Wednesday, May 9, 2012

ಹ್ಯಾಂಗ ಮರೆಯಲಿ..



ಹ್ಯಾಂಗ ಮರೆಯಲಿ.. ಅಣ್ಣಾ..
ನಿನ್ನ ನಾ ಹ್ಯಾಂಗ ಮರೆಯಲಿ.

ಒಂದೇ ಬಳ್ಳಿಯ ಹೂಗಳು ನಾವು,
ನಾ ನಿನ್ನೊಲವಿನ ತಂಗಿಯಲ್ಲವೇನು..?
ಅಪ್ಪ-ಅಮ್ಮನಂತೆ ಸದಾ ಮುದ್ದಿಸುವ ನೀನು,
ನಿನಗಿರದ ಜಡೆ ಎಳೆದು ಕಾಡಿಸಿಲ್ಲವೇನು..?
ಹಾಗೆಯೇ ಭುಜದ ಮೇಲ್ಹೊತ್ತು ಆಡಿಸಿಲ್ಲವೇನು..?
ಅಪ್ಪ-ಅಮ್ಮ-ಅಣ್ಣನ ಪ್ರೀತಿಯನು ಪಡೆದ 
ನಿಮ್ಮ ಮುದ್ದಿನ ಮನೆಮಗಳು ನಾನು.

ನಾ ಮಾಡಿದ ತಪ್ಪುಗಳಿಗೆ,ನೀ ಅಪ್ಪನ
ಬಳಿ ತಿಂದ ಬೆತ್ತದೇಟುಗಳಿಗೆ ಲೆಕ್ಕವಿಲ್ಲ. 
ಬಾಲ್ಯದಲ್ಲಿ,ಅಪ್ಪ ಕೊಡಿಸದ ಬಳೆಗಳನ್ನು 
ಕೂಡಿಟ್ಟ ಕಾಸಲ್ಲಿ ಕೊಡಿಸಿದ್ದು,ನಾ ಮರೆಯೊಲ್ಲ.
ಸಾವಿರ ಜನ್ಮದ ಪುಣ್ಯವಿರಬೇಕು ಎನಿಸುತ್ತೆ;
ನಿನ್ನ ಅಕ್ಕರೆಯ ಪ್ರೀತಿಗೆ ಸಾಟಿಯೇ ಇಲ್ಲ.
ಅಣ್ಣಾ, ನಿನ್ನ ನೆನೆಯದ ದಿನಗಳಿಲ್ಲ ಬಿಡು,
ಸದಾ ಪಕ್ಕದಲ್ಲೇ ಇದ್ದರೂ ನನ್ನ ನಲ್ಲ.

ಮನಸು ಖುಷಿಯಾಗಿತ್ತು, ಕಂಡಾಗ ನನ್ನ
ಮದುವೆ ದಿನದಂದು ನಿನ್ನ ಕಣ್ಗಳಲಿ ಸಂಭ್ರಮ.
ತಣ್ಣನೆ ರಾತ್ರಿಯಲಿ, ಅಮ್ಮನ ಕೈತುತ್ತು
ತಿನ್ನುವಾಗ ತುಂಟತನಕೆ ನಗುತ್ತಿದ್ದ ಚಂದ್ರಮ.
ಮತ್ತೆ ನಿನ್ನೊಟ್ಟಿಗೆ ಆ ಚಂದಿರನ ಬೆಳಕಲ್ಲಿ
ಅಮ್ಮನ ಕೈತುತ್ತು  ತಿನ್ನುವಾಸೆ ನನಗಿನ್ನು.
ನನ್ನುಸಿರು ಕಣೋ ನಿನ್ನ ಈ ಅಕ್ಕರೆಯ ಪ್ರೇಮ

30 comments:

  1. ಧನ್ಯವಾದಗಳು ಮಿತ್ರ Vasantha B Eshwaragere

    ReplyDelete
  2. Banavasi SomashekarMay 13, 2012 at 10:45 PM

    ಬಾಂದ್ಯವ್ಯದೊಡನಾಟದ ಆತ್ಮೀಯ ಅನುಭವ ಸುಂದರವಾಗಿ ಮೂಡಿದೆ.

    ReplyDelete
  3. ಚನ್ನಾಗಿದೆ ಅಣ್ಣ ತಂಗಿಯ ಭಾಂದವ್ಯ

    ReplyDelete
  4. ಕವಿತೆಯ ವಸ್ತು ವಿಷಯದಲ್ಲಿ ಅಭ್ಯಂತರವಿಲ್ಲ... ಆದರೆ ಇನ್ನೂ ಹದಕ್ಕೆ ಬರಬೇಕಾಗಿತ್ತು... ಲಯಬದ್ಧ ಸಾಲುಗಳು ಓದುಗನನ್ನು ಕವಿತೆಯ ಆಸ್ವಾದನೆಗೆ ಮಾನಸಿಕವಾಗಿ ಸಿದ್ಧ ಪಡಿಸುತ್ತದೆ... ನಿಮ್ಮ ಹಿಂದಿನ ಕವಿತೆಗೆ ಹೋಲಿಸಿದರೆ ಸ್ವಲ್ಪ ಅವಸರವಾಯಿತೇನೋ....

