Sunday, September 23, 2012

ಯಾತಕೆ ಈ ಹೆಣ್ಣಿನ ಜನ್ಮ.. ?


ಯಾತಕೆ ಈ ಹೆಣ್ಣಿನ ಜನ್ಮ.. ?
ದೇವರೇ.. ನನಗ್ಯಾತಕೆ ಈ ಹೆಣ್ಣಿನ ಜನ್ಮ..
ನಿಜ.. ನನಗಂತೂ ಸಾಕಾಗಿ ಹೋಯ್ತು.. ಬರಿ 
ನೋವೆ ಇರುವ, ಹಾಳಾದ ಈ ಹೆಣ್ಣಿನ ಜನ್ಮ..!!

ಬರಿ ಮಗಳೆಂಬ ಕಾರಣಕ್ಕೆ, 
ಅಪ್ಪನ ಪ್ರೀತಿಯು ಸಿಗಲಿಲ್ಲ. 
ಅಮ್ಮನ ಕರುಣೆಯ ಪ್ರೀತಿ, 
ಬಹಳ ದಿನ ಉಳಿಯಲಿಲ್ಲ.. 
ಬರಿ ನೋವುಗಳ ನಡುವೆ, ನಾ
ರಾಜಕುಮಾರಿಯಾಗುವ ಕನಸೂ ಬೀಳಲಿಲ್ಲ. 
ಅದೆಷ್ಟೇ ಸುಧಾರಿಸಿಕೊಂಡರೂ,
ನನ್ನ ಈ ಕಷ್ಟಗಳು ತಪ್ಪಲಿಲ್ಲ. 

ಬಡವರ ಹುಡುಗಿ, ಬಲು ಚೆಲುವೆಯಂತೆ, 
ಈ ಅಂದ ಕಣ್ಣು ಕುಕ್ಕಿದ್ದು ನನ್ನ ತಪ್ಪಲ್ಲ. 
ನಾ ಕಂಡೆ ಪೋಲಿ ಹುಡುಗರಿಗೆ ಅಪ್ಸರೆಯಂತೆ,
ಈ ನೋವುಗಳ ನಡುವೆ, ಹೊಸ ಕಾಟ ಶುರುವಾಯಿತಲ್ಲ. 
ಅಮ್ಮಾ.. ನೀನಾದರೂ ಬದುಕಿರಬಾರದಿತ್ತೆ.., 
ಎಷ್ಟಾದರೂ.. ನಾ ಅಪ್ಪನ ಮುದ್ದಿನ ಮಗನಲ್ಲ. 
ಅದ್ಯಾರೋ ನನ್ನ ಇಷ್ಟ ಪಟ್ಟರಂತೆ,
ಕೊನೆಗೂ, ಆ ಕುಡುಕನ ಜೊತೆ ಮದ್ವೆ ಮುಗೀತಲ್ಲ. 

ಮೊದಮೊದಲು ರಸನಿಮಿಷಗಳ ರಸದಾಟ, 
ಮನಸು ನೆಮ್ಮದಿಯ ನಿಟ್ಟುಸಿರು ಬಿಟ್ಟಿತ್ತಲ್ಲ. 
ಬಣ್ಣ ಬದಲಾದಂತೆ, ಹೆಚ್ಚಾಯ್ತು ಗಂಡನ ರಂಪಾಟ,
ಮತ್ತೆ ನೆಮ್ಮದಿ, ಸೂತ್ರ ಹರಿದ ಪಟದಂತೆ ಹಾರಿತ್ತಲ್ಲ. 
ಪರರಿಗೆ ಒಳಗೊಳಗೇ ಖುಷಿ, ಕಂಡು ನಮ್ಮ ಕಿತ್ತಾಟ. 
ಕಣ್ಣೊರೆಸುವ ನೆಪದಲ್ಲಿ, ಕೆನ್ನೆ ತಾಕಿ ಸುಖಪಡುವ ಕೈಗಳೇ ಎಲ್ಲಾ..

