Monday, January 30, 2012

ಗರ್ಭದೊಳಗಿನ ಸತ್ಯ..

ಭವಿಷ್ಯದ ಕನಸುಗಳ ಹೊತ್ತು
ಅಮ್ಮನ ಗರ್ಭದೊಳಗೆ
ಮಲಗಿರುವೆ ನಾನು..!!
ಆದರೆ ನಿಮ್ಮಂತೆ
ಜಗವ ಕಾಣುವ ಮುನ್ನವೇ
ನನ್ನ ಕಸವಾಗಿಸಿದಿರೇನು..??

ಪ್ರೇಮದಿಂದಲೂ..,
ಕಾಮದಿಂದಲೂ..,
ತನುಗಳೆರಡು ಬೆರೆತು
ಹೊಸೆದ ಪ್ರೀತಿಗೆ
ಸಾಕ್ಷಿಯಲ್ಲವೇ ನಾ..!!
ಬರೀ ಹೆಣ್ಣೆಂಬ
ಕಾರಣಕ್ಕೆ ನಿಮಗೆ
ಬೇಡವಾದೇನಾ..??

"ಹೆಣ್ಣು ಭ್ರೂಣ ಹತ್ಯೆ
ಮಹಾಪಾಪ..!!" ಎಂದು
ಭಾಷಣ ಬಿಗಿದು ,
ನನ್ನ ಕೊಂದವರಿಗೆ
ಲೆಕ್ಕವೇ ಇಲ್ಲ..!!
ನನಗೂ ಒಂದು ಮನಸಿದೆ,
ನನಗೂ ಒಂದು ಕನಸಿದೆ,
ಆದರೆ ಅದಕ್ಕೆ ಬೆಲೆಯೇ ಇಲ್ಲ..!!

ನಾನು ನಿಮ್ಮಲ್ಲಿ ಬೇಡುವುದು
ಬರೀ ಒಂದು ಹಿಡಿಯಷ್ಟು ಪ್ರೀತಿ.
ಹೆಣ್ಣು ಎಂಬ ಕಾರಣಕೆ ನಮ್ಮನು
ಕೊಲ್ಲುವುದು ಬೇಡ ಈ ರೀತಿ.

ಅಂಕಲ್-ಆಂಟಿ ನಮ್ಮನು ಕಾಪಾಡಿ,
ದಯವಿಟ್ಟು ನಮ್ಮನು ಕೊಲ್ಲಬೇಡಿ.

38 comments:

  1. ನಾನು ನಿಮ್ಮಲ್ಲಿ ಬೇಡುವುದು
    ಬರೀ ಒಂದು ಹಿಡಿಯಷ್ಟು ಪ್ರೀತಿ.
    ಹೆಣ್ಣು ಎಂಬ ಕಾರಣಕೆ ನಮ್ಮನು
    ಕೊಲ್ಲುವುದು ಬೇಡ ಈ ರೀತಿ. .ಅಬ್ಬ ಯಂಥಹ ಕಲ್ಪನೆ .......ಬೇಡುವುದಿಷ್ಟು ಪ್ರೀತಿಯನ್ನು................ಅಲ್ಲವೇ ................