    ReplyDelete
  5. sathish D RamanagarMay 13, 2012 at 10:46 PM

    ಅಣ್ಣ ತಂಗಿಯ ಬಾಂಧವ್ಯ ಚನ್ನಾಗಿ ಮೂಡಿಬಂದಿದೆ

    ReplyDelete
  6. ರಕ್ತ ಹಂಚಿಕೊಂಡ ಅಕ್ಕ-ತಂಗಿಯರು ಇರದಿದ್ದರೂ... ಆ ಪ್ರೀತಿ-ವಾತ್ಸಲ್ಯ ಹಂಚಿಕೊಂಡ ನನ್ನೆಲ್ಲಾ ಸೋದರಿಯರಿಗೆ ಈ ಕವಿತೆ ಅರ್ಪಿತ.

    ReplyDelete
  7. ಧನ್ಯವಾದಗಳು ಮಿತ್ರ ... Banavasi Somashekhar

    ReplyDelete
  8. ಕವಿತೆ ಮೆಚ್ಚಿ, ಕಾಮೆಂಟು ನೀಡಿದ ಮಮತಕ್ಕ .. ಧನ್ಯವಾದಗಳು . Mamatha Keelar

    ReplyDelete
  9. ನಿಜ ಮೋಹನಣ್ಣ. ಈ ಕವಿತೆ ತುಸು ಅವಸರದಲ್ಲೇ ಬರೆದದ್ದು. ಈಚೆಗಂತೂ ತುಂಬಾ ಬಿಜಿಯಾಗಿಬಿಟ್ಟಿದ್ದೇನೆ. ಆದರೂ ನನ್ನೊಳಗಿನ ಕವಿ ಮಹಾಶಯ ... ಸುಮ್ಮನಿರಲು ಸಾಧ್ಯವೇ ಹೇಳಿ. ಹಾಗಾಗಿ ಅವಸರದಲ್ಲಿಯೇ ಬರೆದದ್ದಾಯಿತು. ಇನ್ನೂ ಉತ್ತಮ ಕವಿತೆಗಳ ರಚನೆಗೆ ಒತ್ತು ನೀಡಲು ಶ್ರಮಿಸುತ್ತೇನೆ. ನಿಮ್ಮ ನುಡಿಗೆ ನಮನಗಳು ಮಿತ್ರ.. Mohan V Kollegal

    ReplyDelete
  10. ಧನ್ಯವಾದಗಳು ಮಿತ್ರ ಸತೀಶ್ ಡಿ.ಆರ್. ರಾಮನಗರ.

    ReplyDelete
  11. This comment has been removed by the author.

    ReplyDelete
  12. ಧನ್ಯವಾದಗಳು ಮಿತ್ರ ವಸಂತ್ ಆರ್.

    ReplyDelete
  13. ಪಧ್ಯ ತುಂಬಾ ಚೆನ್ನಾಗಿದೆ ...

    ReplyDelete
  14. ಪ್ರೀತಿಯ ಸಾಲುಗಳು ಚೆನ್ನಾಗಿದೆ ಇಷ್ಟವಾಯಿತು!

    ReplyDelete
  15. ಇಷ್ಟಪಟ್ಟ ನಿಮಗೆ ಧನ್ಯವಾದಗಳು ಮಿತ್ರ Prakash Srinivas

    ReplyDelete
  16. ಅಣ್ಣ ತಂಗಿಯ ಬಾಂಧವ್ಯ ಚನ್ನಾಗಿ ಮೂಡಿಬಂದಿದೆ

    ReplyDelete
  17. ಧನ್ಯವಾದಗಳು ಮಿತ್ರ .. Hussain Muhammed

    ReplyDelete
  18. ವಾಹ್ ತುಂಬ ಮುದ್ದಾಗಿದೆ ನಲ್ಮೆಯ ಪದ್ಯ

    ReplyDelete
  19. ಧನ್ಯವಾದಗಳು Anikethan Sharma

    ReplyDelete
  20. ಒಂದೇ ಬಳ್ಳಿಯ ಹೂಗಳು ನಾವು,
    ನಾ ನಿನ್ನೊಲವಿನ ತಂಗಿಯಲ್ಲವೇನು..?
    ಅಪ್ಪ-ಅಮ್ಮನಂತೆ ಸದಾ ಮುದ್ದಿಸುವ ನೀನು,
    ನಿನಗಿರದ ಜಡೆ ಎಳೆದು ಕಾಡಿಸಿಲ್ಲವೇನು..?
    ಹಾಗೆಯೇ ಭುಜದ ಮೇಲ್ಹೊತ್ತು ಆಡಿಸಿಲ್ಲವೇನು..?
    ಅಪ್ಪ-ಅಮ್ಮ-ಅಣ್ಣನ ಪ್ರೀತಿಯನು ಪಡೆದ
    ನಿಮ್ಮ ಮುದ್ದಿನ ಮನೆಮಗಳು ನಾನು. tumba chennagide brother

