ಗೆಳೆಯರಾಗಲಿ..
ಗೆಳತಿಯರಾಗಲಿ...
ನಡುವಿನ ಅಗಾಧ ಪ್ರೀತಿಯ
ಕೊಂಡಿಗೆ ಸ್ನೇಹವೆನ್ನಬಹುದೇ..?
ನಮ್ಮ ಮನಸಿನ ಸಂತಸ
ಚಿಕ್ಕದಾದರೂ ಸರಿ,
ಅತಿ ದೊಡ್ಡದಾದರೂ ಸರಿ..
ಹಂಚಿಕೊಳ್ಳಲು ಮೊದಲು
ಹುಡುಕುವ ವ್ಯಕ್ತಿಯ ಬಂಧಕೆ,
ಸ್ನೇಹ ಎನ್ನಬಹುದೇ..?
ಹೃದಯವು ಕೊರಡೆನಿಸಿ,
ಗಂಟಲು ಬಿಗಿ ಹೆಚ್ಚಿ,
ಮಾತುಗಳು ಹೊರಬರದೇ,
ಮೌನಕೆ ಶರಣಾಗಿ ಅನುಭವಿಸುವ
ನೋವನ್ನು ಹಂಚಿಕೊಳ್ಳುವ ಬಂಧಕೆ
ಸ್ನೇಹ ಎನ್ನಬಹುದೇ..?
ಹಾಲ್ಮನಸಿನ ಪುಟಾಣಿಗಳಿಂದ
ಮುಪ್ಪಿನ ಮುದುಕರವರೆಗೂ,
ಮಾತನಾಡಿದಷ್ಟು ಮತ್ತೆ ಮತ್ತೆ,
ಮಾತನಾಡುವ ಹಾಗೂ
ತಂಪಾದ ಗಾಳಿಯಂತೆ ಹಾಯೆನಿಸುವ
ನಿರ್ಮಲ,ನಿಸ್ವಾರ್ಥ ಬಂಧಕೆ
ಸ್ನೇಹ ಎನ್ನಬಹುದೇ..?
ಪ್ರೀತಿಗೆ ಎಲ್ಲೆ ಇರಬಹುದು.. ಸ್ನೇಹಕ್ಕೆ ಎಲ್ಲೆ ಇಲ್ಲ.. ಒಬ್ಬ ಒಳ್ಳೆಯ ಸ್ನೇಹಿತನಿದ್ದರೆ ಜೀವನ ಹಿತ.. ಚೆನ್ನಾಗಿದೆ..ಶುಭವಾಗಲಿ :)
ReplyDeleteಸ್ನೇಹದ ಭಾವನೆಗಳನ್ನು ಸೊಗಸಾದ ಕವಿತೆಯ ಮೂಲಕ ಹರಿಯಬಿಟ್ಟಿದ್ದೀರಿ.. ಸೊಗಸಾಗಿ ಮೂಡಿ ನಿಂತಿರುವ ಕವಿತೆ, ಮಧುರಾನುಭೂತಿಯನ್ನು ಅಸ್ವಾದನೆಯ ಮನಸ್ಸಿಗೆ ಉಣಬಡಿಸುತ್ತದೆ.. ಭಾವಗಳಿಗೆ ಬಲು ಸುಂದರವಾಗಿ ಬಣ್ಣ ಬಳಿಯುತ್ತೀರಿ ಆದರೆ ಎರಡನೆಯ ಚರಣ ಸ್ವಲ್ಪ ಲಯ ತಪ್ಪಿದಂತೆನಿಸುತ್ತದೆ ಮತ್ತು ಗದ್ಯದಂತೆಯೂ ಭಾಸವಾಗುತ್ತದೆ.. ಸ್ವಲ್ಪ ಗಮನ ಹರಿಸಿ..
ReplyDeleteಈ ಸ್ನೇಹವೇ ಹಾಗೆ. ಎಲ್ಲೂ ಯಾರಲ್ಲೂ ಹೇಳಿಕೊಳ್ಳದ ಸಂಗತಿಯನ್ನು ಸ್ನೇಹದ ಸಲುಗೆಯಿಂದ ಹೇಳಿಕೊಳ್ಳುವುದು ಸ್ನೇಹಿತನ ಹತ್ತಿರ ಮಾತ್ರ. ನಾವು ಅತಿಯಾಗಿ ನಂಬುವ ವ್ಯಕ್ತಿ ಅಂದರೆ ಸ್ನೇಹಿತ ಮಾತ್ರ. ಬಾಲ್ಯದಿಂದ ಮುಪ್ಪಿನವರೆಗೂ ಜೊತೆ ಜೊತೆಯಲ್ಲಿಯೇ ಬೆರೆತು ಬರುವುದು ಸ್ನೇಹ ಮಾತ್ರ. ಈ ಎಲ್ಲ ಭಾವನೆಗಳನ್ನು ಬೆರಸಿ ಚಂದದ ಕವಿತೆಯನ್ನು ಕೊಟ್ಟಿರುವಿರಿ. ಧನ್ಯವಾದಗಳು.
