Wednesday, April 25, 2012

ಅಂತೂ ಇಂತೂ ಬಂತು




ಅಂತೂ ಇಂತೂ ಬಂತು..
ಬಿಸಿಲಿನ ಧಗೆಯಿಂದ ಬೆಂದ ಇಳೆಗೆ
ಅಬ್ಬಾ..ಮಳೆ ಬಂತು.

ಅಬ್ಬಬ್ಬಾ ರಣಬಿಸಿಲು,
ಮೈಯೆಲ್ಲಾ ಸುಡುತಿರಲು,
ಹರಿಯುತಿದೆ ಸದ್ದಿಲ್ಲದೇ 
ತನುವಲ್ಲಿ ಬೆವರಿನ ಕೋಡಿ.

ಮೈಯನ್ನೆಲ್ಲಾ ತಣ್ಣಗಿಡಲು
ಪಟ್ಟ ಕಸರತ್ತುಗಳೆಷ್ಟೋ.
ಉಪಯೋಗಕ್ಕೆ ಬಾರದ
ಫ್ಯಾನು-ಎ.ಸಿ.ಗಳೆಷ್ಟೋ.
ಈ ಸೆಕೆಗೆ ತಡೆಯದ ನೆಮ್ಮದಿ 
ಉಳಿದಿತ್ತು ಅಷ್ಟೋ ಇಷ್ಟೋ.

ಹೇಗೋ ಆಫೀಸಿನೊಳಗೆ ತಣ್ಣಗೆ 
ಕುಳಿತ ಮಂದಿ ನಾವುಗಳು.
ಅದು ಹೇಗೆ ಕಳೆವರೋ ದಿನ
ರೈತಾಪಿ-ಕೂಲಿಯಾಳುಗಳು.
ಕೊನೆಗೂ ಬಂದೇ ಬಿಟ್ಟಿತ್ತು.
ಜಡಿಮಳೆಯೂ ನಮ್ಮೂರಿನಲಿ..
ಮಳೆರಾಯ ನಿನಗೆ ವಂದನೆಗಳು.

ನಿನ್ನ ಆಗಮನಕೆ ನನಗಾದ ಖುಷಿ,
ಗರಿಬಿಚ್ಚಿ ಕುಣಿದ ನವಿಲಿನಂತೆ.
ಚಿಟಪಟ ಸುರಿದ ಮಳೆಹನಿಗೆ
ಮೊಗವಿಟ್ಟು ನಲಿಯುವಾಗ,ನನ್ನವಳ 
ಸಿಹಿಮುತ್ತುಗಳ ನೆನಪು ಹನಿಯುತ್ತಿತ್ತು.

ಕೇಳಿ ಕಿವಿ ಚಿಟ್ಟು ಹಿಡಿದಿತ್ತು,
ಸೊಳ್ಳೆಗಳ ಗುಂಯ್ ಗುಂಯ್ ರಾಗ,
ಆದರಿಂದು ಸೊಯ್ಯಸೊಯ್ಯನೆ ಬೀಸುವ
ತಣ್ಣನೆ ಗಾಳಿಗೆ..ಮನ ಸೋಲದಿರದೇ.
ಹಾಗೂ ನನ್ನವಳ ಮುಂಗುರುಳ 
ಕಚಗುಳಿ ನೆನಪಿಸದೇ ಇರಲಾರದೇ.

ಕಾದೂ ಕಾದು ಸುಡುತ್ತಿದ್ದ ಭೂಮಿ,
ನೆನೆದು ಹರಡುತ್ತಿತ್ತು ಮಣ್ಣಿನ ಕಂಪು.
ಆ ವಾಸನೆಯೋ ನನ್ನವಳು ಮುಡಿದ 
ಮಲ್ಲಿಗೆಯ ಕಂಪಿನಂತೆ ಕಾಡುತ್ತಿತ್ತು. 
ಮಲಗಿದೆ ನಾನು ಎಲ್ಲಾ ಗೋಜಲು 
ಮರೆತು,ಬಹಳ ದಿನಗಳ ನಂತರದಲಿ.
ನನ್ನಾಕೆ ನನ್ನೆದೆ ಮೇಲೆ ಮಲಗಿ,
ನಿದಿರೆಗೆ ಶರಣಾಗಿದ್ದಳು ಕನಸಿನಲಿ. 

13 comments:

  1. ಹೃದಯ ಶಿವMay 13, 2012 at 11:03 PM

    ಮಳೆ ಮಣ್ಣಿಗಷ್ಟೇ ಅಲ್ಲ ಮನಸಿಗೂ ತಂಪೆರೆಯಬಲ್ಲದು ಎಂದು ತಿಳಿಸುವ ನಿಮ್ಮ ಕವನ ಬರಗಾಲದ ಬಿಸ್ಲೇರಿಯಂತಿದೆ.ಶುಭವಾಗಲಿ.

    ReplyDelete
  2. ಮಳೆ ಬಂದು .. ಮನಸು ತಂಪಾಗಿದ್ದಂತೂ ನಿಜ. ನನ್ನ ಕವನವು ಬರಗಾಲದ ಬಿಸ್ಲೇರಿ ನೀರಿನಂತೆ ತಂಪು ನೀಡಿದೆ ಎಂದು ಹೇಳಿದಿರಿ. ನನಗದೇ ಖುಷಿ. ನಿಮ್ಮ ಕಾಮೆಂಟಿಗೆ ಧನ್ಯವಾದಗಳು ಶಿವಣ್ಣ... Hridaya Shiva

    ReplyDelete
  3. ಮಧುರಾನುಭೂತಿಯ ಕವನ..
    ಮಳೆಯ ತಂಪು ಅನುಭವವನ್ನು, ನಿಮ್ಮಕೆಯ ಸನಿಹದ ಜೊತೆಗೆ ಬೆಸೆದಿದ್ದು ಇಷ್ಟವಾಯಿತು..

    ReplyDelete
  4. ಧನ್ಯವಾದಗಳು ಮಿತ್ರ Bhimasen Purohit

    ReplyDelete
  5. ನಮ್ಮೊಳಗೂ ಮಳೆ ಸುರಿಸಿಬಿಟ್ಟಿರಿ.. ತುಂಬಾನೇ ಚನ್ನಾಗಿದೆ..

    ReplyDelete
  6. ಧನ್ಯವಾದಗಳು ಮಿತ್ರ Manju Varaga

    ReplyDelete
  7. nice .....................

    ReplyDelete
  8. Thank U Kiran Papu and Phani Aalur

    ReplyDelete
  9. super kavana....

    ReplyDelete
  10. ತುಂಬ ಚೆನ್ನಾಗಿ ಮೂಡಿಬಂದಿದೆ. ನಿಮ್ಮ ಕವನದ ಎಲ್ಲ ಸಾಲು ಎಲ್ಲರ ಅನುಭವಕ್ಕೆ ಬಂಧಿರುವನ್ತದು.

    ReplyDelete
  11. ಇಷ್ಟ ಪಟ್ಟ, ಮೆಚ್ಚಿ ನುಡಿ ಮೂಡಿಸಿದ ಎಲ್ಲಾ ಸಹೃದಯರಿಗೂ ಧನ್ಯವಾದಗಳು :)

    ReplyDelete