Tuesday, September 18, 2012

ನಿನ್ನೆದೆಯಲಿ ಧೈರ್ಯವೇ ತುಂಬಲಿ.



ನಿನ್ನೆದೆಯಲಿ ಧೈರ್ಯವೇ ತುಂಬಲಿ.. 
ಮನದಾ ಅಳುಕು ದೂರವಾಗಲಿ..
ನೀನೊಮ್ಮೆ ಕೇಳು ನನ್ನ ಮಾತನ್ನ.

ಪ್ರಯತ್ನಾ ಮಾಡಿಯೂ ಸೋತರೆ ಸಾಲದು,
ಮತ್ತೆ ಮತ್ತೆ ಗೆಲ್ಲುವ ಕನಸು ಕಾಣಬೇಕಿಲ್ಲಿ.
ಸೋಲಿಗೂ, ಗೆಲುವಿಗೂ ಅಂತರ ಸಣ್ಣದು,
ಪಡೆದಂತ ತಾಳ್ಮೆ ದಾರಿದೀಪ, ಸೋಲಿನ ಅನುಭವ. 

ನಿನ್ನೆದೆಯಲಿ ಧೈರ್ಯವೇ ತುಂಬಲಿ.. 
ಮನದಾ ಅಳುಕು ದೂರವಾಗಲಿ..
ನೀನೊಮ್ಮೆ ಕೇಳು ನನ್ನ ಮಾತನ್ನ.

ಸೋತರೆ ನೋವಿದೆ; ಗೆದ್ದರೆ ನಲಿವಿದೆ
ಸೋತು ಗೆದ್ದರೆ, ಆ ಗೆಲುವು ದೊಡ್ಡದೇ. 
ನೋವಿನ ದಾರೀಲಿ ಬಳಲಿದ ಜೀವಕೆ
ನಿನ್ನ ಹರಸುವ ಮನಸೇ ದೈವವು. 

ಅಮ್ಮನಾ ಕಂಗಳು ಕಂಬನಿ ಸುರಿಸುತ,
ತಾಯ ವರವಾಗಿ ಮೌನದಲ್ಲೇ, ನಮ್ಮನು ಹರಸುತ. 
ಸೋಲನು ಬಯಸದೆ ಮಾಡಿದ ಯತ್ನವು,
ಮೊದಲ ಗೆಲುವಿನ ಸಾರ್ಥಕತೆಯ ಸಂತಸ ತರುವುದು. 

ನಿನ್ನೆದೆಯಲಿ ಧೈರ್ಯವೇ ತುಂಬಲಿ.. 
ಮನದಾ ಅಳುಕು ದೂರವಾಗಲಿ..
ನನ್ನಾಣೆ ಮತ್ತೆ ನೀನು ಸೋಲಲ್ಲ... 
ನನ್ನಾಣೆ ಮತ್ತೆ ನೀನು ಸೋಲಲ್ಲ... 

[ "ಮುಸ್ಸಂಜೆ ಮಾತು" ಚಿತ್ರದ "ಏನಾಗಲಿ ಮುಂದೆ ಸಾಗು ನೀ" ಎಂಬ ಹಾಡಿಗೆ 
ಕಸ್ತೂರಿ ವಾಹಿನಿಯ "ಹೃದಯ ಗೀತೆ ಬರೆದೆ ನೀನು" ಎಂಬ ಕಾರ್ಯಕ್ರಮದಲ್ಲಿ 
ನಾನು ಬರೆದ ಹೊಸ ಸಾಹಿತ್ಯ..]

8 comments:

  1. sogasaagide kavana....

    ReplyDelete
  2. Bhagirathi ChandrashekarNovember 2, 2012 at 12:28 AM

    ಚೆನ್ನಾಗಿತ್ತು...ಶುಭವಾಗಲಿ.

    ReplyDelete
  3. Vidyulatha ShettigarNovember 2, 2012 at 12:28 AM

    " so nice.."