ReplyDeleteಹೌದೆನಬಹುದು ಅನಿಸುತ್ತದೆ ನಿಮ್ಮ ಪ್ರಶ್ನೆಗಳಿಗೆ ರಾಘವೇಂದ್ರ. ಮಧುರ ಭಾವವಿದೆ ಸ್ನೇಹದೊಳಗೆ. ಉತ್ತಮ ರಚನೆ.
ReplyDeleteಚೆನ್ನಾಗಿದೆ... ನಿಷ್ಕಲ್ಮಶವಾಗಿ ಯಾವುದೇ ಹಂತಗಳ ಹಂಗಿಲ್ಲದೇ ಸ್ನೇಹ ಹುಟ್ಟಿಕೊಳ್ಳುತ್ತದೆ. ಮುಖ ನೋಡದಿದ್ದರೂ ನಾವು ನೀವೆಲ್ಲಾ ಇಷ್ಟು ಆಪ್ತರಾಗಿಲ್ಲವೇ?? ಸ್ನೇಹಕವಿತೆ ಚೆನ್ನಾಗಿದೆ...
ReplyDeleteಧನ್ಯವಾದಗಳು ಗೆಳೆಯ Paresh Saraf
ReplyDeleteಖಂಡಿತಾ.. ನಿಮ್ಮ ಸಲಹೆಗೆ ಸ್ವಾಗತ. ಧನ್ಯವಾದಗಳು ಗೆಳೆಯ Prasad V Murthy
ReplyDeleteನನ್ನ ನಿಮ್ಮೆಲ್ಲರ ಸ್ನೇಹಕ್ಕೆ ಒಂದು ಕಿರು ಕಾಣಿಕೆಯಷ್ಟೆ. ಮೆಚ್ಚಿದ ಎಲ್ಲಾ ಸ್ನೇಹಿತರಿಗೂ ಧನ್ಯವಾದಗಳು.
ReplyDeleteನಿಮ್ಮ ಪ್ರೀತಿ ಹೀಗೆ ಇರಲಿ.. ಗೆಳೆಯ ಧನ್ಯವಾದಗಳು ಸತೀಶ್ ಡಿ. ಆರ್. ರಾಮನಗರ
ReplyDeleteಧನ್ಯವಾದಗಳು... ಆತ್ಮೀಯ ಗೆಳೆಯ Pushparaj Chauta
ReplyDeleteಯಾವುದೇ ಹಂಗಿರದ ಪ್ರೀತಿಯು, ಯಾವುದೇ ಸಂಬಂಧಗಳ ಅವಶ್ಯಕತೆ ಈ ಸ್ನೇಹದಲ್ಲಿ ಇರುವುದಿಲ್ಲ. ನಿಜ ಒಂದೇ ಮನಸಿನ ನಾವೆಲ್ಲರೂ ಆತ್ಮೀಯರಾಗುತ್ತಿರುವುದು ನನಗೂ ಅತೀವ ಆನಂದ. ಧನ್ಯವಾದಗಳು ಗೆಳೆಯ ಮೋಹನ (@Mohan V Kollegal)
ReplyDeleteಹೃದಯವು ಕೊರಡೆನಿಸಿ,
ReplyDeleteಗಂಟಲು ಬಿಗಿ ಹೆಚ್ಚಿ,
ಮಾತುಗಳು ಹೊರಬರದೇ,
ಮೌನಕೆ ಶರಣಾಗಿ ಅನುಭವಿಸುವ
ನೋವನ್ನು ಹಂಚಿಕೊಳ್ಳುವ ಬಂಧಕೆ
ಸ್ನೇಹ ಎನ್ನಬಹುದೇ..?
ತುಂಬಾ ಹಿಡಿಸಿತು ಚಂದದ ನಿರೂಪಣೆ!
ಧನ್ಯವಾದಗಳು ಗೆಳೆಯ ... Prakash Srinivas
ReplyDelete