ದಿನ ಉರುಳಿದಂತೆ, ಮೊಗ್ಗು ಹೂವಾಗಿ ಅರಳಿ, 
ಹಾಲನಗೆ ನಗುವ, ಕಂದನು ಹುಟ್ತಿದನಲ್ಲ..
ಮೊಲೆಹಾಲ ಕುಡಿದು, ಅಂಗಳದಿ ಆಡುತ್ತಾ.. 
ಹುಣ್ಣಿಮೆ ಚಂದಿರನಂತೆ ಬೆಳೆದು ದೊಡ್ದವನಾದನಲ್ಲ. 
ಕಾಲ ಸರಿದದ್ದು ಹೇಗೋ ಕಾಣೆ, ನಂಗೆ ಮುಪ್ಪಾಯ್ತು,
ಅವನಾಗಿದ್ದಾನೆ ಈಗ ಚೆಂದುಳ್ಳಿ ಚೆಲುವೆಗೆ ನಲ್ಲ. 

ಅಪ್ಪ-ಗಂಡ-ಮಗನೋಟ್ಟಿಗಿದ್ದು, 
ನಾ ಪಟ್ಟ ಸುಖ ಆರಕ್ಕೆರಲಿಲ್ಲ.. 
ಬಯಸದೆ ಬಂದ ಕಷ್ಟಗಳಿಗೆ, 
ಸುಮ್ಮನೆ ಸೊರಗಿದ್ದು, ಉಪಯೋಗವಾಗಲಿಲ್ಲ. 
ಯಾತಕೆ ಈ ಹೆಣ್ಣಿನ ಜನ್ಮ. 
ನಾ ಸಾಧಿಸಿದ್ದು ಶೂನ್ಯವೇ ಎಲ್ಲಾ..!!! 

36 comments:

  1. tumba chennagide kavana, kasturi TV yalli nimma haaDugaLannu kELiddeve shubavagali

    ReplyDelete
  2. ಸತೀಶ್ ಡಿ. ಆರ್. ರಾಮನಗರSeptember 24, 2012 at 4:38 AM

    ನೀವು ಬರೆದ ಸಾಲುಗಳನ್ನೆಲ್ಲ ಒಂದರ ಪಕ್ಕ ಒಂದರಂತೆ ಸೇರಿಸುತ್ತಾ ಹೋದಲ್ಲಿ ಅದು ಕಥೆಯಾಗುತ್ತದೆ. ಪ್ರಯತ್ನಿಸಿ. ಪದ್ಯ ಗದ್ಯದ ರೂಪಕ್ಕೆ ಬಂದಾಗಲೂ ಅದು ಸಂಪೂರ್ಣ ಕಥೆಯಂತೆ ಗೋಚರಿಸುವುದಿಲ್ಲ. ಒಂದು ಸಾಲು ನೂರಾರು ಅರ್ಥವನ್ನು ಹೇಳುತ್ತದೆ. ಆದರಿಲ್ಲಿ ಕಥೆ ಕವಿತೆಯಾಗಿದೆ. ಶುಭವಾಗಲಿ. ಕಥೆ ಕವಿತೆ ಗದ್ಯದ ಪ್ರಕಾರಗಳ ಬಗ್ಗೆ ಈ ಹಿಂದೆ ಮೋಹನಣ್ಣ ಸಂಪಾದಕೀಯ ಬರೆದಿದ್ದರು. ಅದನ್ನು ಓದಿದಲ್ಲಿ ಈ ರೀತಿಯ ಕೊರತೆಯಲ್ಲಿ ಬದಲಾವಣೆಯನ್ನು ತರಬಹುದು.

    ReplyDelete
  3. ಚೆನ್ನಾಗಿದೆ... ಕವಿತೆಯಲ್ಲಿ ಒಂದೇ ಭಾವವನ್ನು ಹರಡುವಾಗ ಸಾಲುಗಳನ್ನು ಆದಷ್ಟು ಬಿಗಿಗೊಳಿಸುವುದಲ್ಲದೇ, ಕಡಿಮೆಗೊಳಿಸಲು ಯತ್ನಿಸಬೇಕು... ಭಾವ ವಿವಿಧ ಸ್ಥರಗಳಲ್ಲಿ ಕವಲೊಡೆದಾಗ ಕವಿತೆ ಉದ್ದವಾದರೂ ಚೆನ್ನಾಗಿರುತ್ತದೆ... :)

    ReplyDelete
  4. Shrivatsa KanchinamaneSeptember 24, 2012 at 4:39 AM

    ಬರಿ ನೋವುಗಳ ನಡುವೆ, ನಾ
    ರಾಜಕುಮಾರಿಯಾಗುವ ಕನಸೂ ಬೀಳಲಿಲ್ಲ...
    ಇಷ್ಟವಾಯಿತು ಬರಹ...

