Monday, January 23, 2012

ನೀನೆ ಹೇಳಿಬಿಡು ಗೆಳತಿ..

ತುಸು ನೀನೆ ಹೇಳಿಬಿಡು ಗೆಳತಿ,
ಅದೆಲ್ಲಿ ಬಚ್ಚಿಡಲಿ ನನ್ನದೆಯ ಪ್ರೀತಿ..?

ರೇಷಿಮೆಯಂಥ ನಿನ್ನ ಕೇಶರಾಶಿಯ,
ನುಣುಪಿನಲಿ ಇದನು ಬಚ್ಚಿಡಲೇ..?
ನಿನ್ನ ಕೆನ್ನೆಗೆ ಸದಾ ಮುತ್ತಿಕ್ಕುವ
ಮುಂಗುರುಳ ಸುಳಿಯಲ್ಲಿ ಬಚ್ಚಿಡಲೇ..?
ತುಸು ನೀನೆ ಹೇಳಿಬಿಡು ಗೆಳತಿ,
ಅದೆಲ್ಲಿ ಬಚ್ಚಿಡಲಿ ನನ್ನದೆಯ ಪ್ರೀತಿ..?

ಕಾಮನಬಿಲ್ಲಿನಂತೆ ಬಾಗಿದ ಹುಬ್ಬುಗಳಿಗೆ
ತೀಡಿದ ಕಾಡಿಗೆಯಲಿ ಬಚ್ಚಿಡಲೇ..?
ಪಿಳಿಪಿಳಿ ಎಂದು ಕದ್ದುಕದ್ದು ನನ್ನನ್ನೇ ನೋಡುವ
ನಿನ್ನ ಕಣ್ಣಗಳ ರೆಪ್ಪೆಯ ಚೆಲುವಲ್ಲಿ ಬಚ್ಚಿಡಲೇ..?
ತುಸು ನೀನೆ ಹೇಳಿಬಿಡು ಗೆಳತಿ,
ಅದೆಲ್ಲಿ ಬಚ್ಚಿಡಲಿ ನನ್ನದೆಯ ಪ್ರೀತಿ..?

ಒಲವು ಹೆಚ್ಚಿ ಕೊಟ್ಟ ಮುತ್ತುಗಳು,
ಜಾರುವ ನಿನ್ನ ಕೆನ್ನೆಗುಳಿಯಲಿ ಬಚ್ಚಿಡಲೇ..?
ನಾ ಕೊಡುವ ಚುಂಬನಕ್ಕಾಗಿ ಕಾಯುವ
ನಿನ್ನ ಹವಳದ ತುಟಿಯಂಚಿನಲಿ ಬಚ್ಚಿಡಲೇ..?
ತುಸು ನೀನೆ ಹೇಳಿಬಿಡು ಗೆಳತಿ,
ಅದೆಲ್ಲಿ ಬಚ್ಚಿಡಲಿ ನನ್ನದೆಯ ಪ್ರೀತಿ..?

ಬಚ್ಚಿಟ್ಟುಬಿಡಲೇ ಚೆಲುವೆ, ಹೃದಯದ ಪ್ರೀತಿ,
ನೀ ಮುಡಿದಾ ಮಲ್ಲಿಗೆಯ ಕಂಪಿನಲಿ..
ಮಲೆನಾಡ ಹಸಿರಂತೆ ಸದಾ ಹಚ್ಚಹಸಿರಾಗಿಸು
ಚೆಲುವೆ, ನನ್ನ ಪ್ರೀತಿ ನಿನ್ನ ಹೃದಯದಲಿ.
ನನ್ನ ಮನಸ ಕದ್ದ ಒಲುಮೆ ನೀನು,
ಬಚ್ಚಿಡಲೇ ಪ್ರೀತಿ ನಿನ್ನೆಲ್ಲಾ.. ಚೆಲುವಿನಲಿ.