    ReplyDelete
  2. ಈ ಭ್ರೂಣ ಹತ್ಯೆಗೆ ಗಂಡು ಎಷ್ಟು ಕಾರಣನೋ ಹೆಣ್ಣು ಕೂಡ ಅಷ್ಟೇ ಕಾರಣಳು. ಕೆಲವೊಂದು ಸಂಕೀರ್ಣ ಮನಸ್ಥಿತಿಯ ಹೆಂಗಸರು ಹಾಗು ಗಂಡಸರು ಮೃಗಗಳಿಗಿನ್ನ ಕಡೆಯಾಗಿ ವರ್ತಿಸುತ್ತಾರೆ. ಮದುವೆಯಾಗಿ ಗಂಡನ ಮನೆಗೆ ಕಾಲಿಡುತಿದ್ದ ಹಾಗೆ ಶುರುವಾಗುತ್ತದೆ. ಸರಿಯಾದ ವರದಕ್ಷಿಣೆ ತರಲಿಲ್ಲ ಎಂಬ ಕಾರಣ, ಮೊದಲನೆಯದು ಹೆಣ್ಣು ಮಗುವಾಯಿತು. ಎರಡನೆಯದು ಗಂಡು ಆಗಲೇಬೇಕು. ಸತ್ತಾಗ ಮೋಕ್ಷ ಸಿಗಬೇಕಾದರೆ, ಪಿಂಡಯಿಡಬೇಕಾದರೆ ಗಂಡು ಬೇಕೇಬೇಕು ಎಂಬ ವರತ ಅಜ್ಜಿಯಿಂದ ಶುರುವಾಗಿ ಅತ್ತೆ ನಾದಿನಿಯರ ತನಕ ಬೆಳೆಯುತ್ತದೆ. ಅವರುಗಳು ತಾವು ಒಂದು ಹೆಣ್ಣು ಎಂಬುದನ್ನು ಆ ಕ್ಷಣದಲ್ಲಿ ಮರೆತುಬಿಡುತ್ತಾರೆ. ಗಂಡನಿಂದ ಕಿರುಕುಳ, ಅತ್ತೆ ಮಾವ ನಾದಿನಿಯರಿಂದ ಕಿರುಕುಳ ಹೀಗೆ ಕಿರುಕುಳದ ಕೊಂಡಿ ಬೆಸೆದುಕೊಂಡು ಹೋಗುತ್ತಲೇ ಇರುತ್ತದೆ. ಯಾವ ತಾಯಿಯು ಕೂಡ ತಾನು ಹೊತ್ತ ಪಿಂಡವನ್ನು ಕಳೆದುಕೊಳ್ಳಲು ಇಷ್ಟ ಪಡುವುದಿಲ್ಲ. [ ಸಮಾಜಕ್ಕೆ ಹೆದರಿ ಅಕ್ರಮ ಸಂಬಂಧದ ಫಲವಾದರೆ ತಾಯಿಯೇ ಪ್ರಯತ್ನ ಪಡುತ್ತಾಳೆ.] ವಿಪರ್ಯಾಸವೆಂದರೆ ಈ ಭ್ರೂಣ ಹತ್ಯೆ ವಿದ್ಯಾವಂತರಲ್ಲೇ ಹೆಚ್ಚು. ನಿಮ್ಮ ಗರ್ಭದೊಳಗಿನ ಸತ್ಯ ಪ್ರಸ್ತುತ ಸಮಾಜದ ಕೊಳಕು ಮನಸ್ಥಿತಿಗೆ ಹಿಂದಿದ ಕೈ ಗನ್ನಡಿಯಾಗಿದೆ.

    ReplyDelete
  3. ಸತ್ಯವಾದ ಕವಿತೆ...

    ReplyDelete
  4. ‎"ಹೆಣ್ಣು ಭ್ರೂಣ ಹತ್ಯೆ
    ಮಹಾಪಾಪ..!!" ಎಂದು
    ಭಾಷಣ ಬಿಗಿದು ,
    ನನ್ನ ಕೊಂದವರಿಗೆ
    ಲೆಕ್ಕವೇ ಇಲ್ಲ..........ಮನ ಮುಟ್ಟುವ ಕವನ.

    ReplyDelete
  5. ಲಿಂಗ ನಿರ್ಧಾರಿತ ಭ್ರೂಣ ಹತ್ಯೆ ನಿಜಕ್ಕೂ ಅಸಹ್ಯಕರ ಯೋಚನೆ. ಇದು ಹೆಚ್ಚಿನ ಕಡೆ ನಿಷೇಧಕ್ಕೊಳಗಾಗಿದ್ದರೂ ಕೆಲವು ಡಾಕ್ಟರುಗಳು ಹಣಕ್ಕಾಗಿ ಮಾಡುತ್ತಾರೆ.