    ReplyDelete
  21. ಕವಿತೆ ಮೆಚ್ಚಿದ ಸೋದರಿ Ambika Bv ಧನ್ಯವಾದಗಳು

    ReplyDelete
  22. ರಾಘಣ್ಣ ಅಣ್ಣ ತಂಗಿಯ ಅನುಬಂಧವನ್ನು ಬಹಳ ಅಧ್ಬುತವಾಗಿ ಬಣ್ಣಿಸಿದ್ದೀರಿ,ಅಭಿನಂದನೆಗಳು

    ReplyDelete
  23. ನಿಮ್ಮ ತುಂಬು ಹೃದಯದಿಂದ "ರಾಘಣ್ಣ.." ಎಂದದ್ದು ತುಂಬಾ ಸಂತೋಷವಾಯಿತು. ನಿಮ್ಮ ಅಭಿನಂದನೆಗಳಿಗೆ ಧನ್ಯವಾದಗಳು ಮಿತ್ರ .. Pavan Harithasa

    ReplyDelete
  24. ನಿಮ್ಮ ಕವನವನ್ನು ಓದುತ್ತಾ,ನನ್ನ ಕಣ್ಣು ಕೂಡಾ ತೇವವಾಯ್ತು,,ABOVE THOSE TWO LINES,,,, ONDE BALLIYA HOOGALU,,NAAVU,,,ITS REALLY TOUCHY,,,

    ReplyDelete
  25. ಹಾಗಾದ್ರೆ.. ನೀವು ನಿಮ್ಮ ಮುದ್ದಿನ ತಂಗಿಯನ್ನು ತುಂಬಾ ಮಿಸ್ ಮಾಡ್ಕೋಂಡಿದ್ದೀರಾ ಅನಿಸ್ತು. ನಿಮ್ಮ ಪ್ರೀತಿಯ ತಂಗಿಯನ್ನೊಮ್ಮೆ... ಜೊತೆ ಸ್ವಲ್ಪ ಹೊತ್ತು ಮಾತನಾಡಿಬಿಡಿ. ನಿಮ್ಮ ಹೃದಯಕೆ ಇನ್ನಷ್ಟು ಆನಂದ ಸಿಗುತ್ತದೆ. ನಿಮ್ಮ ಮನಸಿನಾಳಕ್ಕೆ ಇಳಿದು ಹೃದಯದ ಮಾತನ್ನು ಕೇಳಿದ ನನ್ನ ಕವಿತೆ ... ನಿಮ್ಮ ಮೆಚ್ಚುಗೆ ಪಡೆದದ್ದು ಖುಷಿ ತಂದಿತು. ಧನ್ಯವಾದಗಳು Ramesh Kulkarni ರವರೇ.. ನಿಮ್ಮ ಸೋದರಿಯರಿಗೂ ಕೂಡ ಹೃತ್ಪೂರ್ವಕ ಅಭಿನಂದನೆಗಳು.

    ReplyDelete
  26. ನನ್ನ ಮನಸಿನ ಭಾವನೆಗಳು ನೀನೆ ಹೇಳಿದಂತಿದೆ... ಚೆನ್ನಾಗಿದೆ..

    ReplyDelete
  27. ರಕ್ಷಾಬಂದನದ ನೆಪದಲ್ಲಿ ತಂತಿ ಅಣ್ಣನಿಗಾಗಿ ಬರೆದುಕೊಂಡ ಈ ಕವನ ನನಗೆ ಮೆಚ್ಚುಗೆಯಾಯಿತು.

    ReplyDelete
  28. ಹ್ಯಾಂಗ ಮರೆಯಲಿ ಅಣ್ಣ ಎಂಬ ಕವನವು ಅಣ್ಣನ ಮೇಲಿನ ನಿಜವಾದ ಪ್ರೀತಿಯನ್ನು ತಂಗಿ ಮನಸ್ಸಿನ ಎಳೆ ಎಳೆಯನ್ನು ಪ್ರತಿಬಿಂಬಿಸುವ ಪ್ರಯತ್ನ ಈ ಕವನದ ಮೂಲಕ ಸೋಗಸಾಗಿ ಮೂಡಿಬಂದಿದೆ.

    ReplyDelete