ಹಸಿರ ರಾಶಿಯ ನಡುವೆ ಕೂತು,
ಬಣ್ಣಿಸಬೇಕು ಎನಿಸುತಿದೆ ನಿನ್ನ ದಿನವೂ ಹೀಗೆ.
ನನ್ನ ಪಿಸುಮಾತು ಕೇಳಿ ನಸುನಾಚಿ,
ಖುಷಿ ಹೆಚ್ಚಿ ನಗಬೇಡ ಕಣೇ ನೀನು ಹೀಗೆ.
ಆ ನಿನ್ನ ನಗು ಕಂಡಾಗ ತಾನೇ..
ನಂಗೆ ಏನೇನೋ ಅನಿಸುತಿದೆ ಒಳಗೊಳಗೆ.

50 comments:

  1. ಓ...ಪ್ರೇಮಿ! ನಿನಗೆ ನೀನೇ ಸಾಟಿ......:)

    ReplyDelete
  2. ಹ್ಹ ಹ್ಹ..ಹ್ಹಾ.... @ Bhagirathi Chandrashekar ಅಕ್ಕಾ.. ಧನ್ಯವಾದಗಳು

    ReplyDelete
  3. Wow... Tumba chennagide.

    ReplyDelete
  4. ನಿಜ .. ಪ್ರತಿಯೊಂದು ಹೆಣ್ಣಿಗೂ.. ಈ ಥರ ಪ್ರೀತಿಸುವ ಹುಡುಗ ಸಿಗಬೇಕು ಎನ್ನೋ ಆಸೆ ಇರುತ್ತೆ. ತುಂಬಾ ಚೆನ್ನಾಗಿದೆ ರಾಘವೇಂದ್ರ. ಬಹಳ ಇಷ್ಟವಾಯಿತು.

    ReplyDelete
  5. ರಸಿಕ ಕವಿ... ಎಲ್ಲಿ ಬಚ್ಚಿಡಲಿ ಪ್ರೀತಿಯಾ. ಎಂದು ಕೇಳುತ್ತಾ.. ಪ್ರೇಯಸಿಯ ಚಲುವನ್ನೆಲ್ಲಾ ವರ್ಣಿಸಿದ ರೀತಿ ಅಸದಳ.. ಅನನ್ಯ.. ಸುಂದರವಾದ ಕವಿತೆ..♥♥♥

    ReplyDelete
  6. ಈ 2012ರ ನನ್ನ ಮೊದಲ ಕವಿತೆ.. ಇಷ್ಟಪಟ್ಟ ಎಲ್ಲರಿಗೂ ಧನ್ಯವಾದಗಳು.

    ReplyDelete
  7. ಚೆನ್ನಾಗಿದೆ ಗೆಳೆಯ ನಿಮ್ಮಿಂದ ಈ ವರುಷವೂ
    ಮತ್ತಷ್ಟು ಚಂದದ ಕವಿತೆಗಳು ಬರಲಿ
    ಎಂದು ಹಾರೈಸುತ್ತೇನೆ :)
    ಶುಭವಾಗಲಿ !

    ReplyDelete
  8. ಎಲ್ಲರ ಪ್ರೀತಿಯೂ ನಿರ್ಮಲವಾಗಿರಲಿ... ಧನ್ಯವಾದಗಳು Sharada Shaaru ರವರೇ..

    ReplyDelete
  9. ಕವಿತೆಯಲ್ಲಿ ರಸಿಕತೆಯ ಸೊಗಸನ್ನು ಕಂಡಿದ್ದೀರಾ..? ಪ್ರೇಯಸಿಯ ಚೆಲುವನ್ನೆಲ್ಲಾ ಬಣ್ಣಿಸಿದ ಪದಗಳನ್ನು ಇಷ್ಟಪಟ್ಟಿದ್ದಕ್ಕೆ ಧನ್ಯವಾದಗಳು ಗೆಳೆಯ Ashoka BA

    ReplyDelete
  10. ನಿಮ್ಮ ಹಾರೈಕೆಗಳೇ ನನಗೆ ನೂರಾನೆ ಬಲ. ಮತ್ತಷ್ಟು ಕವಿತೆಗಳಿಗೆ ಸ್ಪೂರ್ತಿ ಗೆಳೆಯ.. Prakash Srinivas.. ಧನ್ಯವಾದಗಳು.