    ReplyDelete
  5. ಮನ ಮುಟ್ಟುವ ಕವಿತೆ ಸಾರ್...ಯಾಕೋ ಏನೋ ಹೆಣ್ಣನ್ನ ಸಮಾಜ ಮಾತ್ರವಲ್ಲದೆ ಒಡಹುಟ್ಟಿದವರು ಕೀಳಾಗೇ ನೋಡುತ್ತಾರೆಂದು ಮೊದ ಮೊದಲು ನನಗೂ ಅಷ್ಟಾಗೀ ತಿಳಿಯುತ್ತಿರಲಿಲ್ಲ, ಇತ್ತೀಚಿಗೆ ಗಂಡು ಮಗುವೇ ಬೇಕೆಂಬ ಹಟವಾದಿಗಳ ಕಂಡು ದುಃಖವಾಗುತ್ತದೆ. ಹೆಣ್ಣನ್ನ ದೇವಿಯ ಸ್ಥಾನಕ್ಕೆ ಹೊಲಿಸುವವರೂ ನಾವೇ, ಅದೇ ಹೆಣ್ಣನ್ನ ಚಿಮಾರಿ ಹಾಕಿ ಮಾನಭಂಗ ಮಾಡುವವರೂ ನಾವೇ..

    ReplyDelete
  6. ಚೆನ್ನಾಗಿದೆ ಸಾಲುಗಳು.. ಬಡತನದ ಬೇಗೆಯಲ್ಲಿ ಬೆಂದ ಹೆಣ್ಣೊಬ್ಬಳ ಜೀವನದ ಕಥೆ...ವ್ಯೆಥೆ...

    ReplyDelete
  7. ಬಹಳ ಚೆನ್ನಾಗಿದೆ ಕವನ, ಇಲ್ಲಿ ಹೆಣ್ಣು ಸದಾ ದುಡಿಯುವವಳು, ನಲುಗುವವಳು, ನೋವಲ್ಲಿ ಮೀಯುವವಳು, ಎಷ್ಟೋ ಹೆಣ್ಣು ಮಕ್ಕಳ ಕಥೆ ಇದು.. ಒಂದು ರೀತಿ ವ್ಯಥೆ..:(

    ReplyDelete
  8. ಕಣ್ಣೊರೆಸುವ ನೆಪದಲ್ಲಿ, ಕೆನ್ನೆ ತಾಕಿ ಸುಖಪಡುವ ಕೈಗಳೇ ಎಲ್ಲಾ..

    ಹೆಣ್ಣೊಡಲ ಭಾವಗಳ ಬರಹ ಚೆನ್ನ..

    ReplyDelete
  9. ಇಷ್ಟವಾಯ್ತು ಗೆಳೆಯಾ .. ಹೆಣ್ಣಿನ ಮನಸಾಂತರಂಗ!

    ReplyDelete
  10. Thumbha chennaghidhe ಕ mitra

    ReplyDelete
  11. Dhanyvaagalu Varadarajan Gonugur sir..

    ReplyDelete
  12. raghu......hanta hantavaagi obba hennu magala chitra bidisiddera...Chenda ide...:)))

    ReplyDelete
  13. ನಿಜ!!!!ಯಾತಕೆ ಈ ಹೆಣ್ಣಿನ ಜನ್ಮ?. ಮನಸ್ಸಿನ ಎಲ್ಲೋ ಒಂದು ಕಡೆ ತೃಪ್ತಿಯ ಭಾವ.....ಎಲ್ಲ ನೋವನ್ನು ನಿವಾರಿಸುತ್ತೆ....

