Wednesday, June 13, 2012

ನನ್ನ ಪಾಡು...


ನನ್ನ ನಲ್ಲನದೋ ಹೊತ್ತಲ್ಲದ 
ಹೊತ್ತಲ್ಲಿ ಪದ್ಯ ಗೀಚುವ ಗೀಳು.
ನನಗಂತೂ ತಪ್ಪಲಿಲ್ಲ.. ದಿನವೂ
ಅವರಿಂದ ಅದನು ಕೇಳುವ ಗೋಳು.
ಯಾರಿಗೆ ಹೇಳಲಿ ನನ್ನ ಈ ಪಾಡು.
ಕವಿಯತ್ರಿಯನು ಕಟ್ಟಿಕೊಂಡ ಗಂಡಿಗೂ
ಕೂಡ ಇರಬಹುದು ಇದೇ ಪಾಡು..!!

ಆರು ಗಂಟೆಗೆ ಬರಬೇಕಾದ ಪೇಪರ್ ಬರಲಿಲ್ಲ,
ಎಂಟು ಗಂಟೆಯಾದರೂ ಹಾಲಿನ್ನೂ ಬಂದಿಲ್ಲ.
ಗಗನಕ್ಕೇರಿದ ಬೆಲೆಗಳ ನಡುವೆ,
ದಿನಸಿಯೂ ಕೂಡ ಪೂರ್ಣ ತರಲಿಲ್ಲ.
ಉಳಿದೆರಡು ಈರುಳ್ಳಿ-ಟೊಮ್ಯಾಟೋ ಬಳಸಿ,
ಮಾಡಬೇಕಾದ ತಿಂಡಿಯೂ ಮುಗಿದಿಲ್ಲ.
ಆದರೇನು ಮಾಡೋದು... ನನ್ನ ನಲ್ಲನಿಗೆ
ಇದ್ಯಾವುದರ ಪರಿವೆಯೇ..ಇಲ್ಲ.

ಎಂಥದೋ ಏನೋ ಸರಸರನೇ ಮಾಡಿ,
ಊಟ ಕಳುಹಿಸುವುದನು ಕೂಡ ಮರೆಯಲಿಲ್ಲ.
ಇದೇ ಗಡಿಬಿಡಿಯಲ್ಲಿ ಓಡುವ ಕಾಲವ ನೋಡಿ,
ಬಡಬಡಿಸುವಾಗ ನೆಂಟರೇಕೆ ಬಂದರೋ ತಿಳಿಯಲಿಲ್ಲ.
ಕೃತಕ ನಗೆ ಬೀರಿ, ಮನದೊಳಗೆ ಹೌಹಾರಿ,
ಕಾಫಿ ಕೊಟ್ಟು ನೆಂಟರನು ಸಾಗಿಸುವುದು ತಪ್ಪಲಿಲ್ಲ.
ಆದರೇನು ಮಾಡೋದು... ನನ್ನ ನಲ್ಲನಿಗೆ
ಇದ್ಯಾವುದರ ಪರಿವೆಯೇ..ಇಲ್ಲ.

ಆಫೀಸಿಂದ ಬಂದೊಡನೆ, ನನ್ನ ವ್ಯಥೆ ಕೇಳದೆ
ಸ್ನೇಹಿತರ ಜೊತೆ ಹರಟಲು ಹೊರಟುಬಿಟ್ಟರಲ್ಲ.
ಅಂತೂ ರಾತ್ರಿ ಊಟದ ಹೊತ್ತು, 
ತುಸು ತಂಗಾಳಿ ಬೀಸುತಿತ್ತು,ಜೊತೆಯಾಗಿ
ಊಟ ಮಾಡಿ, ನಲ್ಲನೊಟ್ಟಿಗೆ ಕುಳಿತಾಗ
ಬಿದಿಗೆ ಚಂದ್ರಮನು ಇನ್ನೂ ಮೂಡಿರಲಿಲ್ಲ.
ಅದೆಂತಾ ಮಾಯಕಾರನೋ ಏನೋ..? ನನ್ನ ನಲ್ಲ.
ತಂಗಾಳಿಯಲಿ, ತಾನು ತಂದ ಮಲ್ಲಿಗೆಯ ಮುಡಿಸಿ,
ಹೊಗಳಲು ಶುರು ಮಾಡಿದರು, ಪದಪುಂಜಗಳ ಬಳಸಿ,
ಇವರ ಕಾವ್ಯ ಮೋಡಿಗೆ ಸೋಲದಿರಲು ಸಾಧ್ಯವಾಗಲಿಲ್ಲ.
ಬೆಳಗಿನಿಂದ ನಾ ಪಟ್ಟ ವ್ಯಥಯು.. ಅವರ ಕವಿತೆಯ
ಮೋಹಕೆ ಸಿಲುಕಿ, ಎಲ್ಲಾ ಮರೆತುಹೋಯಿತಲ್ಲ..!! 