    ReplyDelete
  4. ಅಭಿನಂದನೆಗಳು ರಾಘು , ಕಸ್ತೂರಿ ವಾಹಿನಿಯಲ್ಲಿ ಪ್ರಸಾರವಾದ 'ಹೃದಯ ಗೀತೆ ಬರೆದೆ ನೀನು' ಕಾರ್ಯಕ್ರಮದಲ್ಲಿ ನೀವು ಬರೆದಿರುವ 'ಮುಸ್ಸಂಜೆ ಮಾತು' ಚಿತ್ರದ 'ಏನಾಗಲಿ' ಎಂಬ ಹಳೇ ರಾಗಕೇ ಹೊಸ ಸಾಲು ತುಂಬಾ ಚನ್ನಾಗಿಯೇ ಪದಗಳನ್ನು ಪೋಣಿಸಿದ್ದಿರಿ , ಫೀಮೆಲ್ ವರ್ಶನ್ ನಲ್ಲಿ ಹಾಡು ಹಾಡಿಸಿದ್ದೆ ಪ್ಲಸ್ ಪಾಯಿಂಟ್ ಆಯಿತು ಹಾಗೂ ನಿಮ್ಮ ಸಾಲುಗಳಿಗೆ ಜೀವ ತುಂಬಿದ್ದು ಆ ಗಾಯಕಿಯ ಅದ್ಬುತ ಗಾಯನ , ಇನ್ನಷ್ಟು ಅಭ್ಯಾಸ ಅವಶ್ಯವಿದೆ ಎಂದು ನನಗನಿಸಿತು , ಚುಟುಕು ಬಳಗದ ವತಿಯಿಂದ ನಿಮಗೆ ಶುಭಾಷಯಗಳು:)

    ReplyDelete
  5. ಅಭಿನಂದನೆಗಳು ರಾಘು , ಸ್ಪೂರ್ತಿ ಸೆಲೆಯ ಸಾಲುಗಳು ಇಷ್ಟವಾದವು , ಕಸ್ತೂರಿ ವಾಹಿನಿಯಲ್ಲಿ ಪ್ರಸಾರವಾದ 'ಹೃದಯ ಗೀತೆ ಬರೆದೆ ನೀನು' ಕಾರ್ಯಕ್ರಮದಲ್ಲಿ ನೀವು ಬರೆದಿರುವ 'ಮುಸ್ಸಂಜೆ ಮಾತು' ಚಿತ್ರದ 'ಏನಾಗಲಿ' ಎಂಬ ಹಳೇ ರಾಗಕೇ ಹೊಸ ಸಾಲು ತುಂಬಾ ಚನ್ನಾಗಿಯೇ ಪದಗಳನ್ನು ಪೋಣಿಸಿದ್ದಿರಿ , ಫೀಮೆಲ್ ವರ್ಶನ್ ನಲ್ಲಿ ಹಾಡು ಹಾಡಿಸಿದ್ದೆ ಪ್ಲಸ್ ಪಾಯಿಂಟ್ ಆಯಿತು ಹಾಗೂ ನಿಮ್ಮ ಸಾಲುಗಳಿಗೆ ಜೀವ ತುಂಬಿದ್ದು ಆ ಗಾಯಕಿಯ ಅದ್ಬುತ ಗಾಯನ , ಇನ್ನಷ್ಟು ಅಭ್ಯಾಸ ಅವಶ್ಯವಿದೆ ಎಂದು ನನಗನಿಸಿತು , 'ಹಳೇ ರಾಗ ಹೊಸ ಸಾಲು' ಬಳಗದ ವತಿಯಿಂದ ನಿಮಗೆ ಶುಭಾಷಯಗಳು:)

    ReplyDelete
  6. Nimma harake haraikegalige tumbu hrudayada dhanyavadagalu manju varaga ravare. Chitra sahityake egaste entry agta iro hosabaru navu. Prayatna sagutale irute.

    ReplyDelete
  7. ನಿಮ್ಮ ಪ್ರಯತ್ನ ನಿರಂತರವಾಗಿರಲಿ ,ಯಶಸ್ಸು ಕೂಡಾ ನಿಮಗೆ ಒಲಿಯಲಿ , ಇನ್ನಷ್ಟು ಒಳ್ಳೋಳ್ಳೆಯ ರಾಗಕೇ ಸೊಗಸಾದ ಸಾಲುಗಳು ನೀಡಿ , ಒಂದೊಳ್ಳೆ ಹೆಸರು ಮಾಡಿ ಎಂದು ಹಾರೈಸುವೆ , ಚಲನಚಿತ್ರಗಳ ಗೀತೆಗಳ ಅಭ್ಯಾಸಕ್ಕೆ ಮೀಸಲಿಟ್ಟಿರುವ ಈ ಗುಂಪಿನಲ್ಲಿ ಮತ್ತಷ್ಟು ಬರೆದು ನಮ್ಮೊಂದಿಗೆ ಹಂಚಿಕೊಳ್ಳಿ ಶುಭವಾಗಲಿ:)

    ReplyDelete