    ReplyDelete
  11. ಹುಡುಗಿಯರು ಮೋಹ ಪರವಶವಾದರು ಜೋಕೆ. ಸೊಗಸಾಗಿದೆ. ಮತ್ತಷ್ಟು ಬೆರೆಯಿರಿ.

    ReplyDelete
  12. bacchittaru ella tereditta kavi ragavendra

    ReplyDelete
  13. ನಿಮ್ಮ ಕಾಮೆಂಟಿಗೆ ಧನ್ಯವಾದಗಳು Prakash Mohan. ಆದರೆ ಕನ್ನಡ ಬ್ಲಾಗ್ ನ ನಿಯಮದಂತೆ ಕನ್ನಡದಲ್ಲಿಯೇ ಕಾಮೆಂಟನ್ನು ದಯವಿಟ್ಟು ಹಾಕಿ. ಇಂಗ್ಲಿಷ್ ಬಳಕೆ ಕಡ್ಡಾಯವಾಗಿ ಮಾಡುವಂತಿಲ್ಲ.

    ReplyDelete
  14. ಹುಡುಗಿಯರು ಮೋಹ ಪರವಶರಾದರೇ.. ನಾನು ಪರಮಾತ್ಮನಂತೆ "ಪರವಶನಾದೇನು" ಹೇಳುತ್ತೇನೆ ಸತೀಶ್. ನಿಮ್ಮ ಕಾಮೆಂಟಿಗೆ ಧನ್ಯವಾದಗಳು. ಮತ್ತಷ್ಟು ಬರೆಯಬೇಕೋ.. ಬೆರೆಯಬೇಕೋ.. ಎಂಬ ಗೊಂದಲ ಸೃಷ್ಟಿಸಿದ್ದೀರಿ. ದಯವಿಟ್ಟು ನನ್ನ ಗೊಂದಲ ಸರಿಪಡಿಸಿ.. ಸತೀಶ್ ಡಿ. ಆರ್. ರಾಮನಗರ

    ReplyDelete
  15. ಚೆನ್ನಾಗಿದೆ... ಕವಿತೆಯಲ್ಲಿ ಲಯವಿದೆ... ಇಷ್ಟವಾಯಿತು...

    ReplyDelete
  16. This comment has been removed by the author.

    ReplyDelete
  17. ಮನಸ್ಸಿನಲ್ಲಿನ ಆ ಬೆಟ್ಟದಷ್ಟು ಪ್ರೀತಿಯನ್ನು ಎಲ್ಲಿ ಬಚ್ಚಿಡಲಿ ಎಂದು ಹುಡುಕುವ ನಲ್ಲನ ಸವಿಮಾತುಗಳಲ್ಲಿ ತೆರೆದುಕೊಳ್ಳುವ ಕವಿತೆ, ಅವನ ನಲ್ಲೆಯ ಸೌಂದರ್ಯದ ಇಂಚಿಂಚನ್ನೂ ವರ್ಣಿಸಿರುವ ಬಗೆ ನಿಜಕ್ಕೂ ತುಂಬಾ ಆಕರ್ಷಕೆನಿಸುತ್ತದೆ.. ಸುಂದರವಾದ ಶೃಂಗಾರ ಭಾವಗಳ ಮೆರವಣಿಗೆ ಈ ಕವಿತೆ, ಲಯದೊಂದಿಗೆ ತುಂಬಾ ಸುಂದರವಾಗಿ ಹರಡಿಕೊಂಡಿದೆ.. ಹಿಡಿಸಿತು..

    ReplyDelete
  18. ಧನ್ಯವಾದಗಳು.. ಗೆಳೆಯ Mohan V Kollegal.

    ReplyDelete
  19. ಗೆಳೆಯ ಪ್ರೀತಿಯ ಅನುಭವ ಮನದಲ್ಲಿ ಇದ್ದರೆ ಎಂತಹ ಕವಿಯು ನನ್ನ ಎದುರು ಸೋಲೋದು ಕಂಡಿತ ಅಲ್ವ....