26 comments:

  1. ನೀವೂ ಕೂಡ ನಲ್ಲನನು ಇನ್ನಷ್ಟು ಹತ್ತಿರ ಸೆಳೆದುಕೊಳ್ಳಿ. ಆತ್ಮೀಯತೆ ಅಥವಾ ಒಲವು ತುಂಬಿರುವಾಗ ಬಹುವಚನದ ಬಳಕೆ ಸ್ವಲ್ಪ ಅಭಾಸವಾದಂತೆ ಅನಿಸಿತು. ಇನ್ನಷ್ಟು ಭಾವ ಕೊಡಬಹುದಿತ್ತು ನಲ್ಲ ಕವಿ ಮನಸಿಗೆ.

    ReplyDelete
  2. ಇಲ್ಲಿ ನನಗೆ ಬಲು ಇಷ್ಟವಾದದ್ದು ಕವಿಯತ್ರಿಯ ಗಂಡಂದಿರ ಅಥವಾ ಕವಿಗಳ ಪತ್ನಿಯರ ಪಾಡನ್ನು ಮನೋವೇದಕವಾಗಿ ಚಿತ್ರಿಸಿದ್ದು.

    ನನ್ನ ಕವನಗಳ ಕೇಳುವಾಗ ನನ್ನ ಪತ್ನಿ ಪಾಪ ಎಷ್ಟು ಬೈದುಕೊಳ್ಳುತ್ತಾಳೋ ಪಾಪ? ಅಲ್ವಾ?

    ಅಂದಹಾಗೆ ನನ್ನ ಬ್ಲಾಗಿಗೂ ಬನ್ನಿರಿ ಒಮ್ಮೆ.

    ReplyDelete
  3. Banavasi SomashekharJuly 16, 2012 at 4:26 AM

    ಕವಿತೆ ಸುಂದರ.ಪ್ರೀತಿಯ ಹಾಡು ಚನ್ನಾಗಿ ಅಭಿವ್ಯಕ್ತಿಯಾಗಿದೆ.

    ReplyDelete
  4. tumbaa chenaagide:

    ReplyDelete
  5. Nagarathna RevathiJuly 19, 2012 at 5:16 AM

    ella hendatiyara paadu ide... adare idanna adhege obba ganda bareda annode sojiga

    ReplyDelete
  6. R Raghavendra Padmashaliಅವರೇ ನಿಮ್ಮ ಪತ್ನಿ ಬರೆದುಕೊಟ್ಟದ್ದನ್ನು ಹಾಕಿದ್ದೀರೇನ್ರೀ? ಕೃತಿಚೌರ್ಯ!! :D :):)

    ReplyDelete
  7. ಪ್ರೀತಿ ಕವಿತೆ ಸುಂದರ !!

    ReplyDelete
  8. Sathish D RamanagaraJuly 19, 2012 at 5:19 AM

    ಕವಿಪುಂಗವನನ್ನು ಕಟ್ಟಿಕೊಂಡ ಹೆಣ್ಣಿನ ಪಾಡು ಚನ್ನಾಗಿ ಚಿತ್ರಿತವಾಗಿದೆ. . ಮತ್ತಷ್ಟು ಒಲವನ್ನು ತುಂಬಿ ಬರೆಯಿರಿ. ಮೋಹಕವಾಗುವುದು ಕವನ.

