ಹ್ಯಾಂಗ ಮರೆಯಲಿ.. ಅಣ್ಣಾ..
ನಿನ್ನ ನಾ ಹ್ಯಾಂಗ ಮರೆಯಲಿ.
ಒಂದೇ ಬಳ್ಳಿಯ ಹೂಗಳು ನಾವು,
ನಾ ನಿನ್ನೊಲವಿನ ತಂಗಿಯಲ್ಲವೇನು..?
ಅಪ್ಪ-ಅಮ್ಮನಂತೆ ಸದಾ ಮುದ್ದಿಸುವ ನೀನು,
ನಿನಗಿರದ ಜಡೆ ಎಳೆದು ಕಾಡಿಸಿಲ್ಲವೇನು..?
ಹಾಗೆಯೇ ಭುಜದ ಮೇಲ್ಹೊತ್ತು ಆಡಿಸಿಲ್ಲವೇನು..?
ಅಪ್ಪ-ಅಮ್ಮ-ಅಣ್ಣನ ಪ್ರೀತಿಯನು ಪಡೆದ
ನಿಮ್ಮ ಮುದ್ದಿನ ಮನೆಮಗಳು ನಾನು.
ನಾ ಮಾಡಿದ ತಪ್ಪುಗಳಿಗೆ,ನೀ ಅಪ್ಪನ
ಬಳಿ ತಿಂದ ಬೆತ್ತದೇಟುಗಳಿಗೆ ಲೆಕ್ಕವಿಲ್ಲ.
ಬಾಲ್ಯದಲ್ಲಿ,ಅಪ್ಪ ಕೊಡಿಸದ ಬಳೆಗಳನ್ನು
ಕೂಡಿಟ್ಟ ಕಾಸಲ್ಲಿ ಕೊಡಿಸಿದ್ದು,ನಾ ಮರೆಯೊಲ್ಲ.
ಸಾವಿರ ಜನ್ಮದ ಪುಣ್ಯವಿರಬೇಕು ಎನಿಸುತ್ತೆ;
ನಿನ್ನ ಅಕ್ಕರೆಯ ಪ್ರೀತಿಗೆ ಸಾಟಿಯೇ ಇಲ್ಲ.
ಅಣ್ಣಾ, ನಿನ್ನ ನೆನೆಯದ ದಿನಗಳಿಲ್ಲ ಬಿಡು,
ಸದಾ ಪಕ್ಕದಲ್ಲೇ ಇದ್ದರೂ ನನ್ನ ನಲ್ಲ.
ಮನಸು ಖುಷಿಯಾಗಿತ್ತು, ಕಂಡಾಗ ನನ್ನ
ಮದುವೆ ದಿನದಂದು ನಿನ್ನ ಕಣ್ಗಳಲಿ ಸಂಭ್ರಮ.
ತಣ್ಣನೆ ರಾತ್ರಿಯಲಿ, ಅಮ್ಮನ ಕೈತುತ್ತು
ತಿನ್ನುವಾಗ ತುಂಟತನಕೆ ನಗುತ್ತಿದ್ದ ಚಂದ್ರಮ.
ಮತ್ತೆ ನಿನ್ನೊಟ್ಟಿಗೆ ಆ ಚಂದಿರನ ಬೆಳಕಲ್ಲಿ
ಅಮ್ಮನ ಕೈತುತ್ತು ತಿನ್ನುವಾಸೆ ನನಗಿನ್ನು.
ನನ್ನುಸಿರು ಕಣೋ ನಿನ್ನ ಈ ಅಕ್ಕರೆಯ ಪ್ರೇಮ
tumbha chennagide raghu.. kp it up...
ReplyDeleteಧನ್ಯವಾದಗಳು ಮಿತ್ರ Vasantha B Eshwaragere
ReplyDeleteಬಾಂದ್ಯವ್ಯದೊಡನಾಟದ ಆತ್ಮೀಯ ಅನುಭವ ಸುಂದರವಾಗಿ ಮೂಡಿದೆ.
ReplyDeleteಚನ್ನಾಗಿದೆ ಅಣ್ಣ ತಂಗಿಯ ಭಾಂದವ್ಯ
ReplyDeleteಕವಿತೆಯ ವಸ್ತು ವಿಷಯದಲ್ಲಿ ಅಭ್ಯಂತರವಿಲ್ಲ... ಆದರೆ ಇನ್ನೂ ಹದಕ್ಕೆ ಬರಬೇಕಾಗಿತ್ತು... ಲಯಬದ್ಧ ಸಾಲುಗಳು ಓದುಗನನ್ನು ಕವಿತೆಯ ಆಸ್ವಾದನೆಗೆ ಮಾನಸಿಕವಾಗಿ ಸಿದ್ಧ ಪಡಿಸುತ್ತದೆ... ನಿಮ್ಮ ಹಿಂದಿನ ಕವಿತೆಗೆ ಹೋಲಿಸಿದರೆ ಸ್ವಲ್ಪ ಅವಸರವಾಯಿತೇನೋ....
