೆ ಸೌಂದರ್ಯ ಸವಿವ ರಸಿಕತೆಯ ಕೊಟ್ಟ.
ನಾ ಅವಳ ಅಂದಕೆ ಸೋತು
ಕೆನ್ನೆಗೊಂದು ಮುತ್ತು ಕೊಟ್ಟು ಬಿಟ್ಟೆ.
ಮೇಕಪ್ ಹಾಳಾಯಿತೆಂದು ಅವಳ ಚಂಡಿ
ಅವತಾರಕ್ಕೆ ಹೆದರಿ ಅಲ್ಲಿಂದ ಹೊರಟುಬಿಟ್ಟೆ.
ಸುಂದರವಾಗಿದೆ ನಿಮ್ಮ ಮನದನ್ನೆಯ ಮೇಕಪ್ ಪುರಾಣ.. ಕವಿತೆ ತೆರೆದುಕೊಳ್ಳುತ್ತಲೇ ನವಿರಾದ ಪ್ರತಿಯ ಭಾವಗಳೂ ಕುಣಿಯುತ್ತವೆ.. ಕಡೆಯ ಸಾಲುಗಳಲ್ಲಿ ಕವಿತೆಗೆ ಹಾಸ್ಯದ ಸ್ಪರ್ಶ ನೀವು ಮಾಡಿದ ಹೊಸ ಪ್ರಯೋಗ, ಅದು ಮನಸ್ಸಿನಲ್ಲುಳಿಯುತ್ತದೆ..:))) ಚೆಂದವಾದ ಕವಿತೆ..
ReplyDeleteಮೇಕಪ್ ಚಲುವೆಯ ಅವತಾರಕ್ಕೆ ಹೆದರಿ ಓಡಿ ಹೋಗ ಬೇಕಾಗದ್ದು ವಾಸ್ತವ ಜೀವನಕ್ಕೆ ಕನ್ನಡಿ ಹಿಡಿದಿದೆ.
ReplyDeletevery nice....
ReplyDeletenice...
ReplyDeletehi raghu kavana chennagidhe last stanza commedy chennagidhe
ReplyDeleteThank U .. Prasad
ReplyDeletemake up .. cheluveya avatarakke .. odi hogabeko, make up jasti aytendu odi hogabeku.. nanage gottaguttilla... Dhanyavada.. @Banavasi..Somshekar
ReplyDeleteThank U .. very much.. Maha lakshmi akka..
ReplyDeleteThank .. U .Sachin..savadatti
ReplyDeleteHa..ha..ha.. Tnx.. Padma. Kaviteyalli .. bare romance onde irodu beda.. anta nane comedy touch kottidini.. hosa tara.. chennagide alwa...
ReplyDeleteSuper
ReplyDeleteಬಹಳ ರಸಿಕರು ನೀವು....
ReplyDeleteಅವಳು ತನ್ನ ದೇಹಕ್ಕೆ ಅಲಂಕಾರ ಮಾಡಿ ನಿಮ್ಮ ಮನ ತಣಿಸಿದರೆ ,
ನೀವು ಪದಗಳಿಗೆ ಅಲಂಕಾರ ಮಾಡಿ ನಮ್ಮ ಹೃದಯವನ್ನೇ ಗೆದ್ದಿದೀರ.
ಸೂಪರ್ ರಾಘಣ್ಣ :)
ReplyDeleteರಸಿಕ ಮಹಾಮುನಿ! ಅಲಂಕಾರ ಚೆನ್ನಾಗಿದೆ 'ಪದುಮ'ಶಾಲಿಯವರೇ.
ReplyDeleteಅಲಂಕಾರ ಸುಂದರ !!!!!
ReplyDeleteರಸಿಕಪ್ರಿಯರೇ ನಿಮ್ಮ ಕವನದ ರಸಿಕತನ ನಮ್ಮ ಮನವನ್ನು ರಂಜಿಸಿದೆ.
ReplyDeleteನಿಮ್ಮ ಕಾಮೆಂಟಿಗೆ ಧನ್ಯವಾದಗಳು ಮಿತ್ರ Paresh Saraf
ReplyDeleteಏನು ಪುಷ್ಪಣ್ಣ... "ರಸಿಕ ಮಹಾಮುನಿ" ಎಂದೇ ಕರೆದುಬಿಟ್ಟಿರಿ. ಕಾವ್ಯ ರಸಿಕೆಯ ಸವಿದು ಚೆನ್ನಾಗಿದೆ ಎಂದುಸುರಿದ ತಮಗೆ ಧನ್ಯವಾದಗಳು ಮಿತ್ರ Pushparaj Chauta
ReplyDeleteಓದುಗನು ತನ್ಮಯಲಾಗಲೆಂದು ವರ್ಣಿಸುವ ಪದಗಳಲ್ಲಿ ರಸಿಕೆಯ ಸೊಗಡನ್ನು ತುಂಬಲೇ ಬೇಕಾಗುತ್ತೆ ಅಲ್ಲವೇ.. ಗಣೇಶಣ್ಣ. ಈ ಅಲಂಕಾರ.. ನಿಮ್ಮ ಹೃದಯವನ್ನು ಗೆದ್ದಿತೆಂದು ಹೇಳಿದಿರಿ. ಅದಮ್ಯ ಧನ್ಯವಾದಗಳು ನಿಮಗೆ... Ganesh Khare
ReplyDeleteಸ್ಣೇಹಿತರೇ.. ಮೇಕಪ್ ಹಾಳಾಯಿತೆಂದು ಅವಳ ಚಂಡಿ
ReplyDeleteಅವತಾರಕ್ಕೆ ಹೆದರಿ ಅಲ್ಲಿಂದ ಹೊರಟುಬಿಟ್ಟೆ. ಅಂದಿದ್ದಾರೆ, ನಂತರ ಮರಳಿ, ಹೇಗೂ ಮೇಕಪ್ ಹಾಳಾಗಿದೆ ಹಾಗಾಗಿ ಹಾಗೆಯೇ ಮೋಗದ ಪೂರ್ತಿ ಮೇಕಪ್ ಅಳಿಸಿ ತಾವೇ ಮೇಕಪ್ ಮಾಡಿಕೊಟ್ಟರೇನೋ ಎಂದೊಂದು ಅನುಮಾನ...