    ReplyDelete
  9. ಮತ್ತೊಮ್ಮೆ ಖಂಡಿತಾ ಪ್ರಯತ್ನಿಸುತ್ತೇನೆ ಪುಷ್ಪಣ್ಣ. ಧನ್ಯವಾದಗಳು Pushparaj Chauta

    ReplyDelete
  10. ಧನ್ಯವಾದಗಳು ಮಿತ್ರ Banavasi Somashekhar, Paresh Saraf

    ReplyDelete
  11. Geetha SrinivasamurthyJuly 19, 2012 at 5:20 AM

    Ragavendra avare,
    Nimma hadu chennagide

    - geetha

    ReplyDelete
  12. Nataraju Seegekote MariyappaJuly 19, 2012 at 5:21 AM

    ರಾಘಣ್ಣ, ಸೂಪರ್ :))

    ReplyDelete
  13. ಪತ್ನಿ ಪಾಪ ಎಷ್ಟೇ ಬೈದುಕೊಂಡರೂ.... ಗಂಡನ ಕಾವ್ಯ ಮೋಡಿಯಿಂದಲೇ ಎಲ್ಲವನೂ ಮರೆತು.... ತಾನೇಷ್ಟು ಸುಖಿ ಎಂದುಕೊಳ್ಳೋದಂತು ಖಚಿತ ಅನ್ಸುತ್ತೆ ಸರ್. ಏನಂತೀರಾ. ನಿಮ್ಮ ಕಾಮೆಂಟಿಗೆ ಧನ್ಯವಾದಗಳು Badarinath Palavalli ಸರ್..

    ReplyDelete
  14. Badarinath PalavalliJuly 19, 2012 at 5:28 AM

    Hahaha :-)

    ReplyDelete
  15. ಧನ್ಯವಾದಗಳು ನಟರಾಜಣ್ಣ...

    ReplyDelete
  16. ತುಂಬಾ ಚೆನ್ನಾಗಿದೆ ಅಣ್ಣಾ... ಅತ್ತಿಗೆಯ ಪಾಡು.

    ReplyDelete
  17. ಚೆನ್ನಾಗಿದೆ.. ಕವಿಗಳೇ ಹಾಗೆ,.. ದಣಿದವರ ಮನತಣಿಸುವುದೇ ಅವರ ಕಾರ್ಯ..

    ReplyDelete
  18. ಕಲೆಗಾರಿಕೆ ಹಿಡಿಸಿತು.

    ReplyDelete
  19. ಸುಂದರವಾದ ನಿರೂಪಣೆ ..

    ReplyDelete
  20. ಕವಿತೆ ಹಿಡಿದಿಟ್ಟ ರೀತಿ ಸೊಗಸಾಗಿದೆ...

    ReplyDelete
  21. ಕವಿತೆಗೆ ಎರಡು ವಿರುದ್ಧವಾದ ಮುಖಗಳಿವೆ, ಅವುಗಳನ್ನು ಸಶಕ್ತವಾಗಿ ಸಮ್ಮಿಳಿಸಿದ್ದೀರಿ.. ನನಗೆ ಬೇರಾವುದೂ ಗೋಚರಿಸದಂತೆ ಕವಿಮನದ ಗಂಡನ ಮೆಲುನುಡಿಗೆ ಮನಸೋತು ದಣಿದು ಬಸವಳಿದ ನೋವನ್ನು ಮರೆತ ಆ ಹೆಣ್ಣುಮಗಳ ಚಿತ್ರಣ ಮನದಲ್ಲೇ ಅಚ್ಚೊತ್ತಿಸಿತು ಕವಿತೆ.. ಚೆನ್ನಾಗಿದೆ ಕವಿತೆ..:)))

    ReplyDelete
  22. Narasimha murthy padmashaliJuly 19, 2012 at 5:32 AM

    R Raghavendra Padmashali pls publish it

    ReplyDelete
  23. Thank U very Much .. Geetha Sreenivasamurthy madem..

    ReplyDelete
  24. chennagide nimma padagala jaadu, bhavanegala haridaadu

    ReplyDelete
  25. ನನಗಂತೂ ನಗು ಬಂತು.. ಕವಿತೆ ಓದಿ. ತುಂಬಾ ಚೆನ್ನಾಗಿದೆ..... ನಿಮ್ಮ ಮನದನ್ನೆಯ ಪಾಡು....

    ReplyDelete
  26. he yenu raghu idhela experiance hegaythu nimage;
    thumba experiance padedhu baridhiro hagidhe thumba chennagide

    ReplyDelete