Wednesday, August 15, 2012

ಅವಳದೇ ಕನಸು..


ನಗುವ ಮಲ್ಲಿಗೆಯ ಕಂಪಿನಲಿ.. 
ಮನಸು ಮುದಗೊಂಡು ಮಲಗಿತ್ತು... 
ನೆಮ್ಮದಿಯ ನಿದಿರೆಗೆ ಜಾರಲು
ಮನಸು ನಿರ್ಧರಿಸಿತ್ತು.
ಈ ಮಲ್ಲಿಗೆಯು ಆ ಸೂರ್ಯನ 
ಕಿರಣಗಳಿಗೆ ಅರಳುವ ತನಕ. 

ಯಾವ ಕ್ಷಣದಲ್ಲೋ ಏನೋ.. ಕಾಣೆ. 
ತುಸು ತಂಗಾಳಿ ಬೀಸಿ.. ಮೈ ತಾಕಿ 
ಮನಸೆಲ್ಲಾ ಪ್ರಫುಲ್ಲವಾಯ್ತು.. 
ಆ ಬೆಳದಿಂಗಳ ತೇರಿನಲ್ಲಿ.. 
ತಾರೆಗಳ ನಡುವಲ್ಲಿ.. ಚಂದಿರನೆಡೆಗೆ 
ಅವಳ ಕನಸುಗಳ ಮೆರವಣಿಗೆ ಹೊರಟಿತ್ತು. 
ನನ್ನ ನಿದಿರೆಯ ಕೆಡಿಸಿ, ಸುಮ್ಮನೆ 
ಮುಗುಳ್ನಗೆ ನಕ್ಕು.. ಬಿಡದೆ ಕಾಡಿಸಿತ್ತು. 

ನಗುವಿನ ಅಲೆಯ ಸುಳಿಗೆ ಸಿಲುಕಿ ಮನ 
ಅವಳ ಹಿಂದೆ ಗಿರಗಿರನೆ ತಿರುಗುತಿತ್ತು. 
ಮಿಂಚಿ ಮಾಯವಾಗುವ ಅವಳ ರೂಪ
ನಗುತಿರುವ ಮಲ್ಲಿಗೆಯ ಪರಿಮಳ ಸೇರಿತ್ತು. 
ನಿದಿರಾದೇವಿಯ ಜೋಗುಳಕೆ ಮಲಗಲು 
ಬಿಡದೆ ಆ ಕನಸು ಪದೆಪದೇ ಸುಳಿಯುತ್ತಿತ್ತು.. 



20 comments:

  1. ಕನಸ್ಸಿನಲ್ಲಿ ಬಂದಾಕೆ ಮತ್ತೆ ನನಸಲು ಸಾಕ್ಷಾತ್ಕರಿಸಲಿ ಎಂದು ಆಶಿಸುತ್ತೇವೆ.

    ReplyDelete
  2. ದಿನವೂ ಅವಳದೇ ಕನಸು ಬರಲಿ, ಕನಸಿನಲ್ಲಾದರೂ ಮಲ್ಲಿಗೆ ಹೂವಿನ ಬೆಲೆ ಹೆಚ್ಚದಿರಲಿ....

    ReplyDelete
  3. ಚೆನ್ನಾಗಿದೆ... :)

    ReplyDelete
  4. Sogasada salu galu

    ReplyDelete
  5. ಆ ಕನಸಿಗೊಂದು ರೂಪ ಕೊಡಬಾರದೇ......

    ReplyDelete
  6. ಕನಸಿನ ಕನ್ಯೆ .. ಕೈ ಹಿಡಿಯಲಿ.. ಬಾಳು ಬೆಳದಿಂಗಳಾಗಲಿ .. ಸುಂದರವಾದ ಕವಿತೆ

    ReplyDelete
  7. ಧನ್ಯವಾದಗಳು ಮಿತ್ರ Krishna Murthy & Shwetha Hoolimath

    ReplyDelete
  8. ಸತೀಶ್ ಡಿ. ಆರ್. ರಾಮನಗರAugust 24, 2012 at 11:03 PM

    ಒತ್ತಿ ಕರವನ್ನು ಎತ್ತಿ ಶಿರವನ್ನು ಮುತ್ತನಿಡುವೆನು ಕೆನ್ನೆಗೆ, ತುಟಿಗೆ , ತಾವರೆಗಣ್ಣಿಗೆ. ಇತ್ತ ಭಾಷೆಯ ನೆನೆದು ಬರುವೆಯ..? ' ಸಂಜೆಯಾಗುವುದೆಂದಿಗೆ..?' ಕೆ ಎಸ್ ನ ರವರ ಕವಿತೆ ನೆನಪಿಗೆ ತಂತು.

    ReplyDelete
  9. ನಿದೆರೆಯನು ಜಾಲಾಡಿದ ಸುಂದರ ಕನ್ಯ...ಕವನ ಚೆನ್ನಾಗಿದೆ ಮಿತ್ರ..

    ReplyDelete
  10. ಮಲ್ಲಿಗೆ ಹೂವಿನಂತವಳು ಮತ್ತೆ ಮತ್ತೆ ಬರುತಿರಲಿ. ಕವನ ಮೂಡುತಿರಲಿ.

    ReplyDelete
  11. Geetha SrinivasamurthyAugust 24, 2012 at 11:05 PM

    Mallige hadu bahala chennagide

    ReplyDelete
  12. Beautiful imagination

    ReplyDelete
  13. Narendra Kumar KabbinaleAugust 24, 2012 at 11:06 PM

    ಕನವರಿಸಿ ಮಲಗಿದರೂ ಮತ್ತೆ ಮೂಡುವ ಸೂರ್ಯ ಕಿರಣ ಕೆನ್ನೆ ಸವರಿ ಅವನ ಬಿಸಿ ತಾಗುವಂತೆ ಮಾಡಿದನೇ.?? ಚೆನ್ನಾಗಿದೆ.

    ReplyDelete
  14. ಧನ್ಯವಾದಗಳು ಮಿತ್ರರೆಲ್ಲರಿಗೂ.... Ashoka BA, ಸತೀಶ್ ಡಿ.ಆರ್.ರಾಮನಗರ, Chinmay Mathapati, Badarinath Palavalli, Manjunatha Maravanthe

    ReplyDelete
  15. ಈ ಕನಸುಗಳೇ ಹೀಗೆ. ಅವಳದೇ ಕನವರಿಕೆಯನು ಮರುಪ್ರಸಾರ ಮಾಡುತ್ತವೆ. ಚೆನ್ನಾಗಿದೆ

    ReplyDelete
  16. ಚೆನ್ನಾಗಿದೆ... ಕವಿತೆಯ ಪಾದ(ಸಾಲು)ಗಳ ಅಂತ್ಯದಲ್ಲಿ ತಿರುಗುತ್ತಿತ್ತು, ಸೇರಿತ್ತು, ಬರುತ್ತಿದ್ದಾನೆ, ಹೋಗುತ್ತಿದ್ದಾನೆ - ಈ ರೀತಿಯ ಸಡಿಲ ಪದಗಳನ್ನು ನಿಯಂತ್ರಿಸಿದರೆ ಸಾಲುಗಳು ಇನ್ನೂ ಬಿಗಿಯಾಗುತ್ತವೆ. (ಈ ಸಲಹೆ ನಾನು ನನಗೆ ಹೇಳಿಕೊಂಡಂತೆ... ) :)

    ReplyDelete