Friday, February 24, 2012

ವಾಹ್.. ನನ್ನವಳ ಕೈರುಚಿ..!!



ದಿನವೂ ನೆನೆದಾಗಲೆಲ್ಲ,
ಹಿತವೆನಿಸುವುದು ನನಗೆ,
ನನ್ನವಳು ಮಾಡಿದ ಅಡುಗೆಯ ರುಚಿ.

ಮದುವೆಯಾದ ಹೊಸತರಲ್ಲಿ,
ನನಗಾಗಿಯೇ ವಿಶೇಷವಾಗಿ ಅಡುಗೆ
ಮಾಡಹೊರಟಳು ಕೊಂಚ ನಗು ಚೆಲ್ಲಿ.
ನಡುವಿಗೆ ಸೆರಗ ಸಿಕ್ಕಿಸಿ,
ಮೊಟ್ಟಮೊದಲ ಅಡುಗೆ ಮಾಡಲು
ಚಾಕು-ತರಕಾರಿ ತಂದಳಿಲ್ಲಿ.

ಅಡ್ಡಡ್ಡ-ಉದ್ದುದ್ದ ಕತ್ತರಿಸಿದಳು,
ಈರುಳ್ಳಿ-ಟೊಮ್ಯಾಟೋಗಳನ್ನ.
ತರಕಾರಿ ಹಚ್ಚುತ್ತಿದ್ದಳು,ಸರಿಸುತ್ತಾ
ಪದೇಪದೇ ಅಡ್ಡಬರುತ್ತಿದ್ದ ಮುಂಗುರಳನ್ನ.
ಒಲೆ ಹಚ್ಚಿ, ಪಾತ್ರೆಯಿಟ್ಟು ಎಣ್ಣೆ
ಸುರಿದಿದ್ದಳು ಹಾಕಲು ಒಗ್ಗರಣೆಯನ್ನ,

ಅಂತೂ-ಇಂತು ತಂದೇಬಿಟ್ಟಳು,
ನನ್ನವಳು ತುಟಿಯಂಚಲ್ಲೇ ನಸುನಗುತಾ.
ತವರಿನಲ್ಲೂ ಒಂದು ದಿನ ಕೂಡ
ಅಡುಗೆ ಮಾಡದವಳು ನನ್ನ ಮಹಾರಾಣಿ.
ವಾಹ್.. ಎಷ್ಟು ಚೆಂದವಿತ್ತೋ
ನನ್ನವಳ ಕೈರುಚಿ..
ಉಪ್ಪು ಕಡಿಮೆ, ಖಾರ ಹೆಚ್ಚು.
ಮರೆಯಲಾರೆ ನಾ.. ನನ್ನವಳ ಕೈರುಚಿ.

28 comments:

  1. ತುಂಬ ಚೆನ್ನಾಗಿದೆ ಅಡುಗೆ, ರುಚಿಸಿತು ನಿಮ್ಮ ಕವನ

    ReplyDelete
  2. ಧನ್ಯವಾದಗಳು ಗೆಳೆಯ .. Srinivas Vk

    ReplyDelete
  3. ಧನ್ಯವಾದಗಳು Shilpa Shree Gm.

    ReplyDelete
  4. Bhagirathi ChandrashekarFebruary 24, 2012 at 8:17 PM

    ನಿಮ್ಮವಳ ಕೈರುಚಿ ನಮಗೂ ಉಣಬಡಿಸಿದಿರಿ...! ಚೆನ್ನಾಗಿದೆ.

    ReplyDelete
  5. ಧನ್ಯವಾದಗಳು Bhagirathi Chandrashekar ಅಕ್ಕಾ. ಉಪ್ಪು ಕಡಿಮೆ, ಖಾರ ಜಾಸ್ತಿ ಇರೋ ಊಟ ಮಾಡುವಾಗ ನಂಗೆ ತುಂಬಾ ಕಷ್ಟವಾಯ್ತು. ಇಷ್ಟಪಟ್ಟಿದ್ದಕ್ಕೆ ಮತ್ತೊಮ್ಮೆ ಧನ್ಯವಾದಗಳು..

    ReplyDelete
  6. ಮೊದಲ ದಿನದ ನಿಮ್ಮವಳ ಕೈ ರುಚಿ ಉಪ್ಪು ಖಾರ ಎಲ್ಲ ಚೆನ್ನಾಗಿ ಬರೆದಿದಿರಿ ಮೊದಲನೆ ದಿನ ಹೇಗೆ ಇದ್ರೂ ಚೆನ್ನ ಇರತೆ ಅಲ್ವ.