ಧನ್ಯವಾದಗಳು ಮಿತ್ರ ಸತೀಶ್ ಡಿ.ಆರ್.ರಾಮನಗರ.
ReplyDeleteಅಲಂಕಾರ ಪ್ರಿಯೆಯನ್ನು ರಸಿಕತೆಯೊಂದಿಗೆ ಬಿಂಬಿಸಿ ಮೋಹಪರವಶಗೊಳಿಸಿದ ಕವಿತೆ ಇದು.ಆದರೆ ಚಂಡಿ ಅವತಾರಕ್ಕೆ ಹೆದರಿ ಓಡುವ ಪರಿಯೇ ವಿಪರ್ಯಾಸದ್ದು.
ReplyDeleteಹೂವೊಂದು ಪಕಳೆ ಪಕಳೆಗಳಾಗಿ ಅರಳಿದ್ದು ಕಣ್ಣು ಕುಕ್ಕಿ,ಕಣ್ಣು ಬಿದ್ದು ಒಮ್ಮೆಲೇ ಬಾಡಿಹೋದಂತೆ..! ಚೆನ್ನಾಗಿದೆ ಸರ್.. :)
ReplyDeleteabbba
ReplyDeleteಹ್ಹಹ್ಹಹ್ಹಾ..!!! ಹಾಗೇನಿಲ್ಲಾ.. ಮಿತ್ರ. ಮುದ್ದುಮುದ್ದಾಗಿ ಮೇಕಪ್ ಮಾಡಿ ರೆಡಿ ಆದಮೇಲೆ .. ಮುತ್ತು ಕೊಟ್ಟು ಮೇಕಪ್ ಕೆಡಿಸಿದ ಮೇಲೆ ಸಿಟ್ಟು ಬರದೇ ಇರುತ್ತದೆಯೇ..? ಮೇಕಪ್ ಕೆಡಿಸಿ, ಮತ್ತೇ ನಾನೇ ಮೇಕಪ್ ಮಾಡುವ ಅವಕಾಶ ಮದುವೆಯ ನಂತರದ ದಿನಗಳಲ್ಲಿ ಬರಬಹುದೇನೋ ಕಾಯುತ್ತೇನೆ ಬಿಡಿ. ನಿಮ್ಮ ಕಾಮೆಂಟಿಗೆ ಧನ್ಯವಾದಗಳು ಗೆಳೆಯ Balachandra Hegde
ReplyDeleteಕವಿತೆಯಲ್ಲಿ ಒಂದಷ್ಟು ಹಾಸ್ಯ ಬೆರೆಸುವ ಉದ್ದೇಶದಿಂದ ಕೊನೆಯಲ್ಲಿ ಹೆದರಿ ಓಡಿಹೋಗುವಂತೆ ಬಿಂಬಿಸಿದ್ದೇನೆ. ಕವಿತೆ ಮೆಚ್ಚಿದ ತಮಗೆ ಧನ್ಯವಾದಗಳು ಮಿತ್ರರೇ.. Banavasi Somashekhar, Vishwajith Rao
ReplyDeleteರಸಿಕ ಶಿಕಾಮಣಿ - ಸೊಗಸುಗಾರ ಪುಟ್ಟುಸ್ವಾಮಿ.
ReplyDeleteನೀವು ಇಷ್ಟು ಚೆನ್ನಾಗಿ ಬರೀತೀರ ಅಂತ ಗೊತ್ತಿದ್ರೆ ನಿಮ್ಮಾ ಪ್ರಿಯೆ ಪ್ರತಿದಿನ ಅಲಂಕಾರದಲ್ಲೇ ಮುಳುಗಿಬಿಟ್ಟಾಳು. ಸುಂದರ ಕವಿತೆ ಪದ್ಮಶಾಲಿಗಳೆ.,
ReplyDeleteಚೆಂದದ ಕವನಕ್ಕೆ.. ಅಂದದ.. ಸಾಲುಗಳು.. ಕವನದ ಕ್ಲೈಮ್ಯಾಕ್ಸ್ ಸೂಪರ್ ♥♥♥
ReplyDeleteಹ್ಹಿಹ್ಹೀಹ್ಹೀ... .ಧನ್ಯವಾದಗಳು Tirumalai Ravi ಸರ್.
ReplyDeleteನಿಮ್ಮ ಮಾತು ಕೇಳಿ ನನಗೀಗ ಹೆದರಿಕೆ ಶುರುವಾದಂತಾಯ್ತು... ಗೆಳೆಯ. ನಿಮ್ಮ ಕಾಮೆಂಟಿಗೆ ಧನ್ಯವಾದಗಳು ಮಿತ್ರ Prashasti Prashantavanam
ReplyDeleteಧನ್ಯವಾದಗಳು ಮಿತ್ರ Ashoka BA
ReplyDeleteಅಲಂಕಾರ ಪ್ರಿಯೆಯ ವರ್ಣನೆ ಚೆನ್ನಾಗಿದೆ ... ಪ್ರೇಮ ಕವನ ನಿಮ್ಮ ರಚನೆಯಲ್ಲಿ ಹೊಸತನ ಪಡೆದಿದೆ
ReplyDelete