    ReplyDelete
  20. ಆ ಬೆಟ್ಟದಷ್ಟು ಇರುವ ಪ್ರೀತಿಯನ್ನು ಬಚ್ಚಿಡಲು ನಲ್ಲೆಯನ್ನೇ ಕೇಳಿದರೆ ಏನೆಂದು ಉತ್ತರ ಕೊಟ್ಟಾಳು.. ಒಂದು ಚಿಕ್ಕ ಮುಗುಳ್ನಗೆಯ ಹೊರತು. ಆ ಮುಗುಳ್ನಗೆಯ ಉತ್ತರವನ್ನೇ ಕವಿತೆಯ ಕೊನೆಯ ಸಾಲುಗಳಲ್ಲಿ ಹಾಸ್ಯಮಯವಾಗಿ ಬಳಸಿಕೊಂಡಿದ್ದೇನೆ. ಧನ್ಯವಾದಗಳು ಗೆಳೆಯ Prasad V Murthy

    ReplyDelete
  21. ನಿಜ.. ಗೆಳೆಯ Ramvidya Vidya Ram. ಆದರೆ ಪ್ರೀತಿಯ ಮಾಡಿದ ಅನುಭವವಂತೂ ಖಂಡಿತಾ ನನಗಿಲ್ಲ. ಆದರೆ ಪ್ರೀತಿಯ ರಸಧಾರೆ ಮಾತ್ರ ಮನಸಲಿ.. ಅಚ್ಚಳಿಯದಿದೆ. ಮನಸಿನಲಿ ಉಳಿದಿರುವ ಆ ಪ್ರೀತಿಯ ಭಾವನೆಗಳೇ... ಈ ಕವಿತೆಗಳು ಹುಟ್ಟಲು ಸ್ಪೂರ್ತಿ ಅಷ್ಟೇ.

    ReplyDelete
  22. nijaku thumba sogasagi bandhidhe.
    olle preethiya nivedhane thumba chenngidhe salugalu.
    preethina yelli bachidake sadhya illa bidi.
    yellaru helidha hage romantic kavine nivu.
    heege nimma kavithegala payana sagali nanage yella salugalu ishta aythu
    kannu hubbu yella chennagi varnisidhira
    mathe last stanza thumba chennagidhe.
    last 2nd stanza bachidale preethi ninna hrudhayadhali adhu chennagidhe, aga yavathu a preethi hogalla; hrudhayadhalle irathe.
    adhu hege sadhya? love madila anthira madhuve innu agilla adhu hege sadhya intha salu baralu antha nivu bejaru madkolthira antha sumnadhe kelalilla..
    igle intha kavithegalu..! innu madhuve adhmele yentha preethi kavithegalu barbahudhu kaytha irthivi

    ReplyDelete
  23. ಇಂಪಾದ,ಮುದ್ದಾದ,ಕೋಮಲತೆಯ ಸ್ಪರ್ಷವಿರುವ ಸುಂದರ ಕವನ.

    ReplyDelete
  24. ಧನ್ಯವಾದಗಳು... ಬನವಾಸಿಯವರೇ..

    ReplyDelete
  25. ಕವಿತೆ ಅದ್ಭುತವಾಗಿದೆ. ಸ್ವಲ್ಪ ತೇಲಾಡಿಸುತ್ತದೆ. ವರ್ಣನೆ ಮತ್ತು ಪದಪ್ರಯೋಗ ಅದ್ಭುತವಾಗಿದೆ...