ReplyDeleteಅಣ್ಣ ತಂಗಿಯ ಬಾಂಧವ್ಯ ಚನ್ನಾಗಿ ಮೂಡಿಬಂದಿದೆ
ReplyDeleteರಕ್ತ ಹಂಚಿಕೊಂಡ ಅಕ್ಕ-ತಂಗಿಯರು ಇರದಿದ್ದರೂ... ಆ ಪ್ರೀತಿ-ವಾತ್ಸಲ್ಯ ಹಂಚಿಕೊಂಡ ನನ್ನೆಲ್ಲಾ ಸೋದರಿಯರಿಗೆ ಈ ಕವಿತೆ ಅರ್ಪಿತ.
ReplyDeleteಧನ್ಯವಾದಗಳು ಮಿತ್ರ ... Banavasi Somashekhar
ReplyDeleteಕವಿತೆ ಮೆಚ್ಚಿ, ಕಾಮೆಂಟು ನೀಡಿದ ಮಮತಕ್ಕ .. ಧನ್ಯವಾದಗಳು . Mamatha Keelar
ReplyDeleteನಿಜ ಮೋಹನಣ್ಣ. ಈ ಕವಿತೆ ತುಸು ಅವಸರದಲ್ಲೇ ಬರೆದದ್ದು. ಈಚೆಗಂತೂ ತುಂಬಾ ಬಿಜಿಯಾಗಿಬಿಟ್ಟಿದ್ದೇನೆ. ಆದರೂ ನನ್ನೊಳಗಿನ ಕವಿ ಮಹಾಶಯ ... ಸುಮ್ಮನಿರಲು ಸಾಧ್ಯವೇ ಹೇಳಿ. ಹಾಗಾಗಿ ಅವಸರದಲ್ಲಿಯೇ ಬರೆದದ್ದಾಯಿತು. ಇನ್ನೂ ಉತ್ತಮ ಕವಿತೆಗಳ ರಚನೆಗೆ ಒತ್ತು ನೀಡಲು ಶ್ರಮಿಸುತ್ತೇನೆ. ನಿಮ್ಮ ನುಡಿಗೆ ನಮನಗಳು ಮಿತ್ರ.. Mohan V Kollegal
ReplyDeleteಧನ್ಯವಾದಗಳು ಮಿತ್ರ ಸತೀಶ್ ಡಿ.ಆರ್. ರಾಮನಗರ.
ReplyDeleteThis comment has been removed by the author.
ReplyDeleteಧನ್ಯವಾದಗಳು ಮಿತ್ರ ವಸಂತ್ ಆರ್.
ReplyDeleteಪಧ್ಯ ತುಂಬಾ ಚೆನ್ನಾಗಿದೆ ...
ReplyDeleteಪ್ರೀತಿಯ ಸಾಲುಗಳು ಚೆನ್ನಾಗಿದೆ ಇಷ್ಟವಾಯಿತು!
ReplyDeleteಇಷ್ಟಪಟ್ಟ ನಿಮಗೆ ಧನ್ಯವಾದಗಳು ಮಿತ್ರ Prakash Srinivas
ReplyDeleteಅಣ್ಣ ತಂಗಿಯ ಬಾಂಧವ್ಯ ಚನ್ನಾಗಿ ಮೂಡಿಬಂದಿದೆ
ReplyDeleteಧನ್ಯವಾದಗಳು ಮಿತ್ರ .. Hussain Muhammed
ReplyDeletewow nic one
ReplyDeleteವಾಹ್ ತುಂಬ ಮುದ್ದಾಗಿದೆ ನಲ್ಮೆಯ ಪದ್ಯ
ReplyDeleteಧನ್ಯವಾದಗಳು Anikethan Sharma
ReplyDeleteಒಂದೇ ಬಳ್ಳಿಯ ಹೂಗಳು ನಾವು,
ReplyDeleteನಾ ನಿನ್ನೊಲವಿನ ತಂಗಿಯಲ್ಲವೇನು..?
ಅಪ್ಪ-ಅಮ್ಮನಂತೆ ಸದಾ ಮುದ್ದಿಸುವ ನೀನು,
ನಿನಗಿರದ ಜಡೆ ಎಳೆದು ಕಾಡಿಸಿಲ್ಲವೇನು..?