    ReplyDelete
  7. Bhagirathi ChandrashekarFebruary 24, 2012 at 8:18 PM

    ಪದೇಪದೇ ಅಡ್ಡಬರುತ್ತಿದ್ದ ಮುಂಗುರಳನ್ನ ಸರಿಸುತ್ತಾ, ತುಟಿಯಂಚಲ್ಲೇ ನಸುನಗುತ್ತಾ ಪಕ್ಕದಲ್ಲೇ ಕುಳಿತು ತಿನ್ನಿಸಿರಬೇಕು...;P

    ReplyDelete
  8. ಹೇಗಿತ್ತು ಅಂತಾ ಗೊತ್ತಾಗುವುದರೊಳಗಾಗಿ ಖಾರ ಹೆಚ್ಚಾಗಿ ಕಣ್ಣಲಿ ನೀರು ಬರೋದು ಮಾತ್ರ ಖಂಡಿತಾ Padma Priya. ನಿಮ್ಮ ಕಾಮೆಂಟಿಗೆ ಧನ್ಯವಾದಗಳು.

    ReplyDelete
  9. ಹಾಗೆ ಅನಿಸ್ತು.. Bhagirathi Chandrashekar ಅಕ್ಕಾ... ಮದುವೆ ಆದ ಮೇಲೆ ಒಂದು ಸಾರಿ ತಿನ್ನಿಸ್ತಾಳೇನೋ ನೋಡ್ಬೇಕು.

    ReplyDelete
  10. ಅರ್ಧಾಂಗಿಯ ಕೈ ಅಡಿಗೆಯ ರುಚಿಯ ಮುಂದೆ ಎಲ್ಲವೂ ಶೂನ್ಯ.. ಅಡಿಗೆಯಲ್ಲಿ ಅವಳ ಪ್ರೀತಿಯ ರುಚಿ ಬಾಂಧವ್ಯ ಬೆಸೆಯುತ್ತದೆ.. ಚೆನ್ನಾಗಿದೆ ಸರ್.. ಶುಭವಾಗಲಿ :)

    ReplyDelete
  11. Nataraju Seegekote MariyappaFebruary 24, 2012 at 8:19 PM

    ಪಾಪ ರಾಘವೇಂದ್ರರು ತಮ್ಮವಳ ಇನ್ನೊಂದು ಮುಖ ನೋಡಿಲ್ಲ ಅನಿಸುತ್ತೆ.. ಶುಭವಾಗಲಿ :))) ಚೆನ್ನಾಗಿದೆ

    ReplyDelete
  12. ಧನ್ಯವಾದಗಳು.. Paresh Saraf ಜೀ...

    ReplyDelete
  13. ಹ್ಹಹ್ಹಹ್ಹಾ... ಏನ್ಮಾಡೋದು ನಟರಾಜಣ್ಣ. ಅಡುಗೆ ಚೆನ್ನಾಗಿದೆ ಅನ್ನೊಣವೆಂದ್ರೆ ಉಪ್ಪು ಕಡಿಮೆ, ಖಾರ ಜಾಸ್ತಿ ಅಂತ ಹೇಳಿದ್ನಲ್ಲ. ಇನ್ನೂ ಹೇಗೆ ಮರೆಯಲಿ ಅಡುಗೆಯ ರುಚಿ. ಧನ್ಯವಾದಗಳು Nataraju Seegekote Mariyappa ರವರಿಗೆ.

    ReplyDelete
  14. ಎಂದೂ ಮರೆಯದ ರುಚಿ..
    ಚೆನ್ನಾಗಿದೆ...

    ReplyDelete
  15. ಧನ್ಯವಾದಗಳು ಗೆಳೆಯ Balachandra Hegde

    ReplyDelete
  16. WOW!!! RAGHU NIJAVAAGLU THUMBA CHENNAGIDE.....

    ReplyDelete
  17. ಖಾರ ಜಾಸ್ತಿ ಆಗಿದೆ ಅಂತಾ ನಾನು ಅಳ್ತಾ ಇದೀನಿ. .ನೀವು ನೋಡಿದ್ರೆ ಚೆನ್ನಾಗಿದೆ ಅಂತೀರಲ್ಲಕ್ಕಾ.... ನೀರು ಕೊಡಿ..