    ReplyDelete
  26. ಧನ್ಯವಾದಗಳು ಸತ್ತಾರಣ್ಣ. ತೇಲುವಂತೆ ಮಾಡಿದ್ದು ಕವಿತೆಯ ಕಿಕ್ಕೋ.. ಅಥವಾ ಪ್ರೇಯಸಿಯ ನೆನಪೋ... ನಿಮ್ಮ ಕಾಮೆಂಟಿಗೆ ಮತ್ತೊಮ್ಮೆ ಧನ್ಯವಾದಗಳು Abdul Satthar Kodagu

    ReplyDelete
  27. Thumba chennagide brother ......preethiyannu bachidabaaradu......bicchidabeku....:)

    ReplyDelete
  28. ಅದಕ್ಕೆ Maha Laxmi ಅಕ್ಕಾ.. ಪ್ರೀತಿಯನ್ನು ಬಚ್ಚಿಡಲು ಪ್ರೇಯಸಿಯ ಚೆಲುವನ್ನೇ ಹುಡುಕಿದ್ದು. ಬಚ್ಚಿಡುವ ನೆಪದಲ್ಲಿ .. ಬಿಚ್ಚಿಟ್ಟಿದ್ದು.

    ReplyDelete
  29. ಇಷ್ಟವಾಯಿತು..

    ReplyDelete
  30. ತುಂಬಾನೇ ಚೆನ್ನಾಗಿದೆ... ಪದಗಳ ಜೋಡನೆ ಅದ್ಬುತವಾಗಿದೆ..ಶುಭವಾಗಲಿ

    ReplyDelete
  31. ಕವನದ ಕಲೆ ಚೆನ್ನಾಗಿದೆ..

    ReplyDelete
  32. ಮನದ ಮಾತುಗಳು ಪ್ರಶ್ನೆಗಳಾಗಿ ಅರಳಿಕೊಂಡಿರುವ ಬಗೆ ಸುಂದರ ಹಾಗು ಸೋಜಿಗ.ಶುಭವಾಗಲಿ,ಇನ್ನಷ್ಟು ಬರೆಯಿರಿ.

    ReplyDelete
  33. ಧನ್ಯವಾದಗಳು.. ಮಂಜು ದೊಡ್ಡಮನಿ.. ಗೆಳೆಯ Manju Varaga. and . Bhimasen Purohit. ಕವಿತೆಯಲ್ಲಿ ಕಲೆಯನ್ನು ಗುರುತಿಸಿದ್ದಕ್ಕೆ..

    ReplyDelete
  34. ಶಿವು ರವರಿಗೆ ಧನ್ಯವಾದಗಳು. ಪ್ರಶ್ನೆಗಳ ರೂಪದಲ್ಲಿನ ಮನದ ಮಾತುಗಳ ಪ್ರೇಯಸಿಗೆ ತಿಳಿಸಲು ಹಾಗೂ ಪ್ರೀತಿಯ ಬಚ್ಚಿಡಲು ಹಾತೊರೆದ ಸಾಲುಗಳುಳ್ಳ ಕವಿತೆ ಮೆಚ್ಚಿದ್ದಕ್ಕೆ Hridaya Shiva ಧನ್ಯವಾದಗಳು.

    ReplyDelete
  35. Thumba chennagide brother ......preethiyannu bachidabaaradu......bicchidabeku....:)

    ReplyDelete
  36. ಅದಕ್ಕೆ Maha Laxmi ಅಕ್ಕಾ.. ಪ್ರೀತಿಯನ್ನು ಬಚ್ಚಿಡಲು ಪ್ರೇಯಸಿಯ ಚೆಲುವನ್ನೇ ಹುಡುಕಿದ್ದು. ಬಚ್ಚಿಡುವ ನೆಪದಲ್ಲಿ .. ಬಿಚ್ಚಿಟ್ಟಿದ್ದು.

    ReplyDelete
  37. superb brother :)

    ReplyDelete
  38. ಹಾ.. ಹಾ.. ಅದೆಂತ ಪ್ರೀತಿಯ ಪರಿಯ ಅರುಹಿದೆ ಗೆಳೆಯ ನಿಮ್ಮೊಲವಿನ ನಲ್ಲೆಗೆ.. ಎಲ್ಲೇ ಇರಲಿ.. ಅವಳು ನಿಮ್ಮೆಡೆಗೆ ಸಾಗಿ ಬರಲಿ !!

    ReplyDelete
  39. tnQ.. Narendra Kabbinale, Vidya Shirur, Padmapriya

    ReplyDelete