Friday, November 25, 2011

ಓ ಮಲ್ಲಿಗೆ



ಓ ಮಲ್ಲಿಗೆ, ನೀ ಮೆಲ್ಲಗೆ
ಬಾಡುತಿರುವೆ ಯಾಕೆ..?
ನಿನ್ನ ಮುಡಿಯಲು ನನ್ನ
ರಾಣಿಯಿಲ್ಲವೆಂದು ಕೊರಗುವೆಯೇಕೆ..?
ಚಿಂತೆ ಮಾಡದಿರು ಮಲ್ಲಿಗೆ,
ನನ್ನವಳು ಬರುವಳು ತಪ್ಪದೆ
ಮುಂದಿನ ಹುಣ್ಣಿಮೆಯೊಳಗೆ..!!

ಓ ತಿಂಗಳೇ, ಬೆಳದಿಂಗಳೇ,
ನೀ ಮೋಡದ ಮರೆಯದೆಯೇಕೆ..?
ನನ್ನ ಹೃದಯದ ಪಟ್ಟದ ರಾಣಿ,
ಇರುವಳು ತವರೂರಿನಲಿ,
ಅವಳಿಗೆ ಪದೆಪದೆ ನನ್ನದೇ ಕನವರಿಕೆ.
ಮಲಗಿಸು ಅವಳನ್ನು ಹೇ ಚಂದ್ರಮ,
ನನ್ನ ಕನಸುಗಳೇಲ್ಲವನೂ ಹೊತ್ತು
ಹೊದಿಸಿ, ನೀನಾಗು
ಬೆಳದಿಂಗಳ ಹೊದಿಕೆ.

ಯಾಕಾದರೂ ಬಂದಿತೋ,
ಈ ಆಷಾಡ ಮಾಸ.
ನನ್ನವಳು ಇರದ ಮನೆ,
ಈಗ ಅದಾಗಿದೆ ಕಾಲಕಸ.
ಮನ್ಮಥನ ಶಾಪವೋ ಏನೋ,
ತಾಳಲಾರೆ ನಾ ಈ ವಿರಹ.
ಕಾಯಿಸದಿರು ನಲ್ಲೆ ಇನ್ನು,
ಬೇಗ ಬಂದುಬಿಡು ಸನಿಹ.



27 comments:

  1. ತುಂಬಾ ಚೆಂದದ ಕವಿತೆ

    ReplyDelete
  2. Nijakkoo chennagide., Chandiranige heltiralla .. adu kooda tumba lovley agide...

    ReplyDelete
  3. very nice .......o malli ge nanage istavaayithu..

    ReplyDelete
  4. ಆ ಹುಣ್ಣಿಮೆ ಬೇಗ ಬರಲಿ... ಚೆನ್ನಾಗಿದೆ ಗೆಳೆಯಾ

    ReplyDelete
  5. ಒಂದು ತಿಂಗಳು ಸಹಿಸಲಾಗದೆ ....ಇಷ್ಟೊಂದು ಪ್ರೀತಿಸಲ್ಪಡುವ ಅವಳಂತೂ ಪುಣ್ಯವಂತೆ

    ReplyDelete
  6. ಓಹೋ ನಿಮಗೆ ಒಂದು ತಿಂಗಳು ಸಹಿಸಲಾಗದೆ ..!
    .ಇಷ್ಟೊಂದು ಪ್ರೀತಿಸಲ್ಪಡುವ ಅವಳಂತೂ ಪುಣ್ಯವಂತೆ......ಕವಿತೆ ತುಂಬಾ ಚೆಂದವುಂಟು ರಾಘಣ್ಣ

    ReplyDelete
  7. Vasanth EshwaragereMarch 25, 2012 at 11:27 PM

    nice kavana geleya.... kp it up....

    ReplyDelete
  8. ಮಲ್ಲಿಗೆಯ ಪರಿಮಳ ಹೆಚ್ಚೆಚ್ಚು ಪಸರಿಸಲಿ ನಿಲುಮೆಯಲ್ಲಿ:)
    ನನ್ನ ಕನಸುಗಳೇಲ್ಲವನೂ ಹೊತ್ತು
    ಹೊದಿಸಿ, ನೀನಾಗು ಬೆಳದಿಂಗಳ ಹೊದಿಕೆ.
    ಸುಂದರ ಸಾಲುಗಳು :)

    ReplyDelete
  9. ತುಂಬಾ ಸುಂದರವಾಗಿದೆ.. :) :)

    ReplyDelete
  10. Sathish D.R.RamanagaraMarch 25, 2012 at 11:28 PM

    ನಿಮ್ಮ ಮನದ ಭೇಗುದಿ ಚನ್ನಾಗಿ ವ್ಯಕ್ತವಾಗಿದೆ. ಮತ್ತಷ್ಟು ಗಂಭೀರವಾಗಿ ಬರೆಯುವುದಕ್ಕೆ ಪ್ರಯತ್ನಿಸಿ. ಶುಭವಾಗಲಿ.