    ReplyDelete
  14. Dhanyavaadagalu Sunitha Manjunath akka.. & Maha Laxmi akka

    ReplyDelete
  15. Chennagide...ಯಾತಕೆ ಈ ಹೆಣ್ಣಿನ ಜನ್ಮ..??.Nija ommomme haage anisuvudu ashte....hennina janmave ondu uttama janma haagu gourava poorna janmavendu nanna abhipraaya.....:)

    ReplyDelete
  16. Howdu.. sunandakka.. Hennaagi huttode ondu sarthakya. Poojya bhaavane ide. Nimma abhipraayave namma abhipraaya kooda .. Tnx for comment Sunanda Puthran

    ReplyDelete
  17. Howdu ondudu sala haage anisute yatake beku e henina janma anta.....adru hennina janma padeyalu punya madabeku anisute.yekendre ondu ole thaiyagi,magalagi,hendatiyagi,soseyagi,akka thangiyagi yelara jeevanadallu mukya patra vahisutale henu adarinda hennina janma thubha punya madida janma anta nanu andukodidene.

    ReplyDelete
  18. Hennagi huttodu punya... hennagi hutti aa janmakke bele kodade ada moulya kaleyuttiruva .... esto hengasaru iddare.. avara kuritu naanu maatadolla. Nijavaagiyu hennu daivaane.. Thanx for your comment Rajeshwari Satya

    ReplyDelete
  19. tumba chenagide.. superb

    ReplyDelete
  20. Neevu kooda obba kavayatri embudu gottaytu. Danyavaadagalu nimma comment ge.. Ani Gowda

    ReplyDelete
  21. "bahala chennagide:-)"

    ReplyDelete
  22. I anda change to cheluvu.i cheluvu kannu kukiddu..
    naa kande change to nanna kandare, poli delet madidare chanda. I cheluvininda hudugarige naanu apsareyante.
    next 4 lines different meang.

    ReplyDelete
  23. Nimma salahege swagata.. TnQ Harish V R Padmashali

    ReplyDelete
  24. TnQ.. sis... Vidyullatha Shettigar...

    ReplyDelete
  25. good. awe some poem.

    ReplyDelete
  26. helodakke padagale sigta illa, nijavagi anubhavisi barediddiri, tayi priti kaledukondavara novu, hennina kasta anubhavisidavarige gottu, ellaru adella ninna kartavya anta helore jasti hagiruvaga nivu novannu arthaisi barediddiralla hats of to u

    ReplyDelete
  27. Nimma preethi, vishwasa heege irali.. Dhanyvadagalu Nagarathna Bhushan madem.
    a few seconds ago · Like..

    ReplyDelete
  28. ಬಡ ಹೆಣ್ಣಿನ ಕಷ್ಟವನ್ನ ತುಂಬಾ ಚನ್ನಾಗಿ ಹೇಳಿದ್ದೀರಿ

    ReplyDelete
  29. ಧನ್ಯವಾದಗಳು ಮಮತಕ್ಕ Mamatha Keelar

    ReplyDelete
  30. ಅವಸರಕ್ಕೆ ಬರೆದ ಕವಿತೆಯಾದ್ದರಿಂದ.. ವಿಷಯ ತುಂಬಿಸುವ ಭರದಲ್ಲಿ ಕವಿತೆ ಗದ್ಯರೂಪವಾದಂತಿದೆ. ನಿಮ್ಮ ಕಾಮೆಂಟಿಗೆ ಧನ್ಯವಾದಗಳು ಮಿತ್ರರೇ... ಸತೀಶ್ ಡಿ. ಆರ್. ರಾಮನಗರ, Mohan V Kollegal,

    ReplyDelete
  31. ಧನ್ಯವಾದಗಳು ಮಿತ್ರರೇ Shrivatsa Kanchimane, Glany Fernandes, Ashoka BA, Suguna Mahesh, Raghunandan K Hegde, Hussain Muhammed..

    ReplyDelete
  32. ayyoo dodda maatu.. naanu eega bareyalu shuruvina hejjeyanittiruvavalu.. thanks..nimma kavanadalli helida vichara tumba chennagide..

    ReplyDelete
  33. ಹೆಣ್ಣಿನ ಕಷ್ಟಗಳೆಲ್ಲ ವ್ಯಕ್ತವಾಗಿವೆ, ಶುಭವಾಗಲಿ

    ReplyDelete
  34. ಪ್ರೀತಿಯ ಭಾವ ಚೆನ್ನಾಗಿದೆ
    ಇದನ್ನ ಓದಿದ್ದು

    ReplyDelete