    ReplyDelete
  6. ವಾಹ್ ಸೂಪರ್ ರಾಘವೇಂದ್ರ ಅವರೇ

    ReplyDelete
  7. ಆ ಒಂದು ಹಿಡಿಯಷ್ಟು ಪ್ರೀತಿಯನ್ನು ತೋರಿಸಿದರೆ ಸಾಕಲ್ಲವೇ.. ಅವುಗಳನು ಈ ಪ್ರಪಂಚಕ್ಕೆ ಕಾಲಿಡಬಹುದು. ಧನ್ಯವಾದಗಳು ಸುಜಾತಕ್ಕ... Sujatha Vishwanath

    ReplyDelete
  8. ಗೆಳೆಯ ಸತೀಶ್ ಡಿ. ಆರ್. ರಾಮನಗರ ನಿಮ್ಮ ಪ್ರತಿಕ್ರಿಯೇ ಧನ್ಯವಾದಗಳು.

    ReplyDelete
  9. ಇದು ಗರ್ಭದೊಳಗೆ ಅಡಗಿರುವ ಸತ್ಯ .. ಧನ್ಯವಾದಗಳು Purushottham Acharya

    ReplyDelete
  10. ಮಹಾಪಾಪ ಎಂದು ಭಾಷಣ ಬಿಗಿಯುವವರಿಗೇನು ಕಮ್ಮಿ ಇಲ್ಲ. ಆಡೋದು ಆಚಾರ ಮಾಡೋದು ಅನಾಚಾರ... ಎನ್ನುವ ಹಾಗೇ ಎಷ್ಟೋ ಬುದ್ದಿವಂತರೇ ಈ ಕೃತ್ಯಗಳನ್ನು ಮಾಡುತ್ತಾರೆ. ಧನ್ಯವಾದಗಳು Banavasi Somashekhar

    ReplyDelete
  11. ಸಾಮಾಜಿಕ ಕಟು ಸತ್ಯವನ್ನ ಚೆನ್ನಾಗಿ ಬಿಂಬಿಸಿದ್ದೀರ ತುಂಬಾ ಚೆನ್ನಾಗಿದೆ

    ReplyDelete
  12. ಭ್ರೂಣ ಹತ್ಯೆ ಸಮಾಜದ ಪಿಡುಗು. ಮೊಳಕೆಯಲ್ಲಿ ಚಿಗುರು ಚಿವುಟುವುದು ಎಷ್ಟು ಸರಿ ಹೇಳಿ. ಪ್ರತಿಕ್ರಿಯೆಗೆ ಧನ್ಯವಾದಗಳು ಗೆಳೆಯ Santhosh Acharya

    ReplyDelete
  13. ಗೋಪಿನಾಥ ಸರ್. ಈ ಕವಿತೆಗೆ ನಿಮ್ಮ ಪ್ರತಿಕ್ರಿಯೆ ಸಿಕ್ಕಿದ್ದು ನನಗಂತೂ ತುಂಬಾ ಖುಷಿ. ಧನ್ಯವಾದಗಳು Bellala Gopinath Rao ಸರ್...

    ReplyDelete
  14. ಇಂಥ ಪ್ರಜ್ಞಾವಂತ ಸಮಾಜದಲ್ಲಿ ಹೆಣ್ಣಿನ ಶೋಷಣೆ ದಿನ ನಿತ್ಯ ನಡಿತನೇ ಇದೆ ಅದರಲಿ ಭ್ರೂಣ ಹತ್ಯೆಯು ಒಂದು. ಅದರ ಬಗ್ಗೆ ನೀವು ಕವಿತೆ ಬರಿದಿರುವುದು ತುಂಬ ಶ್ಲಾಘನಿಯ.

