Wednesday, July 18, 2012

ಕಾಯಬೇಡ ಗೆಳತಿ...


ನನ್ನ ಕನಸುಗಳಿಗಾಗಿ ನೀ 
ಪದೆ ಪದೇ ಕಾಯಬೇಡ ಗೆಳತಿ... 

ಒಂದೇ ಒಂದು ಸಾರಿ ... 
ಸುರಿವ ಸೋನೆ ಮಳೆಗೆ ಮುಖವೊಡ್ಡಿ ನಿಲ್ಲು... 
ಸಾಕೆನಿಸುವಷ್ಟು ಮುತ್ತುಗಳ ಕೊಡುವೆ.. 

ನಗುವ ಚಂದ್ರಮನ ಒಮ್ಮೆ.. 
ಕದ್ದು ನೋಡು. ಆ ಬೆಳಕಾಗಿ 
ನಿನ್ನ ಕೆನ್ನೆಯಲಿ ನಲಿದಾಡುವೆ. 

ರಾತ್ರಿಯೂ ನಗುವ ಪಾರಿಜಾತದ 
ಪರಿಮಳವಾಗಿ ನಿನ್ನ ಮುಡಿಯೇರಲು
ಚೆಲುವೆ  ನಾ... ಕಾಯುತಿರುವೆ.. 

ಮತ್ತೆ ಹೇಳುವೆ..ಗೆಳತಿ..ನಾನು..
ನನ್ನ ಕನಸುಗಳಿಗಾಗಿ ನೀ 
ಪದೆ ಪದೇ ಕಾಯಬೇಡ ಗೆಳತಿ... 
" ನಿನ್ನ ಎದೆಯಲ್ಲಿ ನಾ ಸದಾ ನಗುತಿರುವೆ..."



21 comments:

  1. ನಗುವ ಚಂದ್ರಮನ ಒಮ್ಮೆ..
    ಕದ್ದು ನೋಡು. ಆ ಬೆಳಕಾಗಿ
    ನಿನ್ನ ಕೆನ್ನೆಯಲಿ ನಲಿದಾಡುವೆ. tumba chennagide nimma kavana

    ReplyDelete
  2. who is waiting bhayya??? very nice composition :)

    ReplyDelete
  3. sogasaagide sahodara nimma kavana....

    ReplyDelete
  4. ಸುಂದರ ಕವನ., ಪ್ರೀತಿ ಕೇವಲ ದೇಹಕ್ಕಲ್ಲ., ದೇಹಾಕರ್ಷಣೆಯನ್ನು ಮೀರಿದ್ದು ಎಂಬುದನ್ನು ನಿಮ್ಮ ಕವಿತೆ ಒಪ್ಪವಾಗಿ ಬಿಂಬಿಸುತ್ತಿದೆ..!!

    ReplyDelete
  5. Abdul Sattar KodaguJuly 19, 2012 at 4:49 AM

    ಸುಂದರ. ಕವಿತೆ ತೇಲಾಡಿಸುತ್ತಿದೆ!

    ReplyDelete
  6. ತುಂಬಾ ಸುಂದರವಾಗಿದೆ

    ReplyDelete
  7. good one..

    ReplyDelete
  8. TnQ mitra... A R Sachin Bhat, Ram Prasad

    ReplyDelete
  9. TnQ... Ambika Bv... n.. Jyothi Balkur

    ReplyDelete
  10. thumba chanda untu nimma kavana.... R Raghavendra Padmashali

    ReplyDelete
  11. Geetha SrinivasamurthyJuly 19, 2012 at 4:51 AM

    nimma gelathi kavana chennagide

    ReplyDelete
  12. Shwetha Hoolimath ಧನ್ಯವಾದಗಳು..

    ReplyDelete
  13. ಧನ್ಯವಾದಗಳು ಗೆಳೆಯ Abdul Satthar Kodagu

    ReplyDelete
  14. ಬರಿ ದೇಹವನ್ನು ಇಷ್ಟಪಟ್ಟು ಪ್ರೀತಿಸಿದರೆ ಅದು ಮೋಹವಷ್ಟೇ. ಅಂತರಂಗದಲ್ಲಿ ಅಡಗಿ ಪದೆ ಪದೆ ಕಾಡುವ ಭಾವನೆಗಳಿಗೆ ನಾವು ಪ್ರೀತಿ ಎನ್ನಬಹುದು. ಧನ್ಯವಾದಗಳು ಮಿತ್ರ Pramod Pammi

    ReplyDelete
  15. kalpane no kalpana no gotilla bahala chanagi feel madi kondira sir"

    ReplyDelete
  16. wow thumba chennagidhe olle romantic song

    ReplyDelete