ಬಾನಲ್ಲಿ ಕೆಂಪಾದ ಸೂರ್ಯನ ಕಾಂತಿ ನೀನು,
ಭುವಿಯಲ್ಲಿ ಕಂಗೊಳಿಸುವ ಹಸಿರಿನ ಸಿರಿ ನೀನು,
ಹಗಲಲ್ಲಿ ನಗುವ ಸುಮದ ಪರಿಮಳ ನೀನು,
ಇರುಳಲ್ಲಿ ಹೊಳೆವ ಚಂದ್ರಮನ ಬೆಳಕು ನೀನು.
ಕನಸಲ್ಲಿ ನನ್ನ ಸೆಳೆದ ಕಾವ್ಯಕನ್ನಿಕೆ ನೀನು,
ಮನದಲ್ಲಿ ಸದಾ ನಗುವ ಬೇಲೂರ ಶಿಲಾಬಾಲಿಕೆ ನೀನು,
ಕಣ್ಣಲ್ಲಿ ಕ್ಷಣಮಾತ್ರದಿ ಸೆಳೆದೆ ನನ್ನನು ನೀನು,
ನನ್ನಲ್ಲಿ ನಿನಗೆ ಮುತ್ತಿಡುವಾಸೆ ಹೆಚ್ಚಾಗಿದೆ ಇನ್ನು.
ನಿನ್ನಲ್ಲಿ ನನ್ನ ಸೇರುವಾಸೆ ಮೂಡುತ್ತಿಲ್ಲವೇನು,
ನಾನಿಲ್ಲಿ ನಿನ್ನ ಬರುವಿಕೆಗಾಗಿ ಕಾದಿರುವೆನು ಇನ್ನು,
ಕನಸಲ್ಲಿ ನಮ್ಮ ಪ್ರಣಯಗೀತೆ ಹಾಡುತಿಹೆ ಇನ್ನು,
ನನಸಲ್ಲಿ ಒಮ್ಮೆ ನಿಜವಾಗಿಸು ಚೆಲುವೆ ನೀನಿನ್ನು..
ನಿಮ್ಮೊಳಗಿನ ಒಲವು ಚೆನ್ನಾಗಿದೆ
ReplyDeleteನೀನು ಎಂಬ ಕವಿತೆ ಕವಿಯ ಕಲಾತ್ಮಕತೆಗೆ ಸಾಕ್ಷಿಯಾಗಿದೆ
ReplyDeleteಇನಿತು ಸಕ್ಕರೆಯಿಂದ ಬರೆಸಿಕೊಂದ ಆಕೆ ಇನ್ನೆಂತ ಅಪರಿಮಿತ ಚಲುವೆ ಇದ್ದಿರಬಹುದು? ಒಲುಮೆ ಸಾಕ್ಷಾತ್ಕಾರವಾಗಲಿ.
ReplyDeleteಸರಸ್ವತಿ ಊವಾಚ : "ತಥಾಸ್ತು!"
ಕವನ ಚೆನ್ನಾಗಿದೆ... ಮನದ ಆಸೆಗಳೆಲ್ಲಾ ಸಾಲುಗಳಾಗಿವೆ.. ಈಡೇರಲಿ ಎಲ್ಲವೂ ಅತಿ ಶೀಘ್ರದಲಿ
ReplyDeleteಚೆಲುವೆಗೆ ಕೇಳಿಸಲಿ ನಿಮ್ಮ ಭಾವ......
ReplyDeleteಕವನ ಚೆನ್ನಾಗಿದೆ
ReplyDeleteಚೆನ್ನಿದೆ. 'ಒಲವು' ಸಹಜ ಮತ್ತು ಅದು ಕಾವ್ಯಕ್ಕೆ ಚಿರಂತನ ವಸ್ತು.
ReplyDeleteಉತ್ತಮ ... ಒಲವ ಧಾರೆ ಹೀಗೆ ಹರಿಯಲಿ
ReplyDelete