    ReplyDelete
  15. ಮೊದಲಿನಿಂದಲೂ ಇದು ಸಮಸ್ಯೆಯಾಗೇ ಉಳಿದಿದೆ,
    ಈಗ ಕಾನುನನ್ನು ಎಷ್ಟೇ ಬಿಗಿಗೊಳಿಸಿದರೂ ಕೆಲವು ಮಠ್ಠಾಳರು "ಹೆಣ್ಣು" ಅನ್ನೊ ಕೀಳುಬಾವನೆಯಲ್ಲಿ ಎಲ್ಲರ ಕಣ್ತಪ್ಪಿಸಿ ಈ ದುಷ್ಕ್ರತ್ಯವನ್ನು ಮಾಡುತ್ತಿರುವುದು ವಿಷಾಧನೀಯ...

    ಕವನ ಅರ್ಥಪೂರ್ಣವಾಗಿದೆ..

    ReplyDelete
  16. ಸಂದೇಶ ತುಂಬಾ ಉತ್ತಮವಾಗಿದೆ.. ಆದರೆ ಕೊನೆಯಲ್ಲಿ ಅಂಕಲ್ ಆಂಟಿ ಯಾಕೆ.. ಅಲ್ಲಿ ಅಪ್ಪ ಅಮ್ಮ ಬರಿಯಬೇಕಲ್ಲವೇ.. :)

    ReplyDelete
  17. ಗರ್ಭದೊಳಗಿನ ಮಗುವಿಗೆ ತನ್ನನ್ನು ಕೊಲ್ಲುತ್ತಿರುವುದು ಬರೀ ನನ್ನ ಅಪ್ಪ-ಅಮ್ಮನದೇ ತಪ್ಪಲ್ಲ. ಸುತ್ತಲಿನ ಸಮಾಜದಲ್ಲಿ ಅನೇಕ ಹಿರಿಯರು, ಬುದ್ದಿಜೀವಿಗಳ ತಪ್ಪು ಅಂತಾ. ಅಲ್ಲದೇ ತನ್ನಂತೆ ಅನೇಕ ಹೆಣ್ಣು ಭ್ರೂಣಗಳು ಕೊಲೆಯಾಗುತ್ತಿರುವುದರ ಬಗ್ಗೆ ತಾನು ಬೇರೆಯವರಲ್ಲೂ ಮನವಿ ಮಾಡಿಕೊಳ್ಳುತ್ತಿದೆ. ಪಕ್ಕದ ಮನೆಯವ್ರು ಹಾಗೂ ಬೇರೆ ಹಿರಿಯರನ್ನು ನಾವು ಅಂಕಲ್ - ಆಂಟಿ ಅಂತಾ ಕರೆಯೊಲ್ವೇ.. ಹಾಗೇ ಈ ಮಗು ಕೂಡ ಕರೆಯುತ್ತಿದೆ. ತಮಾಷೆಗೆ ಹೇಳೊದಾದ್ರೆ ಎಷ್ಟೆ ಆದ್ರೂ ಈ ಕಾಲದ ಮಗು ಅಲ್ವಾ..!! ನಿಮ್ಮ ಪ್ರತಿಕ್ರಿಯೆ ನನಗೆ ಖುಷಿ ತಂದಿದೆ. ಅದಕ್ಕಾಗಿ ನಿಮಗೆ ಮನಪೂರ್ವಕ ಧನ್ಯವಾದಗಳು ಗೆಳೆಯ Prashanth P Khatavakar

    ReplyDelete
  18. very touching lines...no words to say....