ಹಾಗೆಯೇ ಭುಜದ ಮೇಲ್ಹೊತ್ತು ಆಡಿಸಿಲ್ಲವೇನು..?
ಅಪ್ಪ-ಅಮ್ಮ-ಅಣ್ಣನ ಪ್ರೀತಿಯನು ಪಡೆದ
ನಿಮ್ಮ ಮುದ್ದಿನ ಮನೆಮಗಳು ನಾನು. tumba chennagide brother
ಕವಿತೆ ಮೆಚ್ಚಿದ ಸೋದರಿ Ambika Bv ಧನ್ಯವಾದಗಳು
ReplyDeleteರಾಘಣ್ಣ ಅಣ್ಣ ತಂಗಿಯ ಅನುಬಂಧವನ್ನು ಬಹಳ ಅಧ್ಬುತವಾಗಿ ಬಣ್ಣಿಸಿದ್ದೀರಿ,ಅಭಿನಂದನೆಗಳು
ReplyDeleteನಿಮ್ಮ ತುಂಬು ಹೃದಯದಿಂದ "ರಾಘಣ್ಣ.." ಎಂದದ್ದು ತುಂಬಾ ಸಂತೋಷವಾಯಿತು. ನಿಮ್ಮ ಅಭಿನಂದನೆಗಳಿಗೆ ಧನ್ಯವಾದಗಳು ಮಿತ್ರ .. Pavan Harithasa
ReplyDeleteನಿಮ್ಮ ಕವನವನ್ನು ಓದುತ್ತಾ,ನನ್ನ ಕಣ್ಣು ಕೂಡಾ ತೇವವಾಯ್ತು,,ABOVE THOSE TWO LINES,,,, ONDE BALLIYA HOOGALU,,NAAVU,,,ITS REALLY TOUCHY,,,
ReplyDeleteಹಾಗಾದ್ರೆ.. ನೀವು ನಿಮ್ಮ ಮುದ್ದಿನ ತಂಗಿಯನ್ನು ತುಂಬಾ ಮಿಸ್ ಮಾಡ್ಕೋಂಡಿದ್ದೀರಾ ಅನಿಸ್ತು. ನಿಮ್ಮ ಪ್ರೀತಿಯ ತಂಗಿಯನ್ನೊಮ್ಮೆ... ಜೊತೆ ಸ್ವಲ್ಪ ಹೊತ್ತು ಮಾತನಾಡಿಬಿಡಿ. ನಿಮ್ಮ ಹೃದಯಕೆ ಇನ್ನಷ್ಟು ಆನಂದ ಸಿಗುತ್ತದೆ. ನಿಮ್ಮ ಮನಸಿನಾಳಕ್ಕೆ ಇಳಿದು ಹೃದಯದ ಮಾತನ್ನು ಕೇಳಿದ ನನ್ನ ಕವಿತೆ ... ನಿಮ್ಮ ಮೆಚ್ಚುಗೆ ಪಡೆದದ್ದು ಖುಷಿ ತಂದಿತು. ಧನ್ಯವಾದಗಳು Ramesh Kulkarni ರವರೇ.. ನಿಮ್ಮ ಸೋದರಿಯರಿಗೂ ಕೂಡ ಹೃತ್ಪೂರ್ವಕ ಅಭಿನಂದನೆಗಳು.
ReplyDeleteನನ್ನ ಮನಸಿನ ಭಾವನೆಗಳು ನೀನೆ ಹೇಳಿದಂತಿದೆ... ಚೆನ್ನಾಗಿದೆ..
ReplyDeleteರಕ್ಷಾಬಂದನದ ನೆಪದಲ್ಲಿ ತಂತಿ ಅಣ್ಣನಿಗಾಗಿ ಬರೆದುಕೊಂಡ ಈ ಕವನ ನನಗೆ ಮೆಚ್ಚುಗೆಯಾಯಿತು.
ReplyDeleteಹ್ಯಾಂಗ ಮರೆಯಲಿ ಅಣ್ಣ ಎಂಬ ಕವನವು ಅಣ್ಣನ ಮೇಲಿನ ನಿಜವಾದ ಪ್ರೀತಿಯನ್ನು ತಂಗಿ ಮನಸ್ಸಿನ ಎಳೆ ಎಳೆಯನ್ನು ಪ್ರತಿಬಿಂಬಿಸುವ ಪ್ರಯತ್ನ ಈ ಕವನದ ಮೂಲಕ ಸೋಗಸಾಗಿ ಮೂಡಿಬಂದಿದೆ.
ReplyDelete