    ReplyDelete
  18. preethi irovaaga adella gothagalla kano....

    ReplyDelete
  19. aaaa preetine.. taste ittu bidi.. mahalakshmi akka

    ReplyDelete
  20. ista aadavar yenu kotru chennagirutte. sariyaagi nenapu maadikolli.
    istapattavarinda gift sigodu maduve aadavarige maatra ankondidira?

    ReplyDelete
  21. nanagoo hage ansutte.. prakash ji.. (aadre anubava illa aste)
    nenapu madkoloke enide.. innu maduve agillave.. namma Maha Laxmi akkannanne keli.
    esto saari ooohegale chennagi irutte ansutte

    ReplyDelete
  22. ಕವಿತೆ ಇಷ್ಟಪಟ್ಟ ಎಲ್ಲಾ ಗೆಳಯ-ಗೆಳತಿಯರಿಗೆ ... ಧನ್ಯವಾದಗಳು.

    ReplyDelete
  23. Bellala Gopinath RaoFebruary 27, 2012 at 8:19 PM

    ನಿಮ್ಮ ಪ್ರೀತಿಯೊಡನೆ, ನಿಮ್ಮ ಸಹಾಯ ಸಹಾ ಸೇರಿದ್ದರೆ ಇನ್ನೂ ಅಡುಗೆಗೆ ರುಚಿ ಜಾಸ್ತಿಯಾಗುತ್ತಿತ್ತೋ ಏನೊ... ಪ್ರಯತ್ನಿಸಿ ನೋಡಿ!!

    ReplyDelete
  24. ಮದುವೆಯ ನಂತರ ಹೆಂಡತಿ ಬಂದ ಮೇಲೆ... ಅಡುಗೆಗೆ ಸಹಾಯ ಮಾಡ್ತೀನಿ ...ಸಾರ್. ನೀವು ಹೇಳಿದ್ರಿ ಅಂತಾ... ಧನ್ಯವಾದಗಳು Bellala Gopinath Rao ಸರ್...

    ReplyDelete
  25. ತುಂಬಾ ಚೆನ್ನಾಗಿದೆ ನಿಮ್ಮ ಕವನ ಸರ್.. ಅಡುಗೆ ಬರದ ಹುಡುಗಿ ಮೊದಲ ಬಾರಿ ಮಾಡಿದ ಅಡಿಗೆಯನ್ನು ತುಂಬಾ ಚೆನ್ನಾಗಿ ವರ್ಣಿಸಿದ್ದಿರ..

    ReplyDelete
  26. ನಮಗೂ ನಿಮ್ಮವಳ ಅಡುಗೆಯ ರುಚಿ ತೋರಿಸಿದ್ದೀರಲ್ಲಾ ಮಾರಾಯ್ರೆ ನಿಮ್ಮನ್ನು ಹೊಗಳುವ ಮುಂಚೆಯೇ ಖಾರ ಹೆಚ್ಚಾಗಿ ನಮ್ಮ ಗಂಟಲು ಕಟ್ಟಿಬಿಟ್ಟರೆ..;) ಚೆನ್ನಾಗಿದೆ ನಿಮ್ಮ ಆತ್ಮೀಯ ಶೃಂಗಾರದ ಮಾತುಗಳು ರಾಘವೇಂದ್ರ ಪದ್ಮಶಾಲಿಯವರೆ.. ಮನಸ್ಸಿನ ತಿಳಿಭಾವಗಳು ತುಳುಕಿ ಸುರಿದಿವೆ, ಕಡೆಯಲ್ಲಿನ ಹಾಸ್ಯದ ಲೇಪ ಅಸ್ವಾದನೆಗೆ ಗಮ್ಮತ್ತು ಹೆಚ್ಚಿಸಿದೆ..

    ReplyDelete
  27. ಅಹ್ಹಾಹ..!! ಏನ್ ಸರ್ .. ಫೋಟೋ ಎಷ್ಟು ಚೆನ್ನಾಗಿ ಹಾಕ್ಬಿಟ್ಟು .. ಕವಿತೆಯಲ್ಲಿ ಒಳ್ಳೆ ಸವಿ ಆದರೆ ಅಡುಗೆಯಲ್ಲಿ ರುಚಿ ಹುಡುಕಿದ ಕವಿ... ಸೂಪರ್ ಇದೆ.. :)

    ReplyDelete