    ReplyDelete
  19. ಈ ಭ್ರೂಣಹತ್ಯೆ ಕೃತ್ಯಗಳು ನಿಲ್ಲಲಿ ಎಂಬುದೇ ನನ್ನ ಆಶಯ. ನಿಮ್ಮ ಕಾಮೆಂಟಿಗೆ ಧನ್ಯವಾದಗಳು Padma Priya

    ReplyDelete
  20. ಸಾವಿರ ಕಾನೂನುಗಳನ್ನು ಮಾಡಿದರೂ ಪ್ರಯೋಜನವಿಲ್ಲ. ನಮ್ಮ ನಮ್ಮೊಳಗೆ ಒಂದು ಜಾಗೃತಿ ಬರಬೇಕು. ಮಾನವತೆ ಮರೆತು ಭ್ರೂಣಹತ್ಯೆಯಲ್ಲಿ ಪಾಲ್ಗೊಳ್ಳುವವರು ಮನಸು ಬದಲಿಸಿ ಇಂತಹ ಕೃತ್ಯಗಳಿಗೆ ಅವಕಾಶ ಕೊಡದೇ ಇರಲಿ. ಮಾನವತೆ ಮೆರೆಯಲಿ. ಧನ್ಯವಾದಗಳು ಗೆಳೆಯ Pradeep Hegde

    ReplyDelete
  21. ಕರುಳು ಚುರುಕ್ಕೆನ್ನಿಸುವ ನಿಮ್ಮ ಕವಿತೆ ಓದಿದಾಗ "ಹೆಣ್ಣು ಹೆತ್ತವರ ಬಳಗ ಬೆಳೆಯುವುದು ಬೇಗ"- ಶಾಲೆಯಲ್ಲಿ ಓದಿದ ಪದ್ಯ ನೆನಪಾಯ್ತು....ಆದಷ್ಟು ಇಂತಹ ಕವಿತೆಗಳನ್ನೇ ಬರೆಯಿರಿ.ಶುಭವಾಗಲಿ.

    ReplyDelete
  22. ಹೆಣ್ಣು ಭ್ರೂಣದ ಕೈಯಲ್ಲೇ ನುಡಿಸಿದಂತಿದೆ ಕವಿತೆ ರಾಘವೇಂದ್ರರೆ.. ಕರಳ ಹಿಂಡುವ ಕರುಣಾಜನಕ ಕಥಾನವನ್ನು ಕವಿತೆಯಾಗಿಸಿರುವ ನಿಮ್ಮನ್ನು ಅಭಿನಂದಿಸುತ್ತೇನೆ.. ಒಂದು ಮನಮುಟ್ಟುವ ಕವಿತೆ, ಸಮಾಜಮುಖಿಯಾಗಿ ತುಡಿದು ಕೆಲವು ಜನಿಗಾದರೂ ದಾರಿದೀಪಾದರೆ ಕವಿತೆ ಸಾರ್ಥಕವೆನಿಸುತ್ತದೆ.. ನೀವು ಪ್ರೀತಿ ಪ್ರೇಮದ ಗುಂಗಿನಿಂದ ಸ್ವಲ್ಪ ಆಚೆಗೆ ಹೊರಳಿ ಸಮಾಜಮುಖಿಯಾಗಿ ಅರಳಿದ್ದು ಹಿಡಿಸಿತು..:) ಶುಭವಾಗಲಿ..

    ReplyDelete
  23. ಹೆಣ್ಣು ಭ್ರೂಣ ಹತ್ಯೆಯ ವಿರುದ್ಧ ದನಿಯೆತ್ತಿರುವ ನಿಮ್ಮ ಕವಿತೆಯ ಕೂಗು ಎಲ್ಲರ ಮನ ಮುಟ್ಟುತ್ತಿದೆ., ಭ್ರೂಣವೇ ಮಾತನಾಡಿದಂತೆ ಗೋಚರಿಸುತ್ತಿದೆ., ಪದಗಳು ಖತ್ತಿಗಿಂತ ಮೊನಚಾಗಿದೆ.., ಇನ್ನಷ್ಟು ಕವಿತೆಗಳ ಬರೆಯುತ್ತಿರಿ.. :))

    ReplyDelete
  24. ನಿಮ್ಮ ಕವಿತೆಯ ಭಾವ ಮನ ತಟ್ಟಿತು.. ಖಂಡಿತ ಭ್ರೂಣ ಹತ್ಯೆಗಿಂತ ದೊಡ್ಡ ಪಾಪ ಮತ್ತೊಂದಿಲ್ಲ.. ಇಂತಹ ಸಮಾಜಮುಖಿ ಕವಿತೆಗಳು
    ಮತ್ತಷ್ಟು ಬರಲಿ.