    ReplyDelete
  11. ವಸಂತದಾಗಮನದ ಹೊಸ್ತಿಲಲ್ಲಿ ನಿಮ್ಮೀ ಮನದ ಬೇಗುದಿ ಕಳೆದು ಹಸಿರು ಚಿಗುರಲಿ ಬದುಕಲಿ. ಚೆನ್ನಾಗಿದೆ ಭಾವಸ್ಪುರಣ ರಾಘವೇಂದ್ರ.

    ReplyDelete
  12. ಖಂಡಿತಾ.. ಪ್ರಯತ್ನಿಸುತ್ತೇನೆ.. ಪ್ರಯತ್ನಿಸುತ್ತಲೇ ಇರುತ್ತೇನೆ... ಧನ್ಯವಾದಗಳು ಮಿತ್ರ ಸತೀಶ್ ಡಿ.ಆರ್.ರಾಮನಗರ.

    ReplyDelete
  13. ಧನ್ಯವಾದಗಳು ಮಿತ್ರ.. Vasantha B Eshwaragere... ಮತ್ತು ಕನ್ನಡ ಬಳಸಿದ್ದಕ್ಕೂ ಮತ್ತೊಂದು ಧನ್ಯವಾದಗಳು... ಕನ್ನಡ ಬಳಸಿ.. ಕನ್ನಡ ಉಳಿಸಿ.

    ReplyDelete
  14. ಪುಣ್ಯವಂತೆ ಇರಬಹುದೇನೋ... ಧನ್ಯವಾದಗಳು... Pramod Shetty

    ReplyDelete
  15. ಹುಣ್ಣಿಮೆಗಿಂತ ಮುಂಚೆ .. ನನ್ನವಳು ಸಿಗಲಿ.. ಧನ್ಯವಾದಗಳು ಗೆಳೆಯ Hussain Muhammed...

    ReplyDelete
  16. Prashanth P KhatavakarMarch 25, 2012 at 11:30 PM

    ತುಂಬಾ ಚೆನ್ನಾಗಿದೆ.. ಕೆಲವು ಪದಗಳಲ್ಲಿ ಬದಲಾವಣೆ ಮಾಡಿ ಇದನ್ನು ಸುಂದರ ಹಾಡಾಗಿ ಮಾಡಬಹುದು.. ಸ್ವಲ್ಪ ಪ್ರಯತ್ನ ಮಾಡಿ.. ನಿಮಗೆ ಶುಭವಾಗಲಿ.. :)

    ReplyDelete
  17. ಅನುರಾಗದ ಭಾವ., ನಿಮ್ಮ ಸಾಲುಗಳಲ್ಲಿ ಅಕ್ಷರಗಳಾಗಿ ಅನುವಾದವಾಗಿದೆ.. ತುಂಬಾ ಹಿಡಿಸಿತು., ಹೀಗೇ ಬರೆಯುತ್ತಿರಿ.., ಶುಭವಾಗಲಿ..

    ReplyDelete
  18. ಏನೀ ವಿರಹ ವೇದನೆ,
    ಬರೀ ನೋವ ಯಾತನೆ.
    ಚೆನ್ನಾಗಿದೆ. ಪುಣ್ಯಾ ಮಾಡಿದ್ದಾಳೆ ನಿಮ್ಮಾಕೆ.

    ReplyDelete
  19. ನಿಮ್ಮ ಹಾರೈಕೆಗೆ ಧನ್ಯವಾದಗಳು.. ಗೆಳೆಯ Pramod Pammi

    ReplyDelete
  20. ಧನ್ಯವಾದಗಳು Prashanth P Khatavakar.. ಈಗಾಗಲೇ... ನಾನೇ ಸ್ವತಃ ಸಂಗೀತ ಕಾಂಪೋಸ್ ಮಾಡಿ, ಹಾಡಲು ಕೂಡ ಪ್ರಯತ್ನ ಮಾಡಿದ್ದೇನೆ. ಸಧ್ಯದಲ್ಲೆ ಅವುಗಳನ್ನು ಎಂ.ಪಿ3 ಆಡಿಯೋ ಫೈಲ್ ಗಳನ್ನು ಅಪ್ ಲೋಡ್ ಮಾಡುತ್ತೇನೆ. ಧನ್ಯವಾದಗಳು ಮತ್ತೊಮ್ಮೆ...

    ReplyDelete
  21. ಕವಿತೆ ಮೆಚ್ಚಿದ ತಮಗೆ ಧನ್ಯವಾದಗಳು Manju HP

    ReplyDelete
  22. ಧನ್ಯವಾದಗಳು ಪುಷ್ಪಣ್ಣ.. Pushparaj Chauta

    ReplyDelete
  23. ಮೊದಲೆರಡು ಸಾಲುಗಳೇ ಪದಪುಂಜಗಳ ಸಂಜಸವಾಗಿದೆ :)

    ReplyDelete