    ReplyDelete
  25. ಖಂಡಿತಾ... ಪ್ರಯತ್ನಿಸುತ್ತೇನೆ ಶಿವಣ್ಣ. ನಿಮ್ಮ ಪ್ರತಿಕ್ರಿಯೆಗೆ ಧನ್ಯವಾದಗಳು Hridaya Shiva.

    ReplyDelete
  26. ‎"ನನಗೂ ಒಂದು ಮನಸಿದೆ, ನನಗೂ ಒಂದು ಕನಸಿದೆ.." ಭ್ರೂಣದ ಮಾತಲ್ಲಿ ನುಡಿಸುವಾಗ ನಾನು ಆ ಭ್ರೂಣದಂತೆ ಯೋಚಿಸಿ .. ಯೋಚಿಸಿ ಬರೆದದ್ದಾಯಿತು. ನಿಜ.. ಈ ಕವಿತೆ ಭ್ರೂಣ ಹತ್ಯೆ ಮಾಡುವವರ ಮನಸಲ್ಲು ಬದಲಿಸುವಂತಾದರೆ ನಿಜಕ್ಕೂ ಸಾರ್ಥಕ. ಕನಿಷ್ಟ ಒಂದು ಹೆಣ್ಣು ಜೀವವಾದರೂ ಬದುಕಿಸಿದ ಪುಣ್ಯ ನನ್ನದಾಗುವುದು. ಈ ಕವಿತೆ ಬರೆಯುವಾಗ ನಾನು ನಾನಾಗಿರಲಿಲ್ಲ... ಧನ್ಯವಾದಗಳು.. Prasad V Murthy

    ReplyDelete
  27. ಸಾಮಾಜಿಕ ಪರಿಣಾಮ ಬೀರುವ ಇಂಥ ಪರಿವರ್ತನಾಶೀಲ ಕವನಗಳು ಸದಾ ಬರುತ್ತಲಿರಲಿ.

    ReplyDelete
  28. ಆ ಭ್ರೂಣವೇ ತನ್ನ ನೋವನ್ನು ತಾನು ಹೇಳಿಕೊಂಡರೆ ಅಂಥವವರಿಗೆ (ಭ್ರೂಣ ಹತ್ಯೆ ಮಾಡುವವರು) ಅರ್ಥವಾಗಬಹದು ಅಂತಾ ಆ ಭ್ರೂಣವೇ ನಾನಾಗಿ ಬರೆದ ಕವಿತೆ. ಖಂಡಿತಾ ಇಂಥಾ ಕವಿತೆಗಳನ್ನು ಬರೆಯುತ್ತೇನೆ... ಧನ್ಯವಾದಗಳು ಗೆಳೆಯ Pramod Pammi

    ReplyDelete
  29. ಇನ್ನಷ್ಟೂ ಪ್ರಯತ್ನಿಸುತ್ತೇನೆ..... ಧನ್ಯವಾದಗಳು ಗೆಳೆಯ Paresh Saraf

    ReplyDelete
  30. ಪ್ರಯತ್ನ ಮಾಡುತ್ತೆನೆ...ಗೆಳೆಯ.. Banavasi Somashekhar. ತಮ್ಮ ಕಾಮೆಂಟಿಗೆ ಧನ್ಯವಾದಗಳು..

    ReplyDelete
  31. ಸಾಮಾಜಿಕ ಪರಿವರ್ತನೆಯ ಕಾಳಜಿಯುಳ್ಳ ಪರಿಣಾಮಕಾರೀ ಕವನ.... (ಕೊನೆಗೆ ಅಂಕಲ್_ಆಂಟಿ ಯಾಕೆ ಬಂದರು ಅಂತ ಗೊತ್ತಾಗಲಿಲ್ಲ : )))

    ReplyDelete
  32. ಗರ್ಭದೊಳಗಿನ ಆ ಮಗು ಕವಿತೆ ಓದುತ್ತಿರುವ ನಮಗೇನೆ.... ಅಂಕಲ್ - ಆಂಟಿ ಅಂತಾ ಕರೆಯುತ್ತಾ "ನಮ್ಮನ್ನು ಕಾಪಾಡಿ" ಅಂತ ಗೋಗರೆಯುತ್ತಿದೆ. ತನ್ನ ಅಪ್ಪ-ಅಮ್ಮನಿಗೆ ಹೇಳುತ್ತಿಲ್ಲ. ಆ ಮಗು ಕೂಡ ತನ್ನಂತೆ ಇನ್ನು ಬೇರೆ ಹೆಣ್ಣು ಭ್ರೂಣಹತ್ಯೆ ನಿಲ್ಲಲಿ ಎಂಬುದೇ ಅದರ ಕೋರಿಕೆ. ಆ ಮಗುವಿಗೂ ಕೂಡ ಬೇರೆಯವರು ಚೆನ್ನಾಗಿ ಬಾಳಿ ಬದುಕಲಿ ಎಂಬ ಮಹಾದಾಸೆಯಿಂದ ಮನವಿ ಮಾಡಿಕೊಳ್ಳುತ್ತಿದೆ. ನಿಮ್ಮ ಕಾಮೆಂಟಿಗೆ ಹಾಗೂ ಪ್ರಶ್ನೆಗೆ ಧನ್ಯವಾದಗಳು ಗೆಳೆಯ Vasanth Kumar

    ReplyDelete
  33. ಗರ್ಭದೊಳಗಿನ ಮಗುವಿಗೆ ತನ್ನನ್ನು ಕೊಲ್ಲುತ್ತಿರುವುದು ಬರೀ ನನ್ನ ಅಪ್ಪ-ಅಮ್ಮನದೇ ತಪ್ಪಲ್ಲ. ಸುತ್ತಲಿನ ಸಮಾಜದಲ್ಲಿ ಅನೇಕ ಹಿರಿಯರು, ಬುದ್ದಿಜೀವಿಗಳ ತಪ್ಪು ಅಂತಾ. ಅಲ್ಲದೇ ತನ್ನಂತೆ ಅನೇಕ ಹೆಣ್ಣು ಭ್ರೂಣಗಳು ಕೊಲೆಯಾಗುತ್ತಿರುವುದರ ಬಗ್ಗೆ ತಾನು ಬೇರೆಯವರಲ್ಲೂ ಮನವಿ ಮಾಡಿಕೊಳ್ಳುತ್ತಿದೆ. ಪಕ್ಕದ ಮನೆಯವ್ರು ಹಾಗೂ ಬೇರೆ ಹಿರಿಯರನ್ನು ನಾವು ಅಂಕಲ್ - ಆಂಟಿ ಅಂತಾ ಕರೆಯೊಲ್ವೇ.. ಹಾಗೇ ಈ ಮಗು ಕೂಡ ಕರೆಯುತ್ತಿದೆ. ತಮಾಷೆಗೆ ಹೇಳೊದಾದ್ರೆ ಎಷ್ಟೆ ಆದ್ರೂ ಈ ಕಾಲದ ಮಗು ಅಲ್ವಾ..!! ನಿಮ್ಮ ಪ್ರತಿಕ್ರಿಯೆ ನನಗೆ ಖುಷಿ ತಂದಿದೆ. ಅದಕ್ಕಾಗಿ ನಿಮಗೆ ಮನಪೂರ್ವಕ ಧನ್ಯವಾದಗಳು